ಬೆಂಗಳೂರು: ವೃದ್ಧಾಪ್ಯವನ್ನು ಲೆಕ್ಕಿಸದೆ ಸಾಹಸ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವ ಬೆಂಗಳೂರು ಮೂಲದ ಸೇನಾ ನಿವೃತ್ತ ಲೆಫ್ಟಿನೆಂಟ್ ಕರ್ನಲ್ (ನಿವೃತ್ತ) ಒಪಿಎನ್ ಕಲ್ಯಾಣ್ ಅವರ ಒಲವು ಬಹುಶಃ ಅನೇಕರಿಗೆ ತಿಳಿದಿರಬಹುದು. ಈಗ ಮತ್ತೊಂದು ಸಾಧನೆಯ ಮೂಲಕ ಸುದ್ದಿಯಲ್ಲಿದ್ದಾರೆ.
77 ವರ್ಷದ ಹಿರಿಯ ಯೋಧರ ಇತ್ತೀಚಿನ ಸಾಧನೆಗಳು ಉತ್ತರ ಏಷ್ಯಾದ ದೂರದ ಪ್ರದೇಶಗಳಿಂದ ಬಂದಿವೆ. ಸೈಬೀರಿಯಾದಲ್ಲಿ, ಆಗಸ್ಟ್ 1 ರಂದು ಓಮ್ಸ್ಕ್‌ನಲ್ಲಿ ನಡೆದ XXXVI ಸೈಬೀರಿಯನ್ ಅಂತರರಾಷ್ಟ್ರೀಯ ಮ್ಯಾರಥಾನ್‌ನಲ್ಲಿ ಭಾಗವಹಿಸುವ ಮೂಲಕ ಅವರ "ದೀರ್ಘಕಾಲದ ಕನಸು" ಈಡೇರಿದೆ.
ಅಚ್ಚರಿಯ ಸಂಗತಿಯೆಂದರೆ, ಈ ಮ್ಯಾರಥಾನ್ ನ ಮರುದಿನವೇ, ಕಲ್ಯಾಣ್ ಮತ್ತೆ ಆಕಾಶಕ್ಕೆ ಹಾರಿದರು, ಓಮ್ಸ್ಕ್‌ನಿಂದ 3,000 ಮೀಟರ್ ಎತ್ತರದಿಂದ ಟಂಡೆಮ್ ಸ್ಕೈಡೈವ್ ನ್ನು ಪೂರ್ಣಗೊಳಿಸಿದರು. ಸುಮಾರು 6,190 ಓಟಗಾರರು ಭಾಗವಹಿಸಿದ್ದ ಮ್ಯಾರಥಾನ್‌ನಲ್ಲಿ ಭಾಗವಹಿಸಲು ಅವರು ಜುಲೈ 31 ರಂದು ನಗರವನ್ನು ತಲುಪಿದ್ದರು. ಕಲ್ಯಾಣ್ ಸೇರಿದಂತೆ, 10 ಕಿಮೀ ಉದ್ದದ ಕಠಿಣ ಮ್ಯಾರಥಾನ್‌ನಲ್ಲಿ ಕೇವಲ ನಾಲ್ಕು ಅಂತರರಾಷ್ಟ್ರೀಯ ಸ್ಪರ್ಧಿಗಳು ಇದ್ದರು: ಕೀನ್ಯಾದಿಂದ ಇಬ್ಬರು ಮತ್ತು ಇಥಿಯೋಪಿಯಾದ ಒಬ್ಬರು, ಭಾಗಿಯಾಗಿದ್ದರು.
"ಸೈಬೀರಿಯನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿ ಭಾರತವನ್ನು ಪ್ರತಿನಿಧಿಸುವುದು ನನಗೆ ಹೆಮ್ಮೆಯ ಮತ್ತು ಭಾವನಾತ್ಮಕ ಕ್ಷಣವಾಗಿತ್ತು. ಸೈಬೀರಿಯಾದಲ್ಲಿ ಓಡುವುದು ನನ್ನ ಜೀವಮಾನದ ಕನಸಾಗಿತ್ತು, ಮತ್ತು ಅಂತಿಮವಾಗಿ, 77 ನೇ ವಯಸ್ಸಿನಲ್ಲಿ, ನಾನು ಅದನ್ನು ಸಾಧಿಸಲು ಸಾಧ್ಯವಾಯಿತು" ಎಂದು ಕಲ್ಯಾಣ್ ಹೇಳಿದ್ದಾರೆ.
ಸರಿಸುಮಾರು 3,000 ಮೀಟರ್‌ಗಳಿಂದ ಜಿಗಿದ ಅವರು, ಸುಮಾರು 1,700 ಮೀಟರ್‌ಗಳಲ್ಲಿ ಪ್ಯಾರಾಚೂಟ್ ತೆರೆಯುವ ಮೊದಲು ಸುಮಾರು 200 ಕಿ.ಮೀ. ವೇಗದಲ್ಲಿ ಸುಮಾರು 40 ಸೆಕೆಂಡುಗಳ ಕಾಲ ಫ್ರೀಫಾಲ್ ಅನ್ನು ಅನುಭವಿಸಿದರು. "ಸೈಬೀರಿಯಾದಲ್ಲಿನ ಸ್ಕೈಡೈವ್ ಅದ್ಭುತ ಮತ್ತು ರೋಮಾಂಚಕ ಜಿಗಿತವಾಗಿತ್ತು. ಫ್ರೀಫಾಲ್ ಒಂದು ಮರೆಯಲಾಗದ ಅನುಭವವಾಗಿತ್ತು" ಎಂದು ಕಲ್ಯಾಣ್ ಹೇಳಿದರು.