ಮುಕುಳೆಪ್ಪ ಅಲಿಯಾಸ್ ಖ್ವಾಜಾ ಪತ್ನಿ ಗಾಯತ್ರಿ 
ರಾಜ್ಯ

Kannada Youtuber ಮುಕಳೆಪ್ಪ Love jihad Case ಗೆ ಬಿಗ್ ಟ್ವಿಸ್ಟ್: ವಿಡಿಯೋ ಹೇಳಿಕೆ ಕೊಟ್ಟ ಗಾಯತ್ರಿ; ಅಸಲಿ ಸತ್ಯ ಬಹಿರಂಗ!

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಯೂಟ್ಯೂಬರ್ ಕ್ವಾಜಾ ಅಲಿಯಾಸ್ ಮುಕಳೆಪ್ಪ ಮತ್ತು ಹಿಂದೂ ಯುವತಿಯ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ತಿರುವು ಸಿಕ್ಕಿದೆ.

ಧಾರವಾಡ: ಕನ್ನಡದ ಖ್ಯಾತ ಯೂಟ್ಯೂಬರ್ ಮುಕಳೆಪ್ಪನ ವಿರುದ್ಧದ ಲವ್ ಜಿಹಾದ್ ಆರೋಪಕ್ಕೆ ಇದೀಗ ದೊಡ್ಡ ಟ್ವಿಸ್ಟ್ ಸಿಕ್ಕಿದ್ದು, ಆತನ ಪತ್ನಿ ಗಾಯತ್ರಿ ಜಾಲಿಹಾಳ ವಿಡಿಯೋ ಹೇಳಿಕೆ ನೀಡಿದ್ದಾರೆ.

ಹೌದು.. ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಯೂಟ್ಯೂಬರ್ ಕ್ವಾಜಾ ಅಲಿಯಾಸ್ ಮುಕಳೆಪ್ಪ ಮತ್ತು ಹಿಂದೂ ಯುವತಿಯ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ತಿರುವು ಸಿಕ್ಕಿದೆ.

ಮುಕಳೆಪ್ಪ ಅವರೊಂದಿಗಿನ ವಿವಾಹದ ಬಗ್ಗೆ ಆತನ ಪತ್ನಿ ಗಾಯತ್ರಿ ಜಾಲಿಹಾಳ ಸ್ಪಷ್ಟಪಡಿಸಿದ್ದು, ಇದೇ ಮೊದಲ ಬಾರಿಗೆ ವಿಡಿಯೋ ಹೇಳಿಕೆ ನೀಡಿದ್ದಾರೆ. ಲವ್ ಜಿಹಾದ್ ನಡೆದಿದೆ ಎಂದು ಬಜರಂಗದಳ ಆರೋಪ ಬೆನ್ನಲ್ಲಿಯೇ ಗಾಯತ್ರಿ ಸ್ವಇಚ್ಛೆಯಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಮುಕಳೆಪ್ಪ ವಿರುದ್ಧದ 'ಲವ್ ಜಿಹಾದ್' ಆರೋಪಗಳನ್ನು ತಳ್ಳಿಹಾಕಿರುವ ಅವರ ಪತ್ನಿ ಗಾಯತ್ರಿ ಜಾಲಿಹಾಳ ಅವರು ಸ್ವತಃ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ವಿಡಿಯೋದಲ್ಲಿ 'ಗಾಯತ್ರಿ ಅವರು ತಾವು ಸ್ವಇಚ್ಛೆಯಿಂದಲೇ ಮುಕಳೆಪ್ಪ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾಗಿ ಸ್ಪಷ್ಟಪಡಿಸಿದ್ದಾರೆ. ಅಂಕತೆಯೇ 'ನಾನು ನನ್ನ ಸ್ವಂತ ಬುದ್ಧಿಯಿಂದ, ಸ್ವಂತ ಇಚ್ಛೆಯಿಂದಲೇ ಕ್ವಾಜಾ ಅಲಿಯಾಸ್ ಮುಕಳೆಪ್ಪ ಅವರನ್ನು ವಿವಾಹವಾಗಿದ್ದೇನೆ. ಕೆಲವು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ 'ಲವ್ ಜಿಹಾದ್' ಎಂಬ ಆರೋಪಗಳು ಸಂಪೂರ್ಣ ಸುಳ್ಳು' ಎಂದು ಹೇಳಿದ್ದಾರೆ.

