ಕೆಎಸ್ ಆರ್ ಟಿಸಿ ಫ್ಲೈಬಸ್  
ರಾಜ್ಯ

ಕೆಂಪೇಗೌಡ ವಿಮಾನ ನಿಲ್ದಾಣ–ಕೋಝಿಕ್ಕೋಡ್ ನಡುವೆ ಆಗಸ್ಟ್ 15ರಿಂದ KSRTC ಫ್ಲೈಬಸ್ ಸೇವೆ

ಪ್ರತಿದಿನ ಎರಡು ಬಸ್‌ಗಳು ಸಂಚರಿಸಲಿದ್ದು, ಯಲಹಂಕ, ಹೆಬ್ಬಾಳ, ನಾಯಂಡಹಳ್ಳಿ ಮೆಟ್ರೋ ನಿಲ್ದಾಣ, ಮೈಸೂರು, ಹುಣಸೂರು, ಗೋಣಿಕೊಪ್ಪ, ಪೊನ್ನಂಪೇಟೆ, ಕುಟ್ಟ, ಮಾನಂತವಾಡಿ ಮತ್ತು ಕಲ್ಪೆಟ್ಟ ಮಾರ್ಗವಾಗಿ ಕೋಝಿಕ್ಕೋಡ್ ಗೆ ತೆರಳಲಿವೆ.

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಆಗಸ್ಟ್‌ 15ರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಮತ್ತು ಕೋಝಿಕ್ಕೋಡ್ ನಡುವೆ ಹೊಸ ಫ್ಲೈಬಸ್ ಸೇವೆಯನ್ನು ಆರಂಭಿಸಲಿದೆ.

ಪ್ರತಿದಿನ ಎರಡು ಬಸ್‌ಗಳು ಸಂಚರಿಸಲಿದ್ದು, ಯಲಹಂಕ, ಹೆಬ್ಬಾಳ, ನಾಯಂಡಹಳ್ಳಿ ಮೆಟ್ರೋ ನಿಲ್ದಾಣ, ಮೈಸೂರು, ಹುಣಸೂರು, ಗೋಣಿಕೊಪ್ಪ, ಪೊನ್ನಂಪೇಟೆ, ಕುಟ್ಟ, ಮಾನಂತವಾಡಿ ಮತ್ತು ಕಲ್ಪೆಟ್ಟ ಮಾರ್ಗವಾಗಿ ಕೋಝಿಕ್ಕೋಡ್ ಗೆ ತೆರಳಲಿವೆ.

ಒಂದು ಬಸ್ ರಾತ್ರಿ 10.45ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೊರಟು ಬೆಳಿಗ್ಗೆ 7.15ಕ್ಕೆ ಕೋಝಿಕ್ಕೋಡ್ ಗೆ ತಲುಪಲಿದೆ. ಮತ್ತೊಂದು ಬಸ್ ಬೆಳಿಗ್ಗೆ 4.15ಕ್ಕೆ ಹೊರಟು ಸಂಜೆ 7.30ಕ್ಕೆ ಕೋಝಿಕ್ಕೋಡ್ ತಲುಪಲಿದೆ.

ಪ್ರಯಾಣ ದರವನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ:

  • ಮೈಸೂರು – 960 ರೂ

  • ಗೋಣಿಕೊಪ್ಪ – 1,200 ರೂ

  • ಮಾನಂತವಾಡಿ – 1,350 ರೂ

  • ಕಲ್ಪೆಟ್ಟ – 1,400 ರೂ

  • ಕೋಝಿಕ್ಕೋಡ್ – 1,500 ರೂ

ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅನಂತ್ ನಾಗ್​ಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ; ಸ್ಟ್ಯಾಂಡಿಂಗ್ ಒವೇಶನ್; ರಕ್ಷಿತ್​ ಶೆಟ್ಟಿ ನಿರ್ಮಾಣದ 'ಮಿಥ್ಯ'ಗೆ 3 ರಾಷ್ಟ್ರ ಪ್ರಶಸ್ತಿ! Video

ಗಣೇಶೋತ್ಸವ ಸಂಭ್ರಮಾಚರಣೆಗೆ ಬಾಂಬೆ ಹೈಕೋರ್ಟ್ ಬ್ರೇಕ್​! ರಸ್ತೆಗಳಲ್ಲಿ ಪಟಾಕಿ ಹಚ್ಚುವಂತಿಲ್ಲ; ಸಂಪೂರ್ಣ ನಿಷೇಧ!

'ಶಾರುಖ್ ಖಾನ್‌ಗೆ ಏನಾಯಿತು?' ನಡೆಯಲು ಕಷ್ಟಪಡುತ್ತಿರುವ ಖ್ಯಾತ ನಟ, Video ವೈರಲ್, ಅಭಿಮಾನಿಗಳಲ್ಲಿ ಆತಂಕ!

ದೆಹಲಿ ಗಲಭೆ ಆರೋಪಿ ಶಾರ್ಜೀಲ್ ಇಮಾಮ್‌ಗೆ 7 ದಿನ ಮಧ್ಯಂತರ ಜಾಮೀನು!

ಜನರ ಎದುರೇ ರೈಲಿನಲ್ಲಿ ದಂಪತಿಯ ಅಸಭ್ಯ ವರ್ತನೆ: ಇದರಿಂದ ಕೆರಳಿದ ಮಹಿಳೆ ಮಾಡಿದ್ದೇನು? ವಿಡಿಯೋ ನೋಡಿ!