ನಿಟ್ಟೆ ವಿವಿ ಕಾರ್ಯಕ್ರಮದಲ್ಲಿ ನಿರ್ಮಲಾ ಸೀತರಾಮನ್ 
ರಾಜ್ಯ

ವಿಕಸಿತ ಭಾರತ್ ಕೇವಲ ಘೋಷಣೆಯಲ್ಲ- ರಾಷ್ಟ್ರೀಯ ಸಂಕಲ್ಪ: ಈಗಿನದು ನಿದ್ದೆಹೋದ ಭಾರತವಲ್ಲ; ಎಚ್ಚೆತ್ತ ಭಾರತ; ನಿರ್ಮಲಾ ಸೀತಾರಾಮನ್

ವಿಕಸಿತ ಭಾರತವೆಂದರೆ, ಪ್ರಾಯೋಗಿಕ, ಸ್ಪರ್ಧಾತ್ಮಕ, ನ್ಯಾಯೋಚಿತ ಹಾಗೂ ಹಸಿರು ಭಾರತ. ಇದನ್ನು ಸಾಧಿಸಲು ಸಂವಿಧಾನವೇ ದಾರಿದೀಪ. ಮಹಿಳೆಯರೇ ಅದರ ಚಾಲಕ ಶಕ್ತಿ.

ಉಡುಪಿ: ವಿಕಸಿತ್ ಭಾರತ್ 2047 ಕೇವಲ ಘೋಷಣೆಯಲ್ಲ ಅದೊಂದು ರಾಷ್ಟ್ರೀಯ ಸಂಕಲ್ಪ, ಮುಂದಿನ ಎರಡು ದಶಕಗಳಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಪರಿವರ್ತಿಸಲು ನಾಗರಿಕರು ಸಾಮೂಹಿಕವಾಗಿ "ಬೃಹತ್ ಯಜ್ಞ" ಕೈಗೊಳ್ಳಬೇಕೆಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ದೇರಳಕಟ್ಟೆಯ ಆವರಣದಲ್ಲಿ ನಿಟ್ಟೆ ಪರಿಗಣಿತ ವಿಶ್ವ ವಿದ್ಯಾನಿಲಯದ ವತಿಯಿಂದ ನಿಟ್ಟೆ ವಿನಯ ಹೆಗ್ಡೆ ಸ್ಮರಣಾರ್ಥ ಹಮ್ಮಿಕೊಂಡ ವಿಕಸಿತ -ಭಾರತ 2047 ರ ಮುನ್ನೋಟದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಭಾರತದ ಸಾಮರ್ಥ್ಯಗಳಲ್ಲಿ ನಂಬಿಕೆ ಇಡುವುದು, ವಸಾಹತುಶಾಹಿ ಯುಗದ ಮನಸ್ಥಿತಿಗಳನ್ನು ಬಿಡುವುದು ಮತ್ತು ರಾಷ್ಟ್ರೀಯ ವಿಶ್ವಾಸವನ್ನು ದುರ್ಬಲಗೊಳಿಸುವ "ನಿರಾಕರಣವಾದಿಗಳನ್ನು" ವಿರೋಧಿಸುವುದು ಇದರ ಪ್ರಮುಖ ಗುರಿಯಾಗಿದೆ ಎಂದು ಒತ್ತಿ ಹೇಳಿದರು.

ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ನಮ್ಮದು. ಭಾರತವು 2027 ರ ವೇಳೆಗೆ 6.5% ರಷ್ಟು ಬೆಳೆಯುವ ನಿರೀಕ್ಷೆಯಿದೆ ಎಂದು ಐಎಂಎಫ್‌ ಅಂದಾಜಿಸಿದೆ. ಜಗತ್ತಿನ ಅಗ್ರ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿ ಗುರುತಿಸಿಕೊಳ್ಳುವುದು, ಸ್ವಚ್ಚ ನೀರು, ಉತ್ತಮ ಗುಣಮಟ್ಟದ ಶಿಕ್ಷಣ, ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ಅದರ ಗುರಿಯಾಗಿದೆ ಎಂದರು.

