ಪೊಲೀಸ್ ಠಾಣೆ ಮುಂಭಾಗ ನೆರೆದಿದ್ದ ಜನರ ಗುಂಪು 
ರಾಜ್ಯ

ಹೊಸಪೇಟೆ: ಪೊಲೀಸ್ ಠಾಣೆಯಲ್ಲಿ ಯುವಕ ಅನುಮಾನಾಸ್ಪದ ಸಾವು, ಲಾಕಪ್ ಡೆತ್ ಆರೋಪ!

ಪೊಲೀಸ್ ಠಾಣೆಯೊಳಗೆ ಖಲೀಲ್ ಅವರ ಆರೋಗ್ಯ ಹದಗೆಡಲು ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ವಶದಲ್ಲಿದ್ದಾಗ ಅವರಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ಅವರ ಕುಟುಂಬ ಆರೋಪಿಸಿದೆ.

ಹೊಸಪೇಟೆ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆಗಸ್ಟ್ 1ರ ಶನಿವಾರ ತಡರಾತ್ರಿ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ಕರೆತಂದಿದ್ದ 36 ವರ್ಷದ ಯುವಕನೋರ್ವ ಪೊಲೀಸ್ ಠಾಣೆಯಲ್ಲೇ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಪೊಲೀಸರ ಮಾನಸಿಕ ಹಾಗೂ ದೈಹಿಕ ಕಿರುಕುಳದಿಂದ ಯುವಕ ಸಾವನ್ನಪ್ಪಿದ್ದು, ಲಾಕಪ್ ಡೆತ್ ಆಗಿದೆ ಎಂದು ಆತನ ಕುಟುಂಬಸ್ಥರು ಆರೋಪಿಸಿದ್ದಾರೆ.

ಮೃತರನ್ನು ವಿಜಯನಗರ ಜಿಲ್ಲೆಯ ಜಾಲಿನಗರದ ನಿವಾಸಿ ಖಲೀಲ್ (36) ಎಂದು ಗುರುತಿಸಲಾಗಿದೆ. ಕೌಟುಂಬಿಕ ಜಗಳದ ನಂತರ ಖಲೀಲ್ ಅವರ ಪತ್ನಿ ತುರ್ತು ಸಹಾಯವಾಣಿ '112'ಕ್ಕೆ ಕರೆ ಮಾಡಿದ್ದರು. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಅವರನ್ನು ಠಾಣೆಗೆ ಕರೆತಂದು ಸಮಾಲೋಚನೆ (ಕೌನ್ಸೆಲಿಂಗ್) ನಡೆಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಆದರೆ, ಪೊಲೀಸ್ ಠಾಣೆಯೊಳಗೆ ಖಲೀಲ್ ಅವರ ಆರೋಗ್ಯ ಹದಗೆಡಲು ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ವಶದಲ್ಲಿದ್ದಾಗ ಅವರಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ಅವರ ಕುಟುಂಬ ಆರೋಪಿಸಿದೆ. ಇದು ಸಹಜ ಸಾವಲ್ಲ "ಲಾಕಪ್ ಡೆತ್ ಆಗಿದ್ದು, ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಮೂಲಗಳ ಪ್ರಕಾರ, ಖಲೀಲ್ ಅಂದು ನಸುಕಿನ ಜಾವ 3 ಗಂಟೆ ಸುಮಾರಿಗೆ ಅಸ್ವಸ್ಥರಾಗಿದ್ದು, ಅವರನ್ನು ಆಟೋರಿಕ್ಷಾದಲ್ಲಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಗೆ ತಲುಪಿದಾಗ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಈ ಘಟನೆಯಿಂದಾಗಿ ರೊಚ್ಚಿಗೆದ್ದ ಆತನ ಸಂಬಂಧಿಕರು, ಸ್ವೇಹಿತರು ಹಾಗೂ ಸಾರ್ವಜನಿಕರು ಆಸ್ಪತ್ರೆಯ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.

ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಹ್ನವಿ ಮತ್ತು ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದರು. ಘಟನೆ ನಡೆದಾಗ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪೊಲೀಸ್ ಠಾಣೆಯಲ್ಲಿ ನಡೆದ ಘಟನೆಗಳು, ಮೆಡಿಕಲ್ ರೆಕಾರ್ಡ್ಸ್, ಸಿಸಿಟಿವಿ ದೃಶ್ಯಾವಳಿಗಳು ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಒಂದು ವೇಳೆ ಅಧಿಕಾರಿಗಳಿಂದ ಯಾವುದೇ ಅನುಚಿತ ವರ್ತನೆ ಅಥವಾ ನಿರ್ಲಕ್ಷ್ಯ ಆಗಿರುವುದು ಕಂಡುಬಂದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮುಸ್ಲಿಮರು ಕಾಫಿರರೊಂದಿಗೆ ಸ್ನೇಹ ಬೆಳೆಸಬಾರದು’: ಭಾರತ-ಅಫ್ಘಾನ್ ಗೆಳತನಕ್ಕೆ Pak ಅಸೂಯೆ, Quran ಉಲ್ಲೇಖಿಸಿ ವಿಷ ಕಾರಿದ ಸೇನಾ ವಕ್ತಾರ..!

Iran ಮೇಲಿನ ದಾಳಿ ತಡೆಗೆ ಗಲ್ಫ್ ರಾಷ್ಟ್ರಗಳ ಸಲಹೆಯೇ ಪ್ರಮುಖ ಕಾರಣ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಸಿಎಂ ಡಿಕೆ ಶಿವಕುಮಾರ್ ಕಾಂಗ್ರೆಸ್ ನಾಯಕರಿಗಿಂತ ಹೆಚ್ಚಾಗಿ ಸ್ಟಾಲಿನ್ ಮಾತು ಕೇಳ್ತಾರೆ; ಕಾವೇರಿ ಜಲ ವಿವಾದದ ನಡುವೆ ತಮಿಳುನಾಡು ಸಚಿವ ಆರೋಪ!

ಖೈಬರ್ ಪಖ್ತುಂಖ್ವಾದಲ್ಲಿ "ಶಾಂತಿ ರ‍್ಯಾಲಿ"ಯಲ್ಲಿ ಆತ್ಮಹತ್ಯಾ ಬಾಂಬ್ ದಾಳಿ; 13 ಸಾವು

ರಸ್ತೆಗೆ ತಂದು ರಾಮಲಲ್ಲಾನಿಗೆ ಅಪಮಾನ: ಸಂಸದ ಪಪ್ಪು ಯಾದವ್ ಹತ್ಯೆಗೆ ಯತ್ನ ಆರೋಪ, Video!