ಪೊಲೀಸ್ (ಸಾಂಕೇತಿಕ ಚಿತ್ರ) online desk
ರಾಜ್ಯ

ವಿಜಯಪುರ SBI ಬ್ಯಾಂಕ್ ದರೋಡೆ: ಮಹಾರಾಷ್ಟ್ರದ ಮನೆ ಛಾವಣಿ ಮೇಲಿಟ್ಟಿದ್ದ ಚಿನ್ನ, ನಗದು ವಶಪಡಿಸಿಕೊಂಡ ಪೊಲೀಸರು!

ಶುಕ್ರವಾರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಎಸ್ಪಿ ಲಕ್ಷ್ಮಣ್ ನಿಂಬರಗಿ, 6.55 ಕೆಜಿ ತೂಕದ ಚಿನ್ನಾಭರಣಗಳು ಮತ್ತು 41.4 ಲಕ್ಷ ರೂ. ನಗದು ಇದ್ದ ಬ್ಯಾಗ್ ಮನೆಯ ಛಾವಣಿಯಲ್ಲಿ ಪತ್ತೆಯಾಗಿದೆ ಎಂದು ಹೇಳಿದರು.

ವಿಜಯಪುರ: ಸೆಪ್ಟೆಂಬರ್ 16 ರಂದು ಜಿಲ್ಲೆಯ ಚಡಚಣ ಪಟ್ಟಣದಲ್ಲಿ ನಡೆದಿದ್ದ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಂಗಳವೇಧ ತಾಲ್ಲೂಕಿನ ಹುಲಜಂತಿ ಗ್ರಾಮದ ಮನೆಯ ಛಾವಣಿ ಮೇಲೆ ಇಟ್ಟಿದ್ದ ಚಿನ್ನ ಮತ್ತು ನಗದು ತುಂಬಿದ ಚೀಲವನ್ನು ಜಿಲ್ಲಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶುಕ್ರವಾರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಎಸ್ಪಿ ಲಕ್ಷ್ಮಣ್ ನಿಂಬರಗಿ, 136 ಪ್ಯಾಕೆಟ್‌ಗಳಲ್ಲಿದ್ದ 6.55 ಕೆಜಿ ತೂಕದ ಚಿನ್ನಾಭರಣಗಳು ಮತ್ತು 41.4 ಲಕ್ಷ ರೂ. ನಗದು ಇದ್ದ ಬ್ಯಾಗ್ ಮನೆಯ ಛಾವಣಿಯಲ್ಲಿ ಪತ್ತೆಯಾಗಿದೆ ಎಂದು ಹೇಳಿದರು.

ಇದಕ್ಕೂ ಮೊದಲು, ದರೋಡೆ ನಡೆದ ದಿನ, ದರೋಡೆಕೋರರಲ್ಲಿ ಒಬ್ಬ ಲೂಟಿ ಮಾಡಿದ ವಸ್ತುಗಳನ್ನು ಸಾಗಿಸುತ್ತಿದ್ದ ವಾಹನ ಹುಲಜಂತಿ ಗ್ರಾಮದಲ್ಲಿ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದಿದೆ. ನಂತರ, ಸ್ಥಳೀಯರು ಮತ್ತು ಆರೋಪಿಗಳ ನಡುವೆ ವಾಗ್ವಾದ ಆರಂಭವಾದಾಗ, ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಕದ್ದ ವಸ್ತುಗಳ ಪೈಕಿ ಕೆಲವನ್ನು ವಾಹನದಲ್ಲಿಯೇ ಬಿಟ್ಟು ಹೋಗಿದ್ದ. ನಂತರ ಪೊಲೀಸರು ಅವುಗಳನ್ನು ವಶಪಡಿಸಿಕೊಂಡರು.

ಮೋಟಾರ್ ಸೈಕಲ್ ವಶಪಡಿಸಿಕೊಂಡ ಕೂಡಲೇ, ವಿಜಯಪುರ ಮತ್ತು ಮಹಾರಾಷ್ಟ್ರದ ಸೋಲಾಪುರ ಪೊಲೀಸರ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಶೋಧ ನಡೆಸಲು ಇಡೀ ಗ್ರಾಮವನ್ನು ಸುತ್ತುವರಿಯಲಾಯಿತು ಎಂದು ಎಸ್‌ಪಿ ಹೇಳಿದರು.

'ಶೋಧದ ಸಮಯದಲ್ಲಿ, ಪೊಲೀಸರು ಗ್ರಾಮದ ಮನೆಯೊಂದರ ಛಾವಣಿಯಲ್ಲಿ ಚಿನ್ನ ಮತ್ತು ನಗದು ತುಂಬಿದ ಚೀಲವನ್ನು ಕಂಡುಕೊಂಡರು' ಎಂದು ಅವರು ಹೇಳಿದರು.

ಎಂಟು ವಿಶೇಷ ತಂಡಗಳು ಪ್ರಕರಣವನ್ನು ಬಹು ಆಯಾಮಗಳಿಂದ ತನಿಖೆ ನಡೆಸುತ್ತಿವೆ. ಅಪರಾಧಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಮತ್ತು ಪ್ರಕರಣವನ್ನು ಆದಷ್ಟು ಬೇಗ ಬಗೆಹರಿಸಲಾಗುವುದು. ಇದು ಅಂತರರಾಜ್ಯ ವಿಷಯವಾಗಿರುವುದರಿಂದ ವಿಜಯಪುರ ಪೊಲೀಸರು ಮಹಾರಾಷ್ಟ್ರ ಪೊಲೀಸರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ನಿಂಬರಗಿ ಹೇಳಿದರು.

ದುಷ್ಕರ್ಮಿಗಳು ಬ್ಯಾಂಕಿನಿಂದ 1.04 ಕೋಟಿ ರೂ. ನಗದು ಮತ್ತು 20 ಕೆಜಿ ಚಿನ್ನಾಭರಣಗಳು ಸೇರಿ ಒಟ್ಟು 21 ಕೋಟಿ ರೂ. ದೋಚಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕ್ರೈಸ್ತ ಧರ್ಮಕ್ಕೆ Hindu ಉಪಜಾತಿಗಳ ಸೇರ್ಪಡೆ ಮರುಪರಿಶೀಲಿಸುವಂತೆ ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲ ಗೆಹ್ಲೋಟ್ ಪತ್ರ!

ನಿರ್ಮಾಪಕರನ್ನು ದೋಚುವುದು ನಾಚಿಕೆಗೇಡು: 'Kalki 2' ಚಿತ್ರದಿಂದ Deepika Padukone ನಿರ್ಗಮಿಸಿದ ಬೆನ್ನಲ್ಲೇ Aamir Khan ಹೇಳಿಕೆ, Video ವೈರಲ್!

$100,000 H-1B ವೀಸಾ ಶುಲ್ಕ ಭಾರತಕ್ಕೆ ಹಿನ್ನಡೆ ಅಲ್ಲವೇ ಅಲ್ಲ: NITI ಆಯೋಗದ ಮಾಜಿ ಸಿಇಒ ಅಮಿತಾಬ್ ಕಾಂತ್ ಹೇಳೋದೇನು?

Bigg Boss Kannada 12: ಆರಂಭಕ್ಕೆ ಕ್ಷಣಗಣನೆ, ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಇಂತಿದೆ...

ಗಿರೀಶ್ ಲಿಂಗಣ್ಣ, TNIE ನೌಶಾದ್ ಗೆ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ

SCROLL FOR NEXT