ರಾಜ್ಯ

ಬಿಜೆಪಿ ಮಾಜಿ ಮುಖಂಡನ ಪುತ್ರನ ಅತ್ಯಾಚಾರ ಕೇಸು: ಯುವತಿಗೆ ಪ್ರತಿ ತಿಂಗಳು ಪಾಲನೆ ಹಣ ನೀಡಲು ಹೈಕೋರ್ಟ್ ಆದೇಶ

ನ್ಯಾಯಾಲಯವು ಆರೋಪಿ ಕೃಷ್ಣ ಜೆ ರಾವ್ ಗೆ ಸಂತ್ರಸ್ತೆ ಹಾಗೂ ಮಗುವಿನ ಪಾಲನೆಗಾಗಿ ತಿಂಗಳಿಗೆ 75 ಸಾವಿರ ರೂಪಾಯಿ ವೈಯಕ್ತಿಕವಾಗಿ ಅಥವಾ ತನ್ನ ಪೋಷಕರ ಮೂಲಕ ಪಾವತಿಸಲು ಹೈಕೋರ್ಟ್ ಆದೇಶಿಸಿದೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಿಜೆಪಿ ಮಾಜಿ ನಾಯಕ ಜಗನ್ನಿವಾಸ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದ ಮುಂದಿನ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯನ್ನು ನೀಡಿದೆ. ಮದುವೆಯಾಗುವ ಭರವಸೆ ನೀಡಿ ಯುವತಿಯನ್ನು ಗರ್ಭಿಣಿಯಾಗಿಸಿದ್ದಾನೆ ಎಂಬ ಆರೋಪ ಈತನ ಮೇಲಿದೆ.

ನ್ಯಾಯಾಲಯವು ಆರೋಪಿ ಕೃಷ್ಣ ಜೆ ರಾವ್ ಗೆ ಸಂತ್ರಸ್ತೆ ಹಾಗೂ ಮಗುವಿನ ಪಾಲನೆಗಾಗಿ ತಿಂಗಳಿಗೆ 75 ಸಾವಿರ ರೂಪಾಯಿ ವೈಯಕ್ತಿಕವಾಗಿ ಅಥವಾ ತನ್ನ ಪೋಷಕರ ಮೂಲಕ ಪಾವತಿಸಲು ಹೈಕೋರ್ಟ್ ಆದೇಶಿಸಿದೆ.

ಇಂದು ಕೃಷ್ಣ ಜೆ. ರಾವ್ ಅವರು ಪ್ರಕರಣ ರದ್ದುಪಡಿಸಲು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಈ ಮಧ್ಯಂತರ ಆದೇಶವನ್ನು ನೀಡಿತು.

ಇದೇ ವೇಳೆ, ಮೊದಲ ಕಂತಿನ 75 ಸಾವಿರ ರೂಪಾಯಿಯನ್ನು ಒಂದು ವಾರದೊಳಗೆ ಮಗುವಿನ ತಾಯಿಗೆ ಪಾವತಿಸಿ, ನಂತರ ಪ್ರತೀ ತಿಂಗಳು ಪಾವತಿ ನೀಡಬೇಕೆಂದು ನ್ಯಾಯಾಲಯ ಸೂಚಿಸಿದೆ.

ಈ ಷರತ್ತಿನ ಆಧಾರದಲ್ಲಿ, ಮುಂದಿನ ಆದೇಶಗಳವರೆಗೆ ಪ್ರಕರಣದ ಎಲ್ಲಾ ಮುಂದಿನ ವಿಚಾರಣೆಗಳನ್ನು ಹೈಕೋರ್ಟ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

6 ನಾಗಾಗಳ ಹತ್ಯೆ ಬೆನ್ನಲ್ಲೇ ಮಣಿಪುರದಲ್ಲಿ ಕುಕಿ ಸಮುದಾಯದ ಇಬ್ಬರ ಬರ್ಬರ ಹತ್ಯೆ; 30 ಮನೆಗಳು ಸುಟ್ಟು ಕರಕಲು!

ಧರ್ಮಸ್ಥಳಕ್ಕೆ ಕಳಂಕ ಪ್ರಕರಣದಲ್ಲಿ ನಟ ಪ್ರಕಾಶ್ ರಾಜ್ ಹೆಸರು: 200 ಕೋಟಿ ಬಳಸಿ ಕೇರಳದಿಂದ ಷಡ್ಯಂತ್ರ?

ಹಗರಣಗಳೇ ಇಲ್ಲದ ಮೋದಿಯವರದ್ದು ಸ್ವಚ್ಛ ಆಡಳಿತ: ಯುಪಿಎ ಆಡಳಿತಾವಧಿ ಭ್ರಷ್ಟಾಚಾರದ ಕರಾಳ ಅಧ್ಯಾಯ; ವಿಜಯೇಂದ್ರ

ಪ್ರಧಾನಿ ಮೋದಿ ಭೇಟಿ ಮಾಡಿದ ಡಿಕೆಶಿ; ರಾಜ್ಯದ ಅಭಿವೃದ್ಧಿಗೆ ಸಹಕಾರ ಕೋರಿದ ಸಿಎಂ

350 ರನ್ ಟಾರ್ಗೆಟ್ ಕೊಟ್ರೂ ಆಫ್ಘಾನ್ ವಿರುದ್ಧ 4 ರನ್‌ನಿಂದ ಸೋತ ಭಾರತ!

SCROLL FOR NEXT