ಶಿವಮೊಗ್ಗ: ಕಳೆದ ಮಾರ್ಚ್ 19ರಂದು ಶಿವಮೊಗ್ಗದ ತ್ಯಾವರೆಕೊಪ್ಪ ಸಫಾರಿಯಲ್ಲಿ ತರಬೇತಿ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಮೇಲೆ ಗರ್ಭಿಣಿ ನೀರಾನೆ ದಾಳಿ ಮಾಡಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಸಮೀಕ್ಷಾ ರೆಡ್ಡಿ ಮೃತಪಟ್ಟಿದ್ದರು. ಇದೀಗ ನೀರಾನೆ ಮರಿಗೆ ಜನ್ಮ ನೀಡಿದ್ದು ಆ ಮರಿ ಸಾವನ್ನಪ್ಪಿದೆ. ಹಂಸಿನಿ ಹೆಸರಿನ ನೀರಾನೆ ಈ ಹಿಂದೆ ಎರಡು ಬಾರಿ ಮರಿಗಳಿಗೆ ಜನ್ಮ ನೀಡಿತ್ತು. ಆದರೆ ದುರಾದೃಷ್ಟವಶಾತ್ ಎರಡೂ ಬಾರಿ ಮರಿಗಳು ಸಾವನ್ನಪ್ಪಿದ್ದವು. ಈ ಬಾರಿಯಾದರೂ ಮರಿ ಉಳಿಯಬಹುದು ಎಂಬ ನಿರೀಕ್ಷೆಯಲ್ಲಿದ್ದ ಸಫಾರಿ ಸಿಬ್ಬಂದಿಗೆ ಈಗ ನಿರಾಸೆಯಾಗಿದೆ. ಹಂಸಿನಿಯ ಮರಿಯು ಸಾವನ್ನಪ್ಪಿರುವುದಕ್ಕೆ ಸಫಾರಿ ಸಿಬ್ಬಂದಿ ಹಾಗೂ ಪ್ರಾಣಿ ಪ್ರೇಮಿಗಳಲ್ಲಿ ತೀವ್ರ ವಿಷಾದ ಮೂಡಿಸಿದೆ.