ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ 
ರಾಜ್ಯ

ರಾಜ್ಯಾದ್ಯಂತ ಆಟೋ ಎಲ್‌ಪಿಜಿ ಕೊರತೆ; ಕಿಲೋಮೀಟರ್‌ಗಟ್ಟಲೇ ಕ್ಯೂ: ಸಚಿವ ಮುನಿಯಪ್ಪ ಹೇಳಿದ್ದೇನು? Video

ಆದರೆ ಈ ಸಮಸ್ಯೆ ಖಾಸಗಿ ತೈಲ ಕಂಪನಿಗಳ ಎಲ್‌ಪಿಜಿ ಸ್ಟೇಷನ್‌ಗಳಲ್ಲಿ ಮಾತ್ರ ಇದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಎಲ್‌ಪಿಜಿ ಸ್ಟೇಷನ್‌ಗಳಲ್ಲಿ ಯಾವುದೇ ಕೊರತೆ ಇಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ.

ಬೆಂಗಳೂರು: ಪೂರೈಕೆಯ ಕೊರತೆಯಿಂದಾಗಿ ಬುಧವಾರ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಆಟೋ ಎಲ್‌ಪಿಜಿ ಕೊರತೆ ತೀವ್ರಗೊಂಡಿದ್ದು, ಹಲವು ಎಲ್‌ಪಿಜಿ ಬಂಕ್‌ಗಳಲ್ಲಿ ಕಿಲೋಮೀಟರ್‌ಗಟ್ಟಲೇ ಆಟೋಗಳು ಕ್ಯೂ ನಿಂತಿರುವ ದೃಶ್ಯಗಳು ಕಂಡುಬರುತ್ತಿವೆ.

ಆದರೆ ಈ ಸಮಸ್ಯೆ ಖಾಸಗಿ ತೈಲ ಕಂಪನಿಗಳ ಎಲ್‌ಪಿಜಿ ಸ್ಟೇಷನ್‌ಗಳಲ್ಲಿ ಮಾತ್ರ ಇದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಎಲ್‌ಪಿಜಿ ಸ್ಟೇಷನ್‌ಗಳಲ್ಲಿ ಯಾವುದೇ ಕೊರತೆ ಇಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ.

"ನಾನು ಕಳೆದ ನಾಲ್ಕು ಗಂಟೆಗಳಿಂದ ನನ್ನ ಆಟೋರಿಕ್ಷಾಗೆ ಎಲ್‌ಪಿಜಿ ತುಂಬಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ಎಲ್ಲಿಯೂ ಸಿಗುತ್ತಿಲ್ಲ. ನನ್ನ ಆಟೋದಲ್ಲಿ ಎಪ್ ಪಿಜಿ ಖಾಲಿಯಾಗುತ್ತಿದೆ" ಎಂದು ಆರ್‌ಟಿ ನಗರದ ಎಲ್‌ಪಿಜಿ ಸ್ಟೇಷನ್‌ನಲ್ಲಿದ್ದ ಆಟೋ ಚಾಲಕ ಅಬ್ದುಲ್ ಕರೀಮ್ ಹೇಳಿದ್ದಾರೆ.

ಮತ್ತೊಬ್ಬ ಆಟೋರಿಕ್ಷಾ ಚಾಲಕ ಮತೀನ್, ತನ್ನ ವಾಹನವನ್ನು ಆರ್‌ಟಿ ನಗರದ ಎಲ್‌ಪಿಜಿ ಸ್ಟೇಷನ್‌ಗೆ ತಳ್ಳಿಕೊಂಡು ಬಂದೆ. ಆದರೆ ಎಲ್ ಪಿಜಿ ಸಿಗದೆ ನಿರಾಶೆಗೊಂಡಿರುವುದಾಗಿ ತಿಳಿಸಿದರು.

ಚಿತ್ರದುರ್ಗದಲ್ಲಿ, ಗ್ಯಾಸ್ ಕೊರತೆಯಿಂದಾಗಿ ಪೆಟ್ರೋಲ್ ಬಂಕ್ ವೊಂದು ತನ್ನ ಗೇಟ್ ಬಂದ್ ಮಾಡಿದೆ.

