ರಾಯಚೂರು ಪೊಲೀಸರಿಂದ ಶಂಕಿತ ಉಗ್ರನ ಬಂಧನ 
ರಾಜ್ಯ

ರಾಯಚೂರು ಪೊಲೀಸರ ಭರ್ಜರಿ ಬೇಟೆ; ಉಗ್ರರೊಂದಿಗೆ ಸಂಪರ್ಕ, ಟೀಂ ಅಂಗಡಿ ಮಾಲೀಕ Sahil ಬಂಧನ, ಶಸ್ತ್ರಾಸ್ತ್ರ ಪೂರೈಕೆ ಚರ್ಚೆ ಮಾಡಿದ್ದ ಭೂಪ!

ವಿಚಾರಣೆ ವೇಳೆ, ಅರಬ್ ದೇಶವೊಂದರಲ್ಲಿ ನೆಲೆಸಿದ್ದಾನೆ ಎನ್ನಲಾದ ರಾಣಾ ಭಾಯ್, ಭಾರತದಲ್ಲಿ ಗಲಭೆಗಳನ್ನು ಪ್ರಚೋದಿಸುವಂತೆ ತನ್ನನ್ನು ಪ್ರೇರೇಪಿಸಿದ್ದಾನೆ. ಇದಕ್ಕಾಗಿ ಹಣ ಹಾಗೂ ಶಸ್ತ್ರಾಸ್ತ್ರಗಳನ್ನು ನೀಡುವುದಾಗಿ ಭರವಸೆ..

ರಾಯಚೂರು: ಉಗ್ರ ಸಂಚಿನ ಆರೋಪ ಮೇರೆಗೆ ರಾಯಚೂರು ಪೊಲೀಸರು ಟೀ ಸ್ಟಾಲ್ ಮಾಲೀಕ ಮಹಮದ್ ಸಾಹಿಲ್ ಎಂಬಾತನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಭಾರತದಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಉದ್ದೇಶದಿಂದ ವಿದೇಶದಲ್ಲಿರುವ ವ್ಯಕ್ತಿಯೊಬ್ಬನೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಯಚೂರಿನ ಟೀ ಸ್ಟಾಲ್ ಮಾಲೀಕ ಸಾಹಿಲ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಆಗಸ್ಟ್ 7ರಂದು ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಪ್ರಕಾರ, ಸಹಾಯಕ ಸಬ್‌ಇನ್‌ಸ್ಪೆಕ್ಟರ್ ಯಲ್ಲಪ್ಪ ಅವರು ಗಸ್ತಿನಲ್ಲಿದ್ದ ವೇಳೆ ಟೀ ಸ್ಟಾಲ್‌ನಲ್ಲಿದ್ದ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಮೊಬೈಲ್‌ನಲ್ಲಿ ಸಂಭಾಷಣೆ ನಡೆಸುತ್ತಿದ್ದಾನೆ ಎಂಬ ಮಾಹಿತಿ ಪಡೆದಿದ್ದರು.

ಆರೋಪಿಯನ್ನು ರಾಯಚೂರಿನ ಗಾಂಧಿ ಚೌಕ್ ನಲ್ಲಿ ವಾಸವಾಗಿರುವ ಸಾಹಿಲ್‌ನನ್ನು ಆರೋಪಿಯಾಗಿ ಗುರುತಿಸಲಾಗಿದೆ.

ಮೊಬೈಲ್ ನಲ್ಲಿ ಸ್ಫೋಟಕ ಮಾಹಿತಿ

ಸಾಹಿಲ್‌ನ ಮೊಬೈಲ್ ಫೋನ್ ಪರಿಶೀಲಿಸಿದಾಗ, 2020ರ ಮಾರ್ಚ್‌ನಿಂದ ಸಕ್ರಿಯವಾಗಿರುವ ಆತನ ಇನ್‌ಸ್ಟಾಗ್ರಾಂ ಖಾತೆಯನ್ನು ‘ರಾನಾ ಭಾಯ್’ ಎಂಬ ವ್ಯಕ್ತಿಯನ್ನು ಸಂಪರ್ಕಿಸಲು ಬಳಸಿರುವುದು ಪೊಲೀಸರಿಗೆ ಕಂಡುಬಂದಿದೆ.

ಚಾಟ್‌ಗಳನ್ನು ಪರಿಶೀಲಿಸಿದಾಗ ಸಾಹಿಲ್ ಪಿಸ್ತೂಲ್ ನೀಡುವಂತೆ ಕೇಳಿಕೊಂಡಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ರಾಣಾ ಭಾಯ್ ವಾಟ್ಸ್‌ಆ್ಯಪ್ ಸಂಖ್ಯೆಯೊಂದನ್ನು ಕಳುಹಿಸಿ, ಹಣದ ಆಮಿಷವನ್ನೂ ನೀಡಿದ್ದ ಎನ್ನಲಾಗಿದೆ.

ವಾಟ್ಸ್‌ಆ್ಯಪ್ ಸಂದೇಶಗಳನ್ನು ಮತ್ತಷ್ಟು ಪರಿಶೀಲಿಸಿದಾಗ, ಸಾಹಿಲ್ ಆ ಸಂಖ್ಯೆಯನ್ನು ‘ರಾಣಾ ಭಾಯ್’ ಎಂದು ಸೇವ್ ಮಾಡಿಕೊಂಡಿದ್ದು, ಹಲವು ಧ್ವನಿ ಕರೆಗಳು, ಆಡಿಯೋ ರೆಕಾರ್ಡಿಂಗ್‌ಗಳು ಹಾಗೂ ತನ್ನ ಟೀ ಸ್ಟಾಲ್‌ನ ಫೋಟೋಗಳನ್ನು ಪರಸ್ಪರ ಹಂಚಿಕೊಂಡಿರುವುದು ತಿಳಿದುಬಂದಿದೆ.

ಶಸ್ತ್ರಾಸ್ತ್ರಕ್ಕೆ ಪೂರೈಕೆ ಚರ್ಚೆ ಮಾಡಿದ್ದ ಭೂಪ!

ವಿಚಾರಣೆ ವೇಳೆ, ಅರಬ್ ದೇಶವೊಂದರಲ್ಲಿ ನೆಲೆಸಿದ್ದಾನೆ ಎನ್ನಲಾದ ರಾಣಾ ಭಾಯ್, ಭಾರತದಲ್ಲಿ ಗಲಭೆಗಳನ್ನು ಪ್ರಚೋದಿಸುವಂತೆ ತನ್ನನ್ನು ಪ್ರೇರೇಪಿಸಿದ್ದಾನೆ. ಇದಕ್ಕಾಗಿ ಹಣ ಹಾಗೂ ಶಸ್ತ್ರಾಸ್ತ್ರಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾನೆ ಎಂದು ಸಾಹಿಲ್ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ರಾಣಾ ಭಾಯ್ ಜೊತೆ ಸೇರಿಕೊಂಡು ಭಾರತದ ಸಾರ್ವಭೌಮತೆ ಹಾಗೂ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯೊಡ್ಡುವ ಉಗ್ರ ಕೃತ್ಯಗಳನ್ನು ನಡೆಸಲು ಸಾಹಿಲ್ ಸಂಚು ರೂಪಿಸಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಪೊಲೀಸರ ಮಾಹಿತಿ

ರಾಯಚೂರು ಎಸ್‌ಪಿ ಅರುಣಾಂಶು ಗಿರಿ, ಐಪಿಎಸ್, ಅವರು ಸಾಹಿಲ್ ರಾನಾ ಭಾಯ್‌ನ ಹಿಂಬಾಲಕನಾಗಿದ್ದಾನೆ ಎಂದು ತಿಳಿಸಿದ್ದಾರೆ. ರಾಣಾ ಭಾಯ್‌ನ ಖಾತೆಯಿಂದ ಹಂಚಿಕೊಳ್ಳಲಾಗುತ್ತಿದ್ದ ಹಲವು ಸಂದೇಶಗಳು, ಫೋಟೋಗಳು ಮತ್ತು ವಿಡಿಯೋಗಳಿಗೆ ಸಾಹಿಲ್ ಲೈಕ್ ಮಾಡುತ್ತಿದ್ದ, ಪೋಸ್ಟ್ ಮಾಡುತ್ತಿದ್ದ ಹಾಗೂ ಶೇರ್ ಮಾಡುತ್ತಿದ್ದ.

ಆ ಖಾತೆಯಲ್ಲಿ ವಿವಿಧ ಸಮುದಾಯಗಳ ನಡುವೆ ವೈಷಮ್ಯ ಹುಟ್ಟುಹಾಕುವ ಉದ್ದೇಶದ ಭಾಷಣಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ಬಳಿಕ ಸಾಹಿಲ್ ಆ ವ್ಯಕ್ತಿಗಳನ್ನು ವಾಟ್ಸ್‌ಆ್ಯಪ್ ಮೂಲಕ ಸಂಪರ್ಕಿಸಲು ಆರಂಭಿಸಿದ್ದ ಎಂದು ಎಸ್‌ಪಿ ತಿಳಿಸಿದ್ದಾರೆ.

ಸಾಹಿಲ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ. ಈ ಪ್ರಕರಣದ ವ್ಯಾಪಕ ಜಾಲವನ್ನು ಪತ್ತೆಹಚ್ಚಲು ಹಾಗೂ ರಾನಾ ಭಾಯ್‌ನ ಪಾತ್ರವನ್ನು ಖಚಿತಪಡಿಸಿಕೊಳ್ಳಲು ತನಿಖೆ ಮುಂದುವರಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಪಕ್ಷಗಳ ಗದ್ದಲದಲ್ಲೇ ಅಧಿವೇಶನಕ್ಕೆ ತೆರೆ: ಲೋಕಸಭೆ ಶೇ 19, ರಾಜ್ಯಸಭೆ ಶೇ 39ರಷ್ಟು ಕಲಾಪ ಫಲಪ್ರದ: ಕಿರಣ್ ರಿಜಿಜು ಮಾಹಿತಿ

ಮುಂಗಾರು ಅಧಿವೇಶನ ಆರಂಭ: ವಿಧಾನಸಭೆ ಹೊಸ್ತಿಲಿಗೆ, CM ಪೀಠಕ್ಕೆ ಶಿರಬಾಗಿ ನಮಸ್ಕರಿಸಿದ ಡಿಕೆ ಶಿವಕುಮಾರ್

‘ನನ್ನನ್ನು ಅಸ್ಪೃಶ್ಯನಂತೆ ಕಂಡು ಶುದ್ಧೀಕರಣ ಮಾಡಿದರು’: ಬಿಜೆಪಿ ವಿರುದ್ಧ Mallikarjun Kharge ಕಿಡಿ, ನಡ್ಡಾ ಪ್ರತಿಕ್ರಿಯೆ

'Time To Move On'.. ವಿವಾದ ಮುಂದುವರಿಸುವ ಸಮಯವಲ್ಲ’: ವಿಜಯ್ ಮಲ್ಯಗೆ ಬಾಂಬೆ ಹೈಕೋರ್ಟ್ ಮಹತ್ವದ ಸೂಚನೆ

ಕೆಂಪುಕೋಟೆ ದಾಳಿ ಹಿಂದೆ ಅಲ್-ಖೈದಾ ಕೈವಾಡ; ವಿಶ್ವಸಂಸ್ಥೆಯ ಭದ್ರತಾ ಮಂಡಳಿ ವರದಿಯಲ್ಲಿ ಅಧಿಕೃತ ಉಲ್ಲೇಖ...!