ರಮೇಶ್ ಕುಮಾರ್ - ಸಿದ್ದರಾಮಯ್ಯ 
ರಾಜ್ಯ

ಸಿದ್ದರಾಮಯ್ಯ ರೆಡಿಯಾಗಿದ್ದ ಮನೆಗೆ ಎಂಟ್ರಿ ಕೊಟ್ಟವರು; ಹಾಗಾಗಿ, ಡಿಕೆ ಜೊತೆ ಸೇರಿ ಪಕ್ಷ ಸಂಘಟಿಸಲಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್‌

ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ರಾಂತಿ ಬಯಸಿ ರಾಜಕೀಯದಿಂದ ನಿವೃತ್ತಿ ಆಗುವ ಮುನ್ಸೂಚನೆ ನೀಡಿದ್ದಾರೆ. ಇದರ ನಡುವೆ ಮಾಜಿ ಸ್ಪೀಕರ್ ರಮೇಶ್ ಕುಮಾರ್‌, ಸಿದ್ದರಾಮಯ್ಯ ಕಟ್ಟಿದ ಮನೆಗೆ ಪ್ರವೇಶ ಪಡೆದವರು. ವಿಶ್ರಾಂತಿ ಪಡೆಯದೇ ಡಿಕೆ ಶಿವಕುಮಾರ್ ಜೊತಗೂಡಿ ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದು ಹೇಳಿದ್ದಾರೆ.

ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ರಾಂತಿ ಬಯಸಿ ರಾಜಕೀಯದಿಂದ ನಿವೃತ್ತಿ ಆಗುವ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ಇದರ ನಡುವೆ ವಿಧಾನಸಭೆ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್‌ ಅವರು, ಸಿದ್ದರಾಮಯ್ಯ ಕಟ್ಟಿದ ಮನೆಗೆ ಪ್ರವೇಶ ಪಡೆದವರು. ಹಾಗಾಗಿ, ಸಿದ್ದರಾಮಯ್ಯ ವಿಶ್ರಾಂತಿ ಪಡೆಯದೇ ಸಿಎಂ ಡಿಕೆ ಶಿವಕುಮಾರ್ ಜೊತಗೂಡಿ ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದು ಹೇಳಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಅರಸು ಎದುರಿಸಿದಷ್ಟು ಸವಾಲನ್ನು ಸಿದ್ದರಾಮಯ್ಯ ಎದುರಿಸಲಿಲ್ಲ!

ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಿದ್ದರಾಮಯ್ಯ 79 ರಾಜಕೀಯ ಮಾರ್ಚ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಅವರು, ಸಿದ್ದರಾಮಯ್ಯ ಅವರು ಸಿಎಂ ಹುದ್ದೆಯಿಂದ ಕೆಳಗಿಳಿದ ನಂತರ ತಮ್ಮ ಕೆಲಸ ಮುಗಿಯಿತು ಎಂದು ವಿಶ್ರಾಂತಿ ಪಡೆಯಬಾರದು. ಬದಲಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸೇರಿ ಪಕ್ಷವನ್ನು ಬಲವಾಗಿ ಕಟ್ಟಬೇಕು.

ಯಾಕಂದ್ರೆ, 1969ರ ಆಂತರಿಕ ಬೆಳವಣಿಗೆಯಿಂದ ಕಾಂಗ್ರೆಸ್ ಎರಡು ಭಾಗವಾದಾಗ ದೇವರಾಜ ಅರಸು ಅವರು ಅನೇಕ ನೋವು ಮತ್ತು ಸವಾಲುಗಳನ್ನು ಎದುರಿಸಬೇಕಾಯಿತು. ಆದರೆ ಸಿದ್ದರಾಮಯ್ಯ ಅವರಿಗೆ ಅಂತಹ ಕಠಿಣ ಪರಿಸ್ಥಿತಿಗಳು ಎದುರಾಗಲಿಲ್ಲ. ಅದರಂತೆ, ಸಿದ್ದರಾಮಯ್ಯ ಅವರು ಸಿದ್ಧವಾಗಿದ್ದ ಮನೆಗೆ ಪ್ರವೇಶ ಪಡೆದವರು. ಹಾಗಾಗಿ, ಸಿದ್ದರಾಮಯ್ಯ ಅವರು ನನ್ನ ಕೆಲಸ ಮುಗಿಯಿತು ಎಂದು ಸುಮ್ಮನೆ ಇರದೇ ಕಾಂಗ್ರೆಸ್ ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದು ರಮೇಶ್ ಕುಮಾರ್ ಹೇಳಿದರು.

ಕಾರ್ಯಕ್ರಮದಲ್ಲಿ ಸಚಿವ ಯು.ಟಿ. ಖಾದರ್, ಮಾಜಿ ಉಪಸಭಾಪತಿ ಮಲ್ಲಿಕಾರ್ಜುನ ಖುಂಟಿ, ವಿಧಾನ ಪರಿಷತ್ ಸದಸ್ಯ ಡಾ. ಡಿ. ತಿಮ್ಮಯ್ಯ, ಮಾಜಿ ಸಿಎಂ ಮಾಧ್ಯಮ ಕಾರ್ಯದರ್ಶಿ ಕೆ.ವಿ. ಪ್ರಭಾಕರ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆ ಶಿವಕುಮಾರ್ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ: ಮುನಿಯಪ್ಪಗೆ ಸಮಾಜಕಲ್ಯಾಣ, ಜಮೀರ್ – ವಸತಿ ಖಾತೆ?

ಮುಂದುವರಿದ ಕೌತುಕ: ಅಮಾವಾಸ್ಯೆ ಕಳೆದ ಬಳಿಕವಷ್ಟೇ ಖಾತೆ ಹಂಚಿಕೆ 'ಗ್ರಹಣ ಮುಕ್ತ'!

'ನನ್ನ ಮುಂದೆ ನಿಂತು ಟೈಪ್ ಮಾಡಿಸಿ ಸಹಿ ಹಾಕಿಸಿದ್ರು: ಆಸ್ಪತ್ರೆಯಲ್ಲಿದ್ದಾಗಲೂ CM ರಾಜೀನಾಮೆ ನೀಡುವಂತೆ ಒತ್ತಡ; ಮನಸ್ಸಿಗೆ ನೋವಾಗಿದೆ'

ರಾಮನಾಮ ಜಪಿಸಿ ರಾಮನ ದುಡ್ಡನ್ನೇ ನುಂಗಿದ ಬಿಜೆಪಿಗರು ಸಂತರಾ? ನೆಹರೂ ಬಗ್ಗೆ ಮಾತಾಡಲು ರಾಮುಲುಗೆ ನೈತಿಕ ಹಕ್ಕಿಲ್ಲ; ತಂಗಡಗಿ

ಸಜಾ ಕೈದಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ: ದರ್ಶನ್ ಬ್ಯಾರಕ್ ನಲ್ಲೂ ಶೋಧ!