ಶಿವಮೊಗ್ಗ: ರಾಜಧಾನಿ ಬೆಂಗಳೂರು ಹೊರತುಪಡಿಸಿ ರಾಜ್ಯಾದ್ಯಂತ ಸೋಮವಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದ್ದು, ಮೊದಲ ದಿನವೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವಲ್ಲಿ ತೊಂದರೆ, ಸರ್ವರ್ ಸಮಸ್ಯೆ ಹಾಗೂ ಆ್ಯಪ್ ಬಳಸುವಲ್ಲಿ ಪರಿಚಿತತೆಯ ಕೊರತೆ ಸಮಸ್ಯೆಗಳು ಎದುರಾದವು.
ಸ್ವಲ್ಪ ಸಮಯದವರೆಗೆ ಗಣತಿದಾರರು ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು ಮತ್ತು ವಿವರಗಳನ್ನು ತೆಗೆದುಕೊಳ್ಳುವ ಬಗ್ಗೆ ಗೊಂದಲಕ್ಕೊಳಗಾಗಿದ್ದರು. ನಂತರ ಸಮಸ್ಯೆಯನ್ನು ಪರಿಹರಿಸಲಾಯಿತು.
ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಶೋಭಾ ಅವರು ಮಾತನಾಡಿ, ಆರಂಭದಲ್ಲಿ, ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು ಮತ್ತು ಲಾಗಿನ್ ಮಾಡುವುದು ಸೇರಿದಂತೆ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಿದ್ದವು. ಮೊದಲ ದಿನ ಸಮಸ್ಯೆಗಳಾಗಿದೆ. ಕೆಲವು ಗಣತಿದಾರರಿಗೆ ಅಪ್ಲಿಕೇಶನ್ ಬಗ್ಗೆ ತಿಳಿಯುವಲ್ಲಿ ಹಾಗೂ ಬಳಕೆ ಮಾಡುವಲ್ಲಿ ಸಮಸ್ಯೆಯಾಗಿದೆ. ಗೊಂದಲಗಳು ದೂರಾಗಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಹೇಳಿದರು.
ಒಂದು ಅಥವಾ ಎರಡು ದಿನಗಳಲ್ಲಿ ಈ ಕೆಲಸ ಸುಲಭವಾಗುತ್ತದೆ. ಸಮೀಕ್ಷೆಯನ್ನು ವೇಗಗೊಳಿಸಲಾಗುತ್ತದೆ. ನಾವು ಪ್ರತಿ ಕುಟುಂಬದಿಂದ ಮಾಹಿತಿಯನ್ನು ಸಂಗ್ರಹಿಸಬೇಕಾಗಿದೆ. ಒಂದೊಂದು ಕುಟುಂಬವನನೂ 61 ಪ್ರಶ್ನೆಗಳನ್ನು ಕೇಳಬೇಕಾಗಿದೆ, ಅವುಗಳಲ್ಲಿ 41 ಪ್ರಶ್ನೆಗಳನ್ನು ವ್ಯಕ್ತಿಗೆ ಮತ್ತು 20 ಕುಟುಂಬಕ್ಕೆ ಸಂಬಂಧಿಸಿವೆ. ನಮಗೆ ಪ್ರತಿಯೊಬ್ಬ ವ್ಯಕ್ತಿಗೆ ಒಂದು ಗಂಟೆ ಬೇಕಾಗುತ್ತದೆ. ಕುಟುಂಬದಲ್ಲಿ ನಾಲ್ಕು ಸದಸ್ಯರಿದ್ದರೆ, ಸದಸ್ಯರು ಎಷ್ಟು ವೇಗವಾಗಿ ಮಾಹಿತಿಯನ್ನು ಒದಗಿಸುತ್ತಾರೆ ಎಂಬುದರ ಆಧಾರದ ಮೇಲೆ ಇದು ಸುಲಭವಾಗಿ ಎರಡೂವರೆಯಿಂದ ಮೂರು ಗಂಟೆಗಳನ್ನು ತೆಗೆದುಕೊಳ್ಳಬಹುದು ಎಂದು ಗಣತಿದಾರರು ಹೇಳಿದ್ದಾರೆ.
