ಆರ್. ಅಶೋಕ್ 
ರಾಜ್ಯ

ಮನೆ ಮುಂದೆ ಕಾರು ನಿಲ್ಲಿಸೋದಕ್ಕೂ ದಂಡ; ಲೂಟಿ ಸರ್ಕಾರದ ಹೊಸ ಸ್ಕೆಚ್: ಆರ್ ಅಶೋಕ್ ವಾಗ್ದಾಳಿ

ಕಾಂಗ್ರೆಸ್ ಸರ್ಕಾರದ ತುಘಲಕ್ ದರ್ಬಾರಿನಲ್ಲಿ ಬೆಂಗಳೂರಿನ ಜನತೆ ತಮ್ಮ ಸ್ವಂತ ಮನೆಯ ಮುಂದೆ ತಮ್ಮ ಸ್ವಂತ ಕಾರು ನಿಲ್ಲಿಸುವುದಕ್ಕೂ ದಂಡ ಕಟ್ಟಬೇಕಂತೆ. GBA ಹೊಸ ಪಾರ್ಕಿಂಗ್ ರೂಲ್ಸ್ 2026 ಹೆಸರಿನಲ್ಲಿ, ಬೆಂಗಳೂರಿಗರು ತಮ್ಮ ಮನೆಯ ಮುಂಭಾಗದ ರಸ್ತೆಯಲ್ಲಿ...

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ತುಘಲಕ್ ದರ್ಬಾರಿನಲ್ಲಿ ಬೆಂಗಳೂರಿನ ಜನತೆ ತಮ್ಮ ಸ್ವಂತ ಮನೆಯ ಮುಂದೆ ತಮ್ಮ ಸ್ವಂತ ಕಾರು ನಿಲ್ಲಿಸುವುದಕ್ಕೂ ದಂಡ ಕಟ್ಟಬೇಕಂತೆ. ಜಿಬಿಎ (GBA) ಹೊಸ ಪಾರ್ಕಿಂಗ್ ರೂಲ್ಸ್ 2026 ಹೆಸರಿನಲ್ಲಿ, ಬೆಂಗಳೂರಿಗರು ತಮ್ಮ ಮನೆಯ ಮುಂಭಾಗದ ರಸ್ತೆಯಲ್ಲಿ ಕಾರು ನಿಲ್ಲಿಸಲು ವರ್ಷಕ್ಕೆ 15,000 ದಿಂದ 25,000 ವರೆಗೆ ದಂಡದ ರೂಪದ ಶುಲ್ಕ ತೆರಬೇಕು ಎನ್ನುವ ತುಘಲಕ್ ನೀತಿಯನ್ನು ಜಾರಿಗೆ ತರಲು ಸಿಎಂ ಡಿಕೆ ಶಿವಕುಮಾರ್ ಮತ್ತು ಸಚಿವ ಕೃಷ್ಣಭೈರೇಗೌಡ ಸ್ಕೆಚ್ ಹಾಕಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

* ಖಾಲಿ ನಿವೇಶನಗಳಲ್ಲಿ ಕಸ ತೆಗೆಯುವ ನೆಪದಲ್ಲಿ ಕೋಟಿ ಕೋಟಿ ಗುಡಿಸಿದ್ದು ಸಾಲದೆಂಬಂತೆ, ಈಗ 'ಮನೆ ಮುಂದಿನ ಪಾರ್ಕಿಂಗ್' ಮೇಲೆಯೂ ಕಣ್ಣು ಬಿದ್ದಿದೆಯೇ?

* ಮನೆ ಮುಂದೆ ಗಾಡಿ ನಿಲ್ಲಿಸೋದಕ್ಕೂ ಟ್ಯಾಕ್ಸಾ?: ಸಾರ್ವಜನಿಕರು ಲಕ್ಷಾಂತರ ರೂಪಾಯಿ ತೆರಿಗೆ ಕಟ್ಟಿ ಮನೆ ಕಟ್ಟಿಕೊಂಡಿರುವುದು ನಿಮ್ಮ ಕಮಿಷನ್ ದಂಧೆಗೆ ಸಾಲದೆಂದು ಮನೆ ಮುಂದಿನ ಜಾಗಕ್ಕೂ ಲೂಟಿ ಶುಲ್ಕ ವಿಧಿಸುತ್ತಿದ್ದೀರಾ?

* ರಸ್ತೆಗಳ ಸ್ಥಿತಿ ಏನಾಗಿದೆ?: ಸಾಲು ಸಾಲು ಗುಂಡಿಗಳು, ಮಳೆಯಾದರೆ ಈಜುಕೊಳವಾಗುವ ರಸ್ತೆಗಳನ್ನು ಸರಿಪಡಿಸಲು ಯೋಗ್ಯತೆಯಿಲ್ಲದ ಸರ್ಕಾರಕ್ಕೆ ಈ ಪಾರ್ಕಿಂಗ್ ಟ್ಯಾಕ್ಸ್ ವಸೂಲಿ ಮಾಡಲು ಏನು ನೈತಿಕ ಹಕ್ಕಿದೆ?

* ಸಾರ್ವಜನಿಕ ಸಾರಿಗೆ ಸರಿಪಡಿಸಿ: ಪಾರ್ಕಿಂಗ್ ದರ ಏರಿಸಿ ಜನರನ್ನು ದೋಚುವ ಮೊದಲು ನಂಟುಕೊಂಡಿರುವ ಮೆಟ್ರೋ ಕಾಮಗಾರಿ ಚುರುಕುಗೊಳಿಸಿ, ಬಿಎಂಟಿಸಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಿ.

ಮನೆ ಮುಂದೆ ವಾಹನ ನಿಲ್ಲಿಸುವುದಕ್ಕೂ ಕನ್ನ ಹಾಕಲು ಹೊರಟಿರುವ ಈ ಜನವಿರೋಧಿ 'ಪಾರ್ಕಿಂಗ್ ಲೂಟಿ ನೀತಿ'ಯನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ತಕ್ಷಣವೇ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಮುಂಬರುವ ಜಿಬಿಎ ಚುನಾವಣೆಯಲ್ಲಿ ಬೆಂಗಳೂರಿನ ಜನತೆ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ಗ್ಯಾರೆಂಟಿ ಎಂದು ಅಶೋಕ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: 1 ನಿಮಿಷದಲ್ಲಿ 2 ಚಿನ್ನದ ಪದಕ ಗೆದ್ದ ಭಾರತ, 75 ಪದಕಗಳೊಂದಿಗೆ 5ನೇ ಸ್ಥಾನಕ್ಕೆ ಲಗ್ಗೆ!

‘CEC ಜ್ಞಾನೇಶ್ ಕುಮಾರ್ ದೇಶದ್ರೋಹಿ’: ಮುಂಬೈನಲ್ಲಿ ಭುಗಿಲೆದ್ದ Cockroach Janata Party ಪ್ರತಿಭಟನೆ, ರಾಜೀನಾಮೆಗೆ ಬಿಗಿಪಟ್ಟು..!

ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿ Biggboss ಮಾಜಿ ಸ್ಪರ್ಧಿ ಜಾಹ್ನವಿ ನೇಮಕ!

Pakನ ಹೊಸ ನಾಟಕ: ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಹತ್ಯೆಗೀಡಾದ SSG ಉಗ್ರ ಜೀವಂತವಾಗಿದ್ದಾನೆ ಎಂದ ಪಾಕ್ ಸೇನೆ

ಬೆಳಗಾವಿಯಲ್ಲಿ 100 ಕೋಟಿ ರೂ ವೆಚ್ಚದಲ್ಲಿ ಗಾಂಧೀಜಿ ಸ್ಮಾರಕ ನಿರ್ಮಾಣ- ಸಿಎಂ ಡಿಕೆ ಶಿವಕುಮಾರ್ ಘೋಷಣೆ!