ಪಾಟ್ನಾ: ಬೆಂಗಳೂರಿನ ಹದಗೆಟ್ಟ ರಸ್ತೆಗುಂಡಿಗಳಿಗೆ ಹಿಂದಿನ ಬಿಜೆಪಿ ಸರ್ಕಾರವೇ ಕಾರಣ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ದೂಷಿಸಿದ್ದಾರೆ.
ಪಾಟ್ನಾದಲ್ಲಿ ಮಾತನಾಡಿದ ಅವರು, ಬಿಜೆಪಿ ಎಂದಿಗೂ ಸಂತೋಷವಾಗಿಲ್ಲ. ಈ ಎಲ್ಲಾ ಗುಂಡಿಗಳಿಗೂ ಬಿಜೆಪಿ ಆಡಳಿತವೇ ಕಾರಣ. ಕರ್ನಾಟಕದ ಕೆಟ್ಟ ರಸ್ತೆಗಳಿಗೆ ಬಿಜೆಪಿಯೇ ಕಾರಣ ಎಂದರು.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ಭಾಗವಹಿಸಲು ಕರ್ನಾಟಕದ ಉಪಮುಖ್ಯಮಂತ್ರಿ ಪಾಟ್ನಾದಲ್ಲಿದ್ದಾರೆ. ದೆಹಲಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ನಿವಾಸಕ್ಕೆ ಹೋಗುವ ರಸ್ತೆಯಲ್ಲೂ ಗುಂಡಿಗಳಿವೆ ಎಂದಿದ್ದರು.
ಬೆಂಗಳೂರಿನಾದ್ಯಂತ ಪ್ರತಿದಿನ ಸುಮಾರು 1,000 ಗುಂಡಿಗಳನ್ನು ಸಂಘಟಿತ ಪ್ರಯತ್ನಗಳ ಮೂಲಕ ಮುಚ್ಚಲಾಗುತ್ತಿದೆ ಎಂದು ಅವರು ಹೇಳಿದರು. ನಗರದಲ್ಲಿನ ಗುಂಡಿಗಳ ಬಗ್ಗೆ ಕೆಲವು ಕೈಗಾರಿಕೋದ್ಯಮಿಗಳು ಕಳವಳ ವ್ಯಕ್ತಪಡಿಸಿದ ನಂತರ ಈ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಬೆಂಗಳೂರನ್ನು "ಗುಂಡಿಗಳ ನಗರ" ಎಂದು ಜರಿದಿದ್ದರು.