ಸಂಗ್ರಹ ಚಿತ್ರ online desk
ರಾಜ್ಯ

ಬೆಂಗಳೂರು: ಆಕಸ್ಮಿಕವಾಗಿ ಲಿಫ್ಟ್‌ ಗುಂಡಿಗೆ ಬಿದ್ದು ಎಲೆಕ್ಟ್ರಿಷಿಯನ್ ದಾರುಣ ಸಾವು..!

ಮಂಜುನಾಥ್ ಅವರು ಕಟ್ಟಡದ ಮೂರನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಸಮತೋಲನ ತಪ್ಪಿ ಲಿಫ್ಟ್ ಗುಂಡಿಗೆ ಬಿದ್ದಿದ್ದಾರೆ. ಸುಮಾರು 35 ಅಡಿ ಎತ್ತರದಿಂದ ಅವರು ಕೆಳಗೆ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ಚಂದಾಪುರ-ಆನೇಕಲ್ ರಸ್ತೆಯಲ್ಲಿರುವ ನಿರ್ಮಾಣ ಹಂತದ ಕಟ್ಟಡದ ಮೂರನೇ ಮಹಡಿಯಿಂದ ಲಿಫ್ಟ್ ಗುಂಡಿಗೆ ಬಿದ್ದು ವ್ಯಕ್ತಿಯೊಬ್ಬರು ದುರಂತ ಸಾವನ್ನಪ್ಪಿದ್ದಾರೆ.

ಮೃತ ವ್ಯಕ್ತಿಯನ್ನು ಜಿಗಣಿಯ ಕುಂಬಾರನಹಳ್ಳಿಯ ನಿವಾಸಿ ಮಂಜುನಾಥ್ (45) ಎಂದು ಗುರುತಿಸಲಾಗಿದೆ. ಇವರು ಈ ಕಟ್ಟಡದಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು.

ಆನೇಕಲ್ ಪಟ್ಟಣದ ಚಂದಾಪುರ-ಆನೇಕಲ್ ರಸ್ತೆಯಲ್ಲಿರುವ ಮೊಹಮ್ಮದ್ ಆಸಿಫ್ ಅಲಿ ಅವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡದಲ್ಲಿ ದುರ್ಘಟನೆ ಸಂಭವಿಸಿದೆ.

ಮಂಜುನಾಥ್ ಅವರು ಕಟ್ಟಡದ ಮೂರನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಸಮತೋಲನ ತಪ್ಪಿ ಲಿಫ್ಟ್ ಗುಂಡಿಗೆ ಬಿದ್ದಿದ್ದಾರೆ. ಸುಮಾರು 35 ಅಡಿ ಎತ್ತರದಿಂದ ಅವರು ಕೆಳಗೆ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಂತರ ತಕ್ಷಣವೇ ಅವರನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.

ಮೃತರ ತಂದೆ ಎಚ್.ಎಂ. ಮುನಿರೆಡ್ಡಿ (75) ಅವರು ನೀಡಿದ ದೂರಿನ ಮೇರೆಗೆ ಆನೇಕಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಟ್ಟಡದ ಮಾಲೀಕ ಆಸಿಫ್ ಮತ್ತು ಗುತ್ತಿಗೆದಾರ ರವಿ ಕುಮಾರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 106 (ನಿರ್ಲಕ್ಷ್ಯದಿಂದ ಸಾವು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದೇ ವೇಳೆ ಮತ್ತೊಂದು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಖಾಸಗಿ ಆಸ್ಪತ್ರೆಯಲ್ಲೂ ದುರ್ಘಟನೆ ನಡೆದಿದೆ. 34 ವರ್ಷದ ವ್ಯಕ್ತಿಯೊಬ್ಬರು ಆಸ್ಪತ್ರೆಯ ಮೂರನೇ ಮಹಡಿಯ ಮೇಲ್ಚಾವಣಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ.

ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದ ಗೋವಿಂದ ಯಾದವ್ ಅವರು ಶನಿವಾರ ಬೆಳಗ್ಗೆ ಸುಮಾರು 7.30ರ ವೇಳೆಗೆ ಮೇಲ್ಚಾವಣಿಗೆ ತೆರಳಿ ಅಚಾನಕ್ ಕೆಳಗೆ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಈ ಘಟನೆ ಆತ್ಮಹತ್ಯೆಯೋ ಅಥವಾ ಆಕಸ್ಮಿಕವೋ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜೊತೆಗೆ ಆಸ್ಪತ್ರೆ ನಿರ್ವಹಣೆಯ ನಿರ್ಲಕ್ಷ್ಯ ಇದ್ದಿತೇ ಎಂಬುದನ್ನೂ ಪರಿಶೀಲಿಸುತ್ತಿದ್ದಾರೆ. ಈ ನಡುವೆ ರೋಗಿಯು ಮೇಲ್ಚಾವಣಿಗೆ ತೆರಳುವಾಗ ಭದ್ರತಾ ಸಿಬ್ಬಂದಿ ಇರಲಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯ ಸರ್ಕಾರಕ್ಕೆ ಮತ್ತೆ ಹಿನ್ನಡೆ: SSLC ತೃತೀಯ ಭಾಷೆಗೆ ಗ್ರೇಡ್ ಬದಲು ಅಂಕಗಳನ್ನೇ ನೀಡಿ; ಹೈಕೋರ್ಟ್ ಆದೇಶ

ಬಗೆಹರಿಯದ ಪಶ್ಚಿಮ ಏಷ್ಯಾ ಸಂಘರ್ಷ: ಇರಾನ್ ಜೊತೆಗಿನ ಶಾಂತಿ ಮಾತುಕತೆಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನಕ್ಕೆ ಪ್ರಯಾಣ?

ದೆಹಲಿಯಲ್ಲಿ ಗ್ರೆನೇಡ್ ದಾಳಿಗೆ ಸಂಚು: ಇಬ್ಬರು ISI ಕಾರ್ಯಕರ್ತರ ಬಂಧನ

ಎಂಜಿಆರ್, ಶಿವಾಜಿ ಗಣೇಶನ್ ತೊಡೆ ಮೇಲೆ ಕೂತು ಬೆಳೆದವನು ನಾನು, ಆದರೂ....: ನಟ ವಿಜಯ್‌ಗೆ ತಿರುಗೇಟು ನೀಡಿದ ಕಮಲ್ ಹಾಸನ್!

ಧರ್ಮದ ವಿಚಾರವಾಗಿ ಆನ್ ಲೈನ್ ನಲ್ಲಿ ವಿವಾದಕ್ಕೆ ಗುರಿಯಾದ 'The Rebel Kid' ಅಪೂರ್ವ ಮುಖಿಜಾ! Video ನೋಡಿ...

SCROLL FOR NEXT