ಜನಾರ್ದನ ರೆಡ್ಡಿ ಮತ್ತು ನಾಗೇಂದ್ರ 
ರಾಜ್ಯ

ಇದೇ ಭಯಕ್ಕೆ ನಾಗೇಂದ್ರನಿಗೆ ಪುನಃ ಮಂತ್ರಿಗಿರಿ ಕೊಟ್ಟಿದ್ದಾರೆ: ಜನಾರ್ದನ ರೆಡ್ಡಿ ಸ್ಫೋಟಕ ಹೇಳಿಕೆ!

ವಾಲ್ಮಿಕಿ ಅಭಿವೃದ್ಧಿ ಮಂಡಳಿಯ ಹಗರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಇಂತಹ ಸಂದರ್ಭದಲ್ಲಿ ಕಳಂಕಿತ ವ್ಯಕ್ತಿಗಳಿಗೆ ಮತ್ತೆ ಸಚಿವ ಸ್ಥಾನ ನೀಡಿರುವುದು ಈ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದರು

ಗಂಗಾವತಿ: ವಾಲ್ಮಿಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂ. ಹಗರಣ ಮಾಡಿ ಜೈಲು ಪಾಲಾಗಿದ್ದ ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಅವರಿಗೆ ಮತ್ತೆ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡಿರುವುದು ಸ್ವಾಗತ ಮಾಡಬೇಕೋ ಬೇಡವೋ ಎಂಬುದು ಬಳ್ಳಾರಿ ಜಿಲ್ಲೆಯ ಜನರ ವಿವೇಚನೆಗೆ ಬಿಟ್ಟದ್ದು ಎಂದು ಶಾಸಕ ಜಿ. ಜನಾರ್ದನ ರೆಡ್ಡಿ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಣವನ್ನು ಕಾಂಗ್ರೆಸ್ ನವರು ತಿಂದು ನನ್ನನ್ನು ಜೈಲಿಗೆ ಹಾಕಿಸಿದ್ರು ಎಂದು ಕೋರ್ಟ್ ಮುಂದೆ ನಾಗೇಂದ್ರ ಹೇಳುತ್ತಿದ್ದರು. ಇದೇ ಭಯಕ್ಕೆ ನಾಗೇಂದ್ರನನ್ನು ಮಂತ್ರಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

ನಾಗೇಂದ್ರ ಬಗ್ಗೆ ನನಗೂ ಅನುಕಂಪವಿದೆ, ಪಾಪ 10-20 ಪರ್ಸೆಂಟ್ ತಿಂದು ಜೈಲಿಗೆ ಹೋದರು. ಆದರೆ ಬುದ್ದಿವಂತರಾಗಿದ್ದಾರೆ, ಯಾರ್ಯಾರು ಹಣ ತಿಂದಿದ್ದಾರೆ ಎಂದು ಪಟ್ಟಿ ಮಾಡಿ ಕೋರ್ಟಿಗೆ ನೀಡುವುದಾಗಿ ಹೇಳಿದ್ದಾರೆ, ಹೀಗಾಗಿಯೇ ಕಾಂಗ್ರೆಸ್ ಅವರಿಗೆ ಮಣೆ ಹಾಕಿದೆ ಎಂದು ಆರೋಪಿಸಿದ್ದಾರೆ.

ವಾಲ್ಮಿಕಿ ಅಭಿವೃದ್ಧಿ ಮಂಡಳಿಯ ಹಗರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಇಂತಹ ಸಂದರ್ಭದಲ್ಲಿ ಕಳಂಕಿತ ವ್ಯಕ್ತಿಗಳಿಗೆ ಮತ್ತೆ ಸಚಿವ ಸ್ಥಾನ ನೀಡಿರುವುದು ಈ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದರು. ವ್ಯಕ್ತಪಡಿಸಿದರು.

ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಮತ್ತು ಕನಕಗಿರಿ ಕ್ಷೇತ್ರದ ಶಾಸಕ ಶಿವರಾಜ ತಂಗಡಗಿ ಅವರಿಗೆ ಸಚಿವ ಸ್ಥಾನ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಜಿಲ್ಲೆಯ ಇಬ್ಬರಿಗೆ ಮಂತ್ರಿ ಸ್ಥಾನ ಸಿಕ್ಕಿರುವುದು ಸಹಜವಾಗಿ ಖುಷಿ ತಂದಿದೆ. ಈ ಇಬ್ಬರೂ ಜಿಲ್ಲೆಯನ್ನು ಮಾದರಿಯಾಗಿ ಅಭಿವೃದ್ಧಿ ಮಾಡಲು ಸಾಕಷ್ಟು ಅವಕಾಶಗಳಿವೆ. ಮುಖ್ಯವಾಗಿ ಗಂಗಾವತಿಯ ಸಮಗ್ರವಾಗಿ ಅಭಿವೃದ್ಧಿಯ ಬಗ್ಗೆ ಸಮನ್ವಯದಿಂದ ನನಗೆ ಸಹಕಾರ ನೀಡಲಿದ್ದಾರೆ ಎಂದು ವಿಶ್ವಾಸ ಜನಾರ್ದನ ರೆಡ್ಡಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂದೇ ಉದಯನಿಧಿ ಸ್ಟಾಲಿನ್ ಬಿಡುಗಡೆ ಮಾಡಿ: ಪೊಲೀಸರಿಗೆ ಮದ್ರಾಸ್ ಹೈಕೋರ್ಟ್ ಆದೇಶ

‘CM ಡಿಕೆ ಶಿವಕುಮಾರ್ ಸೂಚನೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ, ಆದ್ರೂ...’: ರಾಜೀನಾಮೆ ಬಗ್ಗೆ ಹೊರಟ್ಟಿ ಹೇಳಿದ್ದೇನು?

ಹಿರಿಯ ಶಾಸಕ HK ಪಾಟೀಲ್‌ಗೆ ತಪ್ಪಿದ ಸಚಿವ ಸ್ಥಾನ: 21 ಕಾಂಗ್ರೆಸ್ ಕೌನ್ಸಿಲರ್‌ಗಳ ಸಾಮೂಹಿಕ ರಾಜೀನಾಮೆ!

'ಬಿಜೆಪಿಯ ದುರಹಂಕಾರದ ವಿರುದ್ಧ ಜನಾದೇಶ': ತಮ್ಮ ಐತಿಹಾಸಿಕ ಗೆಲುವಿಗೆ ಮೂರು ಕಾರಣ ನೀಡಿದ ಪ್ರಶಾಂತ್ ಕಿಶೋರ್!

ಕಾಂಗ್ರೆಸ್ ನಲ್ಲಿ ಕುಟುಂಬ ರಾಜಕೀಯದ ದರ್ಬಾರು: ಡಿಕೆಶಿ ಸಂಪುಟದಲ್ಲಿಯೂ 2ನೇ ತಲೆಮಾರಿನ ನಾಯಕರ ಕಾರುಬಾರು; ಸಾಮರ್ಥ್ಯಕ್ಕಿಂತ ಸಂಪರ್ಕ ಮುಖ್ಯವೇ?