ವಿಕಸಿತ ಭಾರತವೆಂದರೆ, ಪ್ರಾಯೋಗಿಕ, ಸ್ಪರ್ಧಾತ್ಮಕ, ನ್ಯಾಯೋಚಿತ ಹಾಗೂ ಹಸಿರು ಭಾರತ. ಇದನ್ನು ಸಾಧಿಸಲು ಸಂವಿಧಾನವೇ ದಾರಿದೀಪ. ಮಹಿಳೆಯರೇ ಅದರ ಚಾಲಕ ಶಕ್ತಿ. ಯುವ ಭಾರತೀಯರಲ್ಲಿ, ಅದರಲ್ಲೂ ಯುವತಿಯರಲ್ಲಿ ಮಹತ್ವಾಕಾಂಕ್ಷೆ ಹೆಚ್ಚಿದೆ.

ಜಾಗತಿಕ ಪೈಪೋಟಿಯನ್ನು ಎದುರಿಸಿ ಯಶಸ್ಸು ಕಾಣಉವ ಹಂಬಲ ಅವರಲ್ಲಿದೆ. ಗುಣಮಟ್ಟದ ಶಿಕ್ಷಣ, ವಿಶ್ವದರ್ಜೆಯ ಆರೋಗ್ಯ ಸೇವೆ, ಅರ್ಥಪೂರ್ಣ ಉದ್ಯೋಗ, ಶುಭ್ರ ಪರಿಸರವನ್ನು ಅವರು ಬಯಸುತ್ತಾರೆ. ಇವೆಲ್ಲವೂ ವಿಕಸಿತದ ಭಾರತದ ಗುರಿಗಳೂ ಹೌದು ಎಂದರು.

ಭಾರತದ ಐತಿಹಾಸಿಕ ಆರ್ಥಿಕ ಪ್ರಾಮುಖ್ಯತೆಯನ್ನು ಉಲ್ಲೇಖಿಸುತ್ತಾ, ವಸಾಹತುಶಾಹಿ ಆಳ್ವಿಕೆಯು ಶೇ. 4 ಕ್ಕಿಂತ ಕಡಿಮೆ ಮಾಡುವ ಮೊದಲು ದೇಶವು ಜಾಗತಿಕ GDP ಗೆ ಸುಮಾರು ಶೇ. 24 ರಷ್ಟು ಕೊಡುಗೆ ನೀಡಿತು , ಈ ನಷ್ಟವು ಕೇವಲ ಆರ್ಥಿಕವಲ್ಲ, ಆದರೆ ರಾಷ್ಟ್ರೀಯ ಮನೋಭಾವಕ್ಕೆ ಒಂದು ಹೊಡೆತ ಎಂದು ಕರೆದರು. ಕಳೆದ ದಶಕವು ಒಂದು ತಿರುವು ಪಡೆದುಕೊಂಡಿದೆ, ಭಾರತವು ಈಗ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದ್ದು, 28 ವರ್ಷದ ಯುವ ಜನತೆ, ವಿದ್ಯಾವಂತ ಕಾರ್ಯಪಡೆಯಿಂದ ಬೆಂಬಲಿತವಾಗಿದೆ ಎಂದು ಅವರು ಹೇಳಿದರು.

2013 ಮತ್ತು 2023 ರ ನಡುವೆ 25 ಕೋಟಿಗೂ ಹೆಚ್ಚು ಜನರನ್ನು ಬಡತನದಿಂದ ಹೊರತರುವುದು, ವಿದೇಶಿ ವಿನಿಮಯ ಮೀಸಲು 700 ಶತಕೋಟಿ ಡಾಲರ್ ತಲುಪುವುದು ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಯಶಸ್ಸು ಸೇರಿದಂತೆ ಪ್ರಮುಖ ಸಾಧನೆಗಳ ಬಗ್ಗೆ ಗಮನ ಸೆಳೆದರು.

