ಕೃಷ್ಣ ಬೈರೇಗೌಡ 
ರಾಜ್ಯ

ಫುಟ್‌ಪಾತ್‌ ಮೇಲೆ ಮತ್ತೆ ಅಂಗಡಿ ಹಾಕಿದ್ರೆ ಸಾಮಗ್ರಿಗಳನ್ನ ಜಪ್ತಿ ಮಾಡಿ, ದುಪ್ಪಟ್ಟು ದಂಡ ವಿಧಿಸಿ: ಕೃಷ್ಣ ಬೈರೇಗೌಡ ಖಡಕ್ ಸೂಚನೆ

ನಗರದ ಹಲವು ಕಡೆ ಮತ್ತೆ ಫುಟ್‌ಪಾತ್‌ ಮೇಲೆ ಅಂಗಡಿಗಳು ಆರಂಭವಾಗಿದ್ದು, ಅಂತವರಿಗೆ ದುಪ್ಪಟ್ಟು ದಂಡ ವಿಧಿಸಿ ಮತ್ತು ಅವರ ಸಾಮಗ್ರಿಗಳನ್ನ ಜಪ್ತಿ ಮಾಡುವಂತೆ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಬೆಂಗಳೂರು: ರಾಜ್ಯ ಸರ್ಕಾರ ರಾಜಧಾನಿ ಬೆಂಗಳೂರಿನಲ್ಲಿ ಸೇಫ್ ಫುಟ್‌ಪಾತ್ ಅಭಿಯಾನ ಆರಂಭಿಸಿ, ಶಿವಾಜಿನಗರ ಸೇರಿದಂತೆ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಫುಟ್‌ಪಾತ್‌ ಒತ್ತುವರಿ ತೆರವುಗೊಳಿಸಿತ್ತು. ಆದರೆ ಹಲವು ವ್ಯಾಪಾರಿಗಳು ಮತ್ತೆ ಪಾದಚಾರಿ ಮಾರ್ಗಗಗಳನ್ನು ಆಕ್ರಮಿಸಿಕೊಂಡಿದ್ದು, ಇದರಿಂದ ಪಾದಚಾರಿಗಳು ಮತ್ತೆ ರಸ್ತೆಯಲ್ಲೇ ನಡೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದ ಹಲವು ಕಡೆ ಮತ್ತೆ ಫುಟ್‌ಪಾತ್‌ ಮೇಲೆ ಅಂಗಡಿಗಳು ಆರಂಭವಾಗಿದ್ದು, ಅಂತವರಿಗೆ ದುಪ್ಪಟ್ಟು ದಂಡ ವಿಧಿಸಿ ಮತ್ತು ಅವರ ಸಾಮಗ್ರಿಗಳನ್ನ ಜಪ್ತಿ ಮಾಡುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಬುಧವಾರ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ(GBA) ವ್ಯಾಪ್ತಿಯಲ್ಲಿ ಇದುವರೆಗೆ 964 ಕಿ.ಮೀ. ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಲಾಗಿದ್ದು, ಬಾಕಿ ಇರುವ ಒತ್ತುವರಿಯನ್ನ ಆಗಸ್ಟ್ ತಿಂಗಳೊಳಗಾಗಿ ತೆರವುಗೊಳಿಸುವಂತೆ ಅಧಿಕಾರಿಗಳು ಸಚಿವರು ಸೂಚನೆ ನೀಡಿದ್ದಾರೆ.

