ಗರ್ಭಿಣಿ (ಸಂಗ್ರಹ ಚಿತ್ರ) online desk
ರಾಜ್ಯ

ಕಲಬುರಗಿ ಶಾಕಿಂಗ್: ಒಂದು ವರ್ಷದಲ್ಲಿ 61 ಅಪ್ರಾಪ್ತೆಯರು ಗರ್ಭಧಾರಣೆ, ಆತಂಕ ಮೂಡಿಸಿದ ಅಂಕಿ ಅಂಶ..!

ಹದಿಹರೆಯದ ಬಾಲಕಿಯರ ಗರ್ಭಧಾರಣೆ ಕೇವಲ ಆರೋಗ್ಯ ಸಮಸ್ಯೆಯಷ್ಟೇ ಅಲ್ಲ, ಅದು ಸಾಮಾಜಿಕ ಹಾಗೂ ಆರ್ಥಿಕ ಸವಾಲುಗಳನ್ನೂ ಉಂಟುಮಾಡುತ್ತದೆ.

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ 14 ರಿಂದ 17 ವರ್ಷ ವಯಸ್ಸಿನ 61 ಬಾಲಕಿಯರು ಗರ್ಭಿಣಿಯರಾಗಿರುವುದಾಗಿ ತಿಳಿದುಬಂದಿದ್ದು, ಈ ಬೆಳವಣಿಗೆ ಕಳವಳ ಹೆಚ್ಚಾಗುವಂತೆ ಮಾಡಿದೆ.

ಏಪ್ರಿಲ್ 13, 2026 ರ ಆರ್‌ಸಿಎಚ್ ಪೋರ್ಟಲ್ ದತ್ತಾಂಶದ ಪ್ರಕಾರ, ಕಲಬುರಗಿ ಜಿಲ್ಲೆಯಲ್ಲಿ ಏಪ್ರಿಲ್ 2025 ರಿಂದ ಮಾರ್ಚ್ 2026 ರವರೆಗೆ 61 ಹದಿಹರೆಯದ ಬಾಲಕಿಯರು ಗರ್ಭಧಾರಣೆಯ ಪ್ರಕರಣಗಳು ಬೆಳಕಿಗೆ ಬಂದಿವೆ.

ತಾಲೂಕುಗಳವಾರು ನೋಡಿದರೆ, ಅಳಂದ ತಾಲೂಕಿನಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಅಫ್ಜಲ್‌ಪುರ, ಚಿತ್ತಾಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿಯೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ಕಂಡುಬಂದಿವೆ.

ಆಳಂದದಲ್ಲಿ ಅತಿ ಹೆಚ್ಚು, ಒಟ್ಟು 14 ಬಾಲಕಿಯರ ಗರ್ಭಧಾರಣೆಯ ಪ್ರಕರಣಗಳು ವರದಿಯಾಗಿವೆ, ನಂತರ ಅಫ್ಜಲ್‌ಪುರ ಮತ್ತು ಚಿತ್ತಾಪುರ ತಾಲ್ಲೂಕುಗಳಲ್ಲಿ ತಲಾ 11 ಗರ್ಭಧಾರಣೆಯ ಪ್ರಕರಣಗಳು ವರದಿಯಾಗಿವೆ, ಸೇಡಂ ತಾಲ್ಲೂಕಿನಲ್ಲಿ 8 ಬಾಲಕಿಯರ ಗರ್ಭಧಾರಣೆಯ ಪ್ರಕರಣಗಳು, ಕಲಬುರಗಿ-ಗ್ರಾಮೀಣ ತಾಲ್ಲೂಕಿನಿಂದ 7 ಪ್ರಕರಣಗಳು, ಜೇವರ್ಗಿ ತಾಲ್ಲೂಕಿನಿಂದ 6 ಮತ್ತು ಚಿಂಚೋಳಿ ಮತ್ತು ಕಲಬುರಗಿ-ನಗರ ತಾಲ್ಲೂಕುಗಳಲ್ಲಿ ತಲಾ 2 ಬಾಲಕಿಯರ ಗರ್ಭಧಾರಣೆಯ ಪ್ರಕರಣಗಳು ವರದಿಯಾಗಿವೆ.

17 ವರ್ಷ ವಯಸ್ಸಿನ ಬಾಲಕಿಯರಲ್ಲಿ ಗರ್ಭಧಾರಣೆ ಪ್ರಮಾಣ ಹೆಚ್ಚು ಇರುವುದಾಗಿ ಅಂಕಿಅಂಶಗಳಿಂದ ತಿಳಿದುಬಂದಿದೆ. 14 ಹಾಗೂ 15 ವರ್ಷ ವಯಸ್ಸಿನ ಬಾಲಕಿಯರಲ್ಲಿಯೂ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿದ್ದು, ಇದು ಆತಂಕಕಾರಿ ಸಂಗತಿಯಾಗಿದೆ.

ಹದಿಹರೆಯದ ಬಾಲಕಿಯರ ಗರ್ಭಧಾರಣೆ ಕೇವಲ ಆರೋಗ್ಯ ಸಮಸ್ಯೆಯಷ್ಟೇ ಅಲ್ಲ, ಅದು ಸಾಮಾಜಿಕ ಹಾಗೂ ಆರ್ಥಿಕ ಸವಾಲುಗಳನ್ನೂ ಉಂಟುಮಾಡುತ್ತದೆ. ಅಕಾಲಿಕ ಹೆರಿಗೆ, ಕಡಿಮೆ ತೂಕದ ಶಿಶು ಜನನ, ತಾಯಿ-ಮಗು ಸಾವಿನ ಪ್ರಮಾಣ ಹೆಚ್ಚಳ, ರಕ್ತಹೀನತೆ (ಅನೀಮಿಯಾ), ಪ್ರೀಕ್ಲಾಂಪ್ಸಿಯಾ ಮೊದಲಾದ ಗಂಭೀರ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚುತ್ತದೆ. ಜೊತೆಗೆ, ಶಿಕ್ಷಣ ಮಧ್ಯೆ ನಿಲ್ಲುವುದು, ಭವಿಷ್ಯದ ಅವಕಾಶಗಳು ಕಡಿಮೆಯಾಗುವುದು ಮತ್ತು ಬಡತನದ ವಲಯದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣಗಳು ಜಿಲ್ಲೆಯಲ್ಲಿನ ಬಾಲ್ಯ ವಿವಾಹಗಳ ಪ್ರಮಾಣ ಹೆಚ್ಚಿರಬಹುದೆಂಬ ಗಂಭೀರ ಅನುಮಾನವನ್ನೂ ಹುಟ್ಟಿಸುತ್ತಿವೆ. ಕಾನೂನುಬದ್ಧವಾಗಿ ನಿಷೇಧವಾಗಿದ್ದರೂ, ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಬಾಲ್ಯ ವಿವಾಹಗಳು ನಡೆಯುತ್ತಿರುವ ಸಾಧ್ಯತೆ ಇದೆ.

ಇದರಿಂದಾಗಿ, ಜಿಲ್ಲಾಡಳಿತದ ಮೇಲಿನ ಹೊಣೆಗಾರಿಕೆ ಹೆಚ್ಚಾಗಿದೆ. ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಹಾಗೂ ಶಾಲಾ ಶಿಕ್ಷಕರು, ವಿಶೇಷವಾಗಿ ಹೈಸ್ಕೂಲ್ ಮಟ್ಟದ ಶಿಕ್ಷಕರು, ಇಂತಹ ಪ್ರಕರಣಗಳನ್ನು ಮುಂಚಿತವಾಗಿ ಗುರುತಿಸಿ ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸಬೇಕಿದೆ. ಗ್ರಾಮ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳು, ಪೋಷಕರಿಗೆ ಸಲಹೆ, ಮತ್ತು ಕಾನೂನು ಜಾರಿಯಲ್ಲಿ ಕಠಿಣ ಕ್ರಮಗಳ ಅವಶ್ಯಕತೆ ಇದೆ ಎಂದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಕದನ ವಿರಾಮ ವಿಸ್ತರಿಸುತ್ತೇವೆ, ಇರಾನ್‌ಗೆ ಮಾತುಕತೆಗೆ ಸಮಯ ನೀಡುತ್ತೇವೆ; ಹಾರ್ಮುಜ್ ಜಲಸಂಧಿ ನಿರ್ಬಂಧ ಮುಂದುವರಿಕೆ': ಡೊನಾಲ್ಡ್ ಟ್ರಂಪ್

ಟ್ರಂಪ್ ನಂತರ, ಈಗ ಪಾಕ್ ಪ್ರಧಾನಿ, Pak ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಗೆ ನೊಬೆಲ್ ಶಾಂತಿ ಪ್ರಶಸ್ತಿಗೆ ನಿರ್ಣಯ ಮಂಡನೆ!

ಪೂರಂ ಹಬ್ಬಕ್ಕೂ ಮುನ್ನ ದೊಡ್ಡ ದುರಂತ: ತ್ರಿಶೂರ್‌ ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ; 12 ಕಾರ್ಮಿಕರು ಸಾವು

IPL 2026: ಅಭಿಷೇಕ್ ಶರ್ಮಾ ಶತಕ, DC ವಿರುದ್ಧ SRH 47ರನ್ ಭರ್ಜರಿ ಜಯ

'ಎಲ್ಲ ಆರೋಪಿಗಳನ್ನೂ ಕಟಕಟೆಯಲ್ಲಿ ನಿಲ್ಲುಸುತ್ತೇನೆ': "Kaise Haraya" ಕಾರ್ಪೋರೇಟರ್ ಸಹರ್ ಶೇಖ್ ಸವಾಲು, ಟ್ರೋಲರ್ಸ್ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ!

SCROLL FOR NEXT