‘ಕೃತಕ ಬುದ್ಧಿಮತ್ತೆ ಹಾಗೂ ತಂತ್ರಜ್ಞಾನಗಳು ಭಾರತೀಯರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಅಭಿವೃದ್ಧಿಪಡಿಸುವ ತಂತ್ರಜ್ಞಾನದ ನಮ್ಮದೇ ಪರಿಭಾಷೆಯದ್ದಾಗಿರಬೇಕು. ನಮ್ಮ ಸಮಾಜವನ್ನು ಅರ್ಥಮಾಡಿಕೊಳ್ಳುವಂತಿರಬೇಕು. ಜನರ ಹಕ್ಕುಗಳನ್ನು ಕಾಪಾಡುವಂತಿರಬೇಕು. ಹಸಿರು ಇಂಧನ, ಸಾರ್ವಜನಿಕ ಸಾರಿಗೆ, ನೀರಿನ ಭದ್ರತೆ, ಕಸ ನಿರ್ವಹಣೆ, ಹವಾಮಾನ ವೈಪರೀತ್ಯ ತಾಳಿಕೊಳ್ಳಬಲ್ಲ ಕೃಷಿ ಆದ್ಯತೆಯಾಗಬೇಕು. ನೀತಿ ನಿಯಮಗಳಿಂದಷ್ಟೇ ಅಭಿವೃದ್ದಿ ಸಾಧಿಸಲಾಗದು. ಜನರ ನಡವಳಿಕೆ, ಕಠಿಣ ಪರಿಶ್ರಮ ಹಾಗೂ ಏಕತೆ ದೇಶದ ಭವಿಷ್ಯವನ್ನು ನಿರ್ಧರಿಸಲಿವೆ’ ಎಂದರು.

ವಿಕಸಿತ್ ಭಾರತ್ ಕೇವಲ ಜಿಡಿಪಿ ಬೆಳವಣಿಗೆಯ ಬಗ್ಗೆ ಅಲ್ಲ, ರೈತರು, ಮಹಿಳೆಯರು ಮತ್ತು ಅಂಚಿನಲ್ಲಿರುವ ಸಮುದಾಯಗಳಿಗೆ ಸಮಗ್ರ ಅಭಿವೃದ್ಧಿ-ಖಾತರಿಪಡಿಸುವ ಅವಕಾಶ ನೀಡುತ್ತಿದೆ ಎಂದು ಸೀತಾರಾಮನ್ ತಿಳಿಸಿದರು.

ನಿರಂತರ ಸುಧಾರಣೆಗಳು, ಮೂಲಸೌಕರ್ಯ ಹೂಡಿಕೆ, ಸರಳೀಕೃತ ತೆರಿಗೆ ಮತ್ತು ಖಾಸಗಿ ವಲಯಕ್ಕೆ ಬಲವಾದ ಪಾತ್ರದ ಅಗತ್ಯವನ್ನು ಅವರು ಒತ್ತಿ ಹೇಳಿದರು,

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Assembly elections: ಪಶ್ಚಿಮ ಬಂಗಾಳದಲ್ಲಿ ಅಂತಿಮ ಹಂತದ ಮತದಾನ: ಸಿಎಂ ಮಮತಾ ಬ್ಯಾನರ್ಜಿ ಸೇರಿ ಪ್ರಮುಖ ನಾಯಕರ ಭವಿಷ್ಯ ಇಂದು ನಿರ್ಧಾರ

‘ನಾವಿಲ್ಲದಿದ್ದರೆ ಅಮೆರಿಕನ್ನರು ಫ್ರೆಂಚ್ ಮಾತನಾಡುತ್ತಿದ್ದರು’: ಹಾಸ್ಯ ಮೂಲಕವೇ ಟ್ರಂಪ್‌ಗೆ ಕಿಂಗ್ ಚಾರ್ಲ್ಸ್ III ಫುಲ್ ರೋಸ್ಟ್..!

ಅಮೆರಿಕಾ ಪಾಸ್‌ಪೋರ್ಟ್‌ನಲ್ಲಿ ಟ್ರಂಪ್ ಫೋಟೋ: 'ಫಾದರ್ ಆಫ್ ನೇಷನ್' ಪಟ್ಟಕ್ಕೇರುವ ತಂತ್ರವೇ..?

ಎಸ್‌ಸಿ ಒಳ ಮೀಸಲಾತಿ ಅಧಿಕೃತ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್

'ಇರಾನ್ ಸಂಪೂರ್ಣ ಕುಸಿಯುತ್ತಿದೆ': ಹಾರ್ಮುಜ್ ತೆರೆಯುವಂತೆ ಟೆಹ್ರಾನ್ ಬೇಡಿಕೊಳ್ಳುತ್ತಿದೆ: ಟ್ರಂಪ್

SCROLL FOR NEXT