ತಾಯಿ ಹೇಳಿಕೆ ಸುಳ್ಳು

ಇದೇ ವೇಳೆ ಈ ಹಿಂದೆ ಗಾಯತ್ರಿ ಅವರ ತಾಯಿ ಮಾಧ್ಯಮಗಳ ಮುಂದೆ ಮಗಳು ಲವ್ ಜಿಹಾದ್‌ಗೆ ಬಲಿಯಾಗಿದ್ದಾಳೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಗಾಯತ್ರಿ, 'ನಮ್ಮ ತಾಯಿ ಮಾಧ್ಯಮಗಳ ಮುಂದೆ ಸುಳ್ಳು ಹೇಳುತ್ತಿದ್ದಾರೆ. ಅವರಿಗೆ ಯಾರೋ ಬೇರೆಯವರು ಕಲಿಸಿಕೊಟ್ಟಿದ್ದಾರೆ. ಮದುವೆಯಾದ ಬಳಿಕವೂ ನಮ್ಮ ತಾಯಿಯವರು ನಮಗೆ ಬೆಂಬಲ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ನನ್ನ ಬಳಿ ಅನೇಕ ಸಾಕ್ಷಿಗಳಿದ್ದು, ಅವುಗಳನ್ನು ನಾನು ಶೀಘ್ರದಲ್ಲೇ ನಿಮಗೆಲ್ಲರಿಗೂ ತೋರಿಸುತ್ತೇನೆ. ಆದ್ರೆ, ನಮ್ಮವ್ವ ಈಗ ಇದ್ದಕ್ಕಿದ್ದಂತೆ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಗಾಯತ್ರಿ ಅವರು ತಮ್ಮ ಮತ್ತು ಪತಿ ಮುಕಳೆಪ್ಪ ಅವರ ಜೀವನಕ್ಕೆ ಏನಾದರೂ ಅಪಾಯವಾದರೆ ಕಾನೂನಿನ ಮೂಲಕ ನ್ಯಾಯ ದೊರಕಿಸಿಕೊಡಬೇಕೆಂದು ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ನಮ್ಮ ತಾಯಿಯವರ ಹೇಳಿಕೆಗಳಿಗೆ ದಯವಿಟ್ಟು ಯಾರು ಬೆಲೆ ಕೊಡಬೇಡಿ. ನಾನು ನನ್ನ ಸಂಪೂರ್ಣ ಪ್ರಜ್ಞೆಯಿಂದಲೇ ಈ ಹೇಳಿಕೆಯನ್ನು ನೀಡುತ್ತಿದ್ದೇನೆ' ಎಂದು ವಿಡಿಯೋ ಮೂಲಕ ಖಚಿತಪಡಿಸಿದ್ದಾರೆ. ಈ ವಿಡಿಯೋ ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಜಯ ಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ!

Asia Cup 2025: 'ಬಿದ್ರೂ ಮೀಸೆ ಮಣ್ಣಾಗ್ಲಿಲ್ಲಾ..!' ಅರ್ಧಶತಕ ಸಿಡಿಸಿ 'Gun-Firing' ಸಂಭ್ರಮ ಮಾಡಿದ ಪಾಕ್ ಬ್ಯಾಟರ್!

Asia Cup 2025: 172 ರನ್ ಗುರಿ ನೀಡಿದ ಪಾಕಿಸ್ತಾನ, ಎಲ್ಲರ ಚಿತ್ತ ಭಾರತ ಬ್ಯಾಟರ್ಸ್ ಗಳತ್ತ!

ಹಾಸನ: ಗಣೇಶ ಮೂರ್ತಿಗೆ ಚಪ್ಪಲಿ ಹಾರ ಪ್ರಕರಣ; ಶಂಕಿತ ಮಹಿಳೆ ಬಂಧಿಸಿದ ಪೊಲೀಸರು!

News headlines 21-09-2025| ಕ್ರೈಸ್ತ ಧರ್ಮಕ್ಕೆ ಹಿಂದೂ ಉಪಜಾತಿಗಳ ಕಾಲಮ್ ರದ್ದು; ಬೇಲೂರು: ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ಕಿಡಿಗೇಡಿ ಮಹಿಳೆ ಬಂಧನ; Panchamasali ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿಯ ಉಚ್ಛಾಟನೆ!

SCROLL FOR NEXT