ಇಂದು ಆ್ಯಪ್ ನಲ್ಲಿ ಸಮಸ್ಯೆಗಳು ಎದುರಾಯಿತು. 16 ದಿನಗಳಲ್ಲಿ 143 ಕುಟುಂಬಗಳ ಮಾಹಿತಿ ಸಂಗ್ರಹಿಸಬೇಕಿದೆ. ದಸರಾಕ್ಕೆ ನಮಗೆ ರಜೆ ಸಿಕ್ಕರೆ, ಕೇವಲ 15 ದಿನಗಳು ಮಾತ್ರ ಉಳಿಯುತ್ತವೆ. ದಿನಕ್ಕೆ 5-6 ಕುಟುಂಬಗಳ ಸಮೀಕ್ಷೆ ಮಾಡುವುದು ಕಷ್ಟ. ಸಮೀಕ್ಷೆಗೆ ಹೆಚ್ಚುವರಿಯಾಗಿ 4-5 ದಿನಗಳು ಬೇಕಾಗುತ್ತವೆ ಎಂದು ತಿಳಿಸಿದ್ದಾರೆ.
ಸಚಿವ ಮಧು ಬಂಗಾರಪ್ಪ ಅವರು ಬಿಇಒ ಕಚೇರಿಗೆ ಆಗಮಿಸಿ ಸಮೀಕ್ಷೆಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಗೊಂದಲವನ್ನು ಪರಿಹರಿಸಲಾಗಿದೆ. ತಾಂತ್ರಿಕ ಸಮಸ್ಯೆ ಇದ್ದರೆ, ಪ್ರಧಾನಿ ಮೋದಿಯವರ ಅಪ್ಲಿಕೇಶನ್ ಓಪನ್ ಆಗುವುದಿಲ್ಲ ಎಂದು ಹೇಳಿದರು.
ಮೂರು ಮನೆಗಳಲ್ಲಿ ಸಮೀಕ್ಷೆಯನ್ನು ಪೂರ್ಣಗೊಳಿಸುವ ಹೊತ್ತಿಗೆ, ಅಪ್ಲಿಕೇಶನ್‌ನಲ್ಲಿ ಸಮಸ್ಯೆ ಉಂಟಾಗಿ ತಂಡವು ಕೆಲಸವನ್ನು ನಿಲ್ಲಿಸಬೇಕಾಯಿತು. ತಾಲ್ಲೂಕುಗಳ ಕೆಲವು ಗಣತಿದಾರರು ಮಧ್ಯಾಹ್ನದ ನಂತರವೇ ಕೆಲಸ ಪ್ರಾರಂಭಿಸಲು ಸಾಧ್ಯವಾಗಿದೆ ಕಲಬುರಗಿ ಗಣತಿದಾರರೊಬ್ಬರು ಹೇಳಿದ್ದಾರೆ.
ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರಣಮ್ ಅವರು ಮಾತನಾಡಿ, ಅಪ್ಲಿಕೇಶನ್‌ನಲ್ಲಿನ ದೋಷಗಳ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ ಎಂದು ಹೇಳಿದ್ದಾರೆ.
ಇನ್ನು ಹುಬ್ಬಳ್ಳಿಯಲ್ಲಿ ತಾಂತ್ರಿಕ ಸಮಸ್ಯೆಗಳ ಜೊತೆಗೆ, ಶಿಕ್ಷಕರಿಗೆ ಪ್ರದೇಶಗಳು ಮತ್ತು ಮನೆಗಳನ್ನು ಹಂಚಿಕೆ ಮಾಡುವಲ್ಲಿ ಸಮಸ್ಯೆಗಳಾಗಿದ್ದು ಕಂಡು ಬಂದಿತು.