ಅಭಿಮನ್ಯು online desk
ರಾಜ್ಯ

ಅಭಿಮನ್ಯು ಇಲ್ಲದ ದಸರಾ; ಈ ಬಾರಿ ಹೊರೋದ್ಯಾರು ಅಂಬಾರಿ?

2020 ರಿಂದ ಅಭಿಮನ್ಯು ಆನೆ ಅಂಬಾರಿ ಹೊರುತ್ತಿತ್ತು. ಆದರೆ ಈ ಬಾರಿಯಿಂದ ಅಭಿಮನ್ಯು ಅಂಬಾರಿ ಹೊರುವುದಿಲ್ಲ. ಅರಣ್ಯ ಇಲಾಖೆ ಈ ಬಾರಿಯ ದಸರಾ ಅಂಬಾರಿ ಹೊರುವುದಕ್ಕೆ ಹೊಸ ಆನೆಯ ಶೋಧನೆಯಲ್ಲಿ ತೊಡಗಿದೆ.

ಬೆಂಗಳೂರು: ವಿಶ್ವವಿಖ್ಯಾತ ನಾಡಹಬ್ಬ, ಮೈಸೂರು ದಸರಾ ಉತ್ಸವದಲ್ಲಿ ಅಂಬಾರಿ ಹಾಗೂ ಅಂಬಾರಿ ಹೊರುವ ಆನೆ, ನಿಶಾನೆ ಆನೆಗಳು ಎಲ್ಲರ ಕೇಂದ್ರಬಿಂದುವಾಗಿರಲಿವೆ.

2020 ರಿಂದ ಅಭಿಮನ್ಯು ಆನೆ ಅಂಬಾರಿ ಹೊರುತ್ತಿತ್ತು. ಆದರೆ ಈ ಬಾರಿಯಿಂದ ಅಭಿಮನ್ಯು ಅಂಬಾರಿ ಹೊರುವುದಿಲ್ಲ. ಅರಣ್ಯ ಇಲಾಖೆ ಈ ಬಾರಿಯ ದಸರಾ ಅಂಬಾರಿ ಹೊರುವುದಕ್ಕೆ ಹೊಸ ಆನೆಯ ಶೋಧನೆಯಲ್ಲಿ ತೊಡಗಿದೆ.

ಮೈಸೂರು ದಸರಾ ಉತ್ಸವಕ್ಕೆ 12 ಆನೆಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು ಅಭಿಮನ್ಯು ಆನೆಯನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಧನಂಜಯ, ಮಹೇಂದ್ರ, ಸುಗ್ರೀವ ಅಥವಾ ಪ್ರಶಾಂತ ಈ 4 ಆನೆಗಳ ಪೈಕಿ 1 ಈ ಬಾರಿ ತಾಯಿ ಚಾಮುಂಡಿ ಇರುವ ಚಿನ್ನದ ಅಂಬಾರಿಯನ್ನು ಹೊರಲಿದೆ.

60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ಬಾರಿ ಅಂಬಾರಿ ಹೊರಲು ಅಭಿಮನ್ಯುವನ್ನು ಪರಿಗಣಿಸಿಲ್ಲ ಎಂದು ತಿಳಿಸಲಾಗಿದೆ. ಆ.26ರಂದು ದಸರಾ ಗಜಪಯಣ ಆರಂಭವಾಗಲಿದ್ದು, ಮೊದಲ ತಂಡದಲ್ಲಿ ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ, ಲಕ್ಷ್ಮೀ ಹಾಗೂ ಕಾವೇರಿ ಆನೆಗಳು ಆಗಮಿಸಲಿವೆ.

ದಸರಾದ ಅಚ್ಚುಮೆಚ್ಚಿನ ಕ್ಯಾಪ್ಟನ್​ ಅಭಿಮನ್ಯುಗೆ ದಸರಾದಲ್ಲಿ ಬರೋಬ್ಬರಿ 25 ವರ್ಷಗಳ ಇತಿಹಾಸವಿದೆ. ತುರ್ತು ಕಾರಣಗಳಿಗಾಗಿ ಬಲಿಷ್ಠ ಆನೆಗಳಾದ ಭೀಮ ಮತ್ತು ಹರ್ಷನನ್ನು ಅರಣ್ಯ ಇಲಾಖೆಯು ಮೀಸಲು ಪಡೆಯಾಗಿ ತಂಡಕ್ಕೆ ಸೇರಿಸಿಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್? ತಾಕತ್ ಇದ್ರೆ ಚರ್ಚೆಗೆ ಬನ್ನಿ, ಕುಮಾರಸ್ವಾಮಿ ಸವಾಲು!

ಅಮೆರಿಕ ಯೋಧನ ತಲೆಗೆ 30 ಸಾವಿರ ಡಾಲರ್ ಬಹುಮಾನ: ಇರಾನ್‌ನಿಂದ ವಿಜಯನಗರದ ಅರಸನ ತಂತ್ರ ಬಳಕೆ!

ರಾಮ ಮಂದಿರ ದೇಣಿಗೆ ಕಳ್ಳತನ: ಚಂಪತ್ ರಾಯ್, ಅನಿಲ್ ಮಿಶ್ರಾಗೆ ಉತ್ತರಪ್ರದೇಶ SIT ಕ್ಲೀನ್ ಚಿಟ್!

PM CARES ನಿಧಿ ವಿವರ ಬಹಿರಂಗ; ದೇಣಿಗೆಗಳಲ್ಲಿ ತೀವ್ರ ಕುಸಿತ ವಿದೇಶಿ ದೇಣಿಗಗಳ ಬಗ್ಗೆ ಕೇಂದ್ರ ಹೇಳಿದ್ದೇನು?