ಮೈಸೂರಿನಲ್ಲಿಯೂ ಸಹ, ಖಾಸಗಿ ಪೆಟ್ರೋಲ್ ಮತ್ತು ಡೀಸೆಲ್ ಸೇವಾ ಕೇಂದ್ರವು ಬ್ಯಾರಿಕೇಡ್ ಹಾಕಿ ಪ್ರವೇಶ ಮತ್ತು ನಿರ್ಗಮನ ಸ್ಥಳಗಳನ್ನು ನಿರ್ಬಂಧಿಸಿತ್ತು.

ಪೂರೈಕೆ ಸ್ಥಗಿತಗೊಂಡ ನಂತರ ಬಳ್ಳಾರಿಯ ಎಲ್‌ಪಿಜಿ ಸೇವಾ ಕೇಂದ್ರದ ಮುಂದೆ ಆಟೋರಿಕ್ಷಾ ಚಾಲಕರು ಪ್ರತಿಭಟನೆ ನಡೆಸಿದರು.

ಸಚಿವ ಮುನಿಯಪ್ಪ ಹೇಳಿದ್ದೇನು?

ಈ ಬಗ್ಗೆ ಪ್ರತಿಕ್ರಿಯಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ​​ಮುನಿಯಪ್ಪ ಅವರು, ಆಟೋ ಎಲ್ ಪಿಜಿ ಸಮಸ್ಯೆ ಕೇವಲ ಖಾಸಗಿ ತೈಲ ಕಂಪನಿಗಳ ಸೇವಾ ಕೇಂದ್ರಗಳಲ್ಲಿ ಮಾತ್ರ ಇದೆ ಮತ್ತು ಸರ್ಕಾರಿ ಪಿಎಸ್‌ಯುಗಳಲ್ಲಿ ಇಲ್ಲ ಎಂದು ಹೇಳಿದರು.

ಅವರ ಪ್ರಕಾರ, ಖಾಸಗಿ ಕಂಪನಿಗಳು ಬೆಲೆಯನ್ನು ಹೆಚ್ಚಿಸಿವೆ, ಇದು ಸಮಸ್ಯೆಗೆ ಕಾರಣವಾಗಿದೆ. ಹೀಗಾಗಿ ಖಾಸಗಿ ಕಂಪನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವರು ಕೇಂದ್ರಕ್ಕೆ ಮನವಿ ಮಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತಮಿಳುನಾಡಿಗೆ ಕಾವೇರಿ, ಕನ್ನಡಿಗರಿಗೆ ಮತ್ತೆ ಚೊಂಬು: ನಿತ್ಯ 9,000 ಕ್ಯೂಸೆಕ್ ನೀರು ಬಿಡಲು CWRC ಸೂಚನೆ!

ನೀವು ಹೇಳಿದಂತೆ ಕೇಳದಿದ್ರೆ ದ್ವೇಷಿಸ್ತೀರಾ: JDS ಶಾಸಕ ಹೆಚ್ ಡಿ ರೇವಣ್ಣಗೆ ಹಾಸನ ಜಿಲ್ಲಾಧಿಕಾರಿ ತಿರುಗೇಟು

ಸೀತಾಪುರದಲ್ಲಿ ವಿಚಿತ್ರ ಪ್ರಕರಣ: ಹಗಲು ಪ್ರೇಮಿ, ರಾತ್ರಿ ಗಂಡ ಬೇಕಂತೆ! ಇಬ್ಬರ ಜತೆ ಸಂಸಾರ ನಡೆಸಲು ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ! Video

ಬೀದಿ ನಾಯಿಯ ಭೀಕರ ದಾಳಿ: ಮನೆಯಿಂದ ಹೊರಗೆ ಆಟವಾಡುತ್ತಿದ್ದ 5 ವರ್ಷದ ಬಾಲಕಿ ಗಂಭೀರ! Video

‘ಏನೇನ್ ಮಾಡ್ತಾರೋ ಗೊತ್ತಿಲ್ಲ’: Donald Trump ‘ಅನಿರೀಕ್ಷಿತ ವರ್ತನೆ’ ಬಗ್ಗೆ ಎಚ್ಚರಿಕೆ: ಮೋದಿ ಭೇಟಿ ಬಳಿಕ ಜಂಟಿ ಸುದ್ದಿಗೋಷ್ಠಿಗೆ ಭಾರತ ಹಿಂದೇಟು!