ಮೈಸೂರು: ಮೈಸೂರಿನ ಕೆಆರ್ ನಗರದ ಅರ್ಕೇಶ್ವರ ದೇಗುಲದ ಬಳಿ ಈಜಲು ಕಾವೇರಿ ನದಿಗೆ ಇಳಿದಿದ್ದ ಆರು ಮಂದಿ ನೀರುಪಾಗಿರುವ ಘಟನೆ ನಡೆದಿದೆ. ಉರೂಸ್ ಹಿನ್ನೆಲೆಯಲ್ಲಿ ಅರ್ಕೇಶ್ವರ ದೇಗುಲದ ಬಳಿಯಿದ್ದ ದರ್ಗಾಗೆ ಹಲವು ಮುಸ್ಲಿಂ ಕುಟುಂಬಗಳು ಬಂದಿತ್ತು. ಈ ವೇಳೆ ಈಜಾಡಲು 8 ಮಂದಿ ನದಿಗೆ ಇಳಿದಿದ್ದಾರೆ. ಈ ವೇಳೆ ನೀರಿನ ರಭಸಕ್ಕೆ ಸಿಲುಕಿ 6 ಮಂದಿ ಮೃತಪಟ್ಟಿದ್ದಾರೆ. ಮತ್ತಿಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಯಾಸಿನ್ 23, ಫಾತಿಮ್ (30), ಹುಮಾಯೂನ್ (7) ನೇಹಾನ್(19), ಅಲೀಂ(13) ಸೇರಿ 6 ಮಂದಿ ಮೃತಪಟ್ಟಿದ್ದಾರೆ.