ಹುಬ್ಬಳ್ಳಿ: ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಜೆನ್ ಝೀಯಿಂದ ಹೊಸ ಬದಲಾವಣೆಗಳು ಆಗುತ್ತಿದೆ. ಬಿಜೆಪಿಯವರು ಪ್ರಾಮಾಣಿಕ ಚುನಾವಣೆ ಮಾಡಿದರೆ ಅವರು ಖಂಡಿತಾ ಸೋಲುತ್ತಾರೆ. ಹೀಗಾಗಿ ನ್ಯಾಯಯುತ ಚುನಾವಣೆ ಮಾಡಲು ಅವರು ಬಿಡುವುದಿಲ್ಲ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಜನರ ಪ್ರಶ್ನೆಗಳಿಗೆ ಅವರು ಉತ್ತರಿಸುವುದಿಲ್ಲ. ಬದಲಾಗಿ ಧರ್ಮ, ದೇವರ ಹೆಸರಲ್ಲಿ ಮಾತ್ರ ಮಾತನಾಡುತ್ತಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಬಿಜೆಪಿಯವರು ಬರ ಅಧ್ಯಯನ ಮಾಡುತ್ತಿರುವುದು ಒಳ್ಳೆಯದು. ಅಧ್ಯಯನ ಮಾಡಿ ವರದಿಯನ್ನು ಕೇಂದ್ರ ಸರಕಾರಕ್ಕೆ ನೀಡಲಿ. ಕೇಂದ್ರದಿಂದ ರಾಜ್ಯಕ್ಕೆ ಬೆಳೆ ಪರಿಹಾರವಾದರೂ ಬರಲಿ ಎಂದು ಸಚಿವ ಸಂತೋಷ ಲಾಡ್ ತಿಳಿಸಿದರು.
ಕೇಂದ್ರದಿಂದ ನಮಗೆ ಸಹಕಾರ ಸಿಗುತ್ತಿಲ್ಲ. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಿಗೆ ಮಲತಾಯಿ ಧೋರಣೆ ಆಗುತ್ತಿದೆ. ಕೇಂದ್ರ ಸರ್ಕಾರದಿಂದ ಬೆಳೆ ಪರಿಹಾರ ದುಡ್ಡು ಬಂದಿಲ್ಲ. ಬಿಜೆಪಿ ರಾಜ್ಯಗಳಿಗೆ ನೀಡಿದಷ್ಟು ಅನುಧಾನ ನಮಗೆ ಬಂದಿಲ್ಲ. ಬೆಳೆ ವಿಮೆಗೆ ಇರುವ ನಿಯಮಗಳು ಬದಲಾಗಬೇಕು. ಬಿಜೆಪಿಯವರು ಬರ ಅಧ್ಯಯನ ಮಾಡಿ ಕೇಂದ್ರ ಸರಕಾರಕ್ಕೆ ಸಲ್ಲಿಸಲಿ'' ಎಂದರು.
ರೈತರು ಮಧ್ಯಂತರ ಪರಿಹಾರ ಕೇಳುತ್ತಿರುವುದು ಸರಿಯಿದೆ. ಮುಖ್ಯಮಂತ್ರಿಗಳು ಬರ ವೀಕ್ಷಣೆ ಮಾಡುವಂತೆ ತಾಕೀತು ಮಾಡಿದ್ದಾರೆ. ಎಲ್ಲಾ ತಾಲೂಕಿಗೆ ಹೋಗಿ ಬರ ಅಧ್ಯಯನ ಮಾಡಿ ವರದಿ ನೀಡುತ್ತೇವೆ'' ಎಂದರು.