ಕೃಷಿ ಸಚಿವ ಚಲುವರಾಯಸ್ವಾಮಿ 
ರಾಜ್ಯ

ಕಾವೇರಿ ಆರತಿ: ಪ್ರತಿ ದಿನ ಒಂದೊಂದು ತಾಲೂಕಿನ ಜನರಿಗೆ ಆಹ್ವಾನ; ಸಚಿವ ಚಲುವರಾಯಸ್ವಾಮಿ

ಕಾವೇರಿ ಆರತಿಗೆ ಶಾಶ್ವತವಾಗಿ ಜಾಗ ಗುರುತು ಮಾಡಿಲ್ಲ. ಕೋರ್ಟ್‌ನಲ್ಲಿ ಕೇಸ್ ಇದೆ. ಹೀಗಾಗಿ ಅದು ಮುಗಿದ ಮೇಲೆ ಶಾಶ್ವತ ವ್ಯವಸ್ಥೆ ಮಾಡುತ್ತೇವೆ. ಈಗ ಇರುವ ಉತ್ತಮ ಜಾಗದಲ್ಲಿ ಮಾಡಿದ್ದೇವೆ ಎಂದರು.

ಬೆಂಗಳೂರು: ಶುಕ್ರವಾರದಿಂದ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಪ್ರಾರಂಭ ಆಗಲಿದ್ದು, ಎಲ್ಲಾ ಸಿದ್ದತೆಗಳು ಮುಗಿದಿವೆ. 5 ದಿನಗಳ ಕಾಲ ಕಾವೇರಿ ಅರತಿ ನಡೆಯಲಿದೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ‌ಪ್ರತಿಕ್ರಿಯೆ ನೀಡಿದ ಅವರು, ಕಾವೇರಿ ಆರತಿಗೆ ಸದ್ಯ ಶಾಶ್ವತ ವ್ಯವಸ್ಥೆ ಮಾಡಿಲ್ಲ. ಇರುವ ಜಾಗದಲ್ಲಿ ಕಾವೇರಿ ಆರತಿ ನಾಳೆಯಿಂದ ಪ್ರಾರಂಭ ಮಾಡುತ್ತಿದ್ದೇವೆ. ಕಾರ್ಯಕ್ರಮಕ್ಕೆ ನಾಳೆ ಡಿಸಿಎಂ ಚಾಲನೆ ಕೊಡುತ್ತಾರೆ ಎಂದು ಮಾಹಿತಿ ನೀಡಿದರು.

ಕಾವೇರಿ ಆರತಿಗೆ ಶಾಶ್ವತವಾಗಿ ಜಾಗ ಗುರುತು ಮಾಡಿಲ್ಲ. ಕೋರ್ಟ್‌ನಲ್ಲಿ ಕೇಸ್ ಇದೆ. ಹೀಗಾಗಿ ಅದು ಮುಗಿದ ಮೇಲೆ ಶಾಶ್ವತ ವ್ಯವಸ್ಥೆ ಮಾಡುತ್ತೇವೆ. ಈಗ ಇರುವ ಉತ್ತಮ ಜಾಗದಲ್ಲಿ ಮಾಡಿದ್ದೇವೆ ಎಂದರು.

ನಿತ್ಯ ಒಂದೊಂದು ತಾಲೂಕು ಜನರಿಗೆ ಬರೋದಕ್ಕೆ ಹೇಳಿದ್ದೇವೆ. ನಾಳೆ 3 ತಾಲೂಕು ಜನರಿಗೆ ಆಹ್ವಾನ ನೀಡಲಾಗಿದೆ. ನಾವು ಹಿಂದುತ್ವ ವಿರೋಧಿಗಳು ಅಲ್ಲ. ಧಾರ್ಮಿಕ ವಿಚಾರಕ್ಕೂ ನಾವು ವಿರೋಧ ಮಾಡಿಲ್ಲ. ಚಪಲಕ್ಕೆ ಕೆಲವರು ಮಾತಾಡ್ತಾರೆ ಮಾತಾಡಲಿ ಎಂದು ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮತ ಎಣಿಕೆ ನಿಯಮ ಪರಿಷ್ಕರಿಸಿದ ಚುನಾವಣಾ ಆಯೋಗ; ಬಿಹಾರ ಚುನಾವಣೆಯಿಂದಲೇ ಜಾರಿ

ಶೀಘ್ರದಲ್ಲೇ ಕರ್ನಾಟಕ ಪೊಲೀಸ್ ಟೋಪಿಗಳು ಬದಲಾಗುತ್ತೆ: ಡಿಜಿ-ಐಜಿಪಿ ಸಲೀಮ್

Trump-Shehbaz Sharif Meeting: ಪಾಕ್ ಪ್ರಧಾನಿ ಜೊತೆಗೆ ಏನಿದು ಡೊನಾಲ್ಡ್ ಟ್ರಂಪ್ 'ರಹಸ್ಯ ಮಾತುಕತೆ'!

ಇಂದೋರ್ ವಿಮಾನ ನಿಲ್ದಾಣ: ಬೆಂಗಳೂರಿಗೆ ಬರುತ್ತಿದ್ದ ಪ್ರಯಾಣಿಕನ ಪ್ಯಾಂಟ್‌ ಒಳಗೆ ನುಗ್ಗಿ, ಕಚ್ಚಿದ ಇಲಿ!

GST reforms: ಗ್ರಾಹಕರಿಗೆ ಜಿಎಸ್‌ಟಿ ಪ್ರಯೋಜನಗಳ ವರ್ಗಾವಣೆ; ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ಹೇಳಿದ್ದೇನು?

SCROLL FOR NEXT