ಇಂದು ಜಿಬಿಎ ವ್ಯಾಪ್ತಿಯಲ್ಲಿ ‘ಪಾದಚಾರಿ ಮಾರ್ಗಗಳ ಒತ್ತುವರಿ ತೆರವು’, ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಹಾಗೂ ‘ಬಿಡಾಡಿ ವಾಹನಗಳ ತೆರವು ಕಾರ್ಯಾಚರಣೆ’ ಕುರಿತು ನಡೆದ ವರ್ಚುವಲ್ ಸಭೆಯನ್ನ ಉದ್ದೇಶಿಸಿ ಮಾತನಾಡಿದ ಸಚಿವರು, ನಗರದಲ್ಲಿ ಸುಮಾರು 1,500 ಕಿ.ಮೀ. ಉದ್ದದ ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಪೈಕಿ ಈವರೆಗೆ 964 ಕಿ.ಮೀ. ಉದ್ದದ ಪಾದಚಾರಿ ಮಾರ್ಗಗಳಲ್ಲಿನ ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಬಾಕಿ ಇರುವ ಪಾದಚಾರಿ ಮಾರ್ಗಗಳ ಒತ್ತುವರಿಯನ್ನು ಇದೇ ತಿಂಗಳೊಳಗಾಗಿ ತೆರವುಗೊಳಿಸುವಂತೆ ನಿರ್ದೇಶನ ನೀಡಿದರು.

ಮತ್ತೆ ಒತ್ತುವರಿ ಮಾಡಿದ್ರೆ ಡಬಲ್ ದಂಡ

ನಗರದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಿರುವ ಸ್ಥಳಗಳಲ್ಲಿಯೇ ಬೀದಿ ಬದಿ ವ್ಯಾಪಾರಿಗಳು ಮತ್ತೆ ಬಂದು ವ್ಯಾಪಾರ ಮುಂದುವರಿಸುತ್ತಿರುವುದು ಕಂಡುಬರುತ್ತಿದೆ. ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಪುನಃ ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸುವವರ ಸಾಮಗ್ರಿಗಳನ್ನ ಜಪ್ತಿ ಮಾಡಿ, ಅವರಿಗೆ ದುಪ್ಪಟ್ಟು ದಂಡ ವಿಧಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಫುಟ್‌ಪಾತ್‌ ತೆರವು ಕುರಿತು ಜಂಟಿ ಸಭೆ

ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ಪರಿಣಾಮಕಾರಿಯಾಗಿ ನಡೆಯಬೇಕು. ಒತ್ತುವರಿ ತೆರವುಗೊಳಿಸಿರುವ ಸ್ಥಳಗಳಲ್ಲಿ ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ನಡೆಸಬೇಕು. ಈ ನಿಟ್ಟಿನಲ್ಲಿ ಸದ್ಯದಲ್ಲಿಯೇ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಜಂಟಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಪ್ರತಿಯೊಬ್ಬರಿಗೂ ಕಾರು, ತಿಂಗಳಿಗೆ ₹1 ಲಕ್ಷ ಭತ್ಯೆ': ರಾಜ್ಯದ 234 ಶಾಸಕರಿಗೆ ಭರ್ಜರಿ ಕೊಡುಗೆ ಘೋಷಿಸಿದ ತಮಿಳುನಾಡು CM ವಿಜಯ್!

Ind Vs SL: ಮಾನವ್ ಸುತಾರ್ ದಾಖಲೆ; 600ನೇ ಟೆಸ್ಟ್ ಪಂದ್ಯದ ಗೆದ್ದು ಸಂಭ್ರಮಿಸಿದ ಟೀಂ ಇಂಡಿಯಾ!

'BJPಯವನಾದ ಮಾತ್ರಕ್ಕೆ ಮಾಲೀಕರು ಉಚಿತವಾಗಿ ಮನೆ ನೀಡಲಾರರು'; ನಾನು 'leta' or 'beta' ವರ್ಗಕ್ಕೆ ಸೇರಿದವನಲ್ಲ: ಶೆಹಜಾದ್ ಪೂನಾವಾಲಾ

'ರಾಹುಲ್ ಗಾಂಧಿ' ಕಾರಣಕ್ಕೆ ₹40 ಲಕ್ಷ ಪ್ಯಾಕೇಜ್, ಹ್ಯಾಂಡ್‌ಸಮ್ ಹುಡುಗನನ್ನೇ ರಿಜೆಕ್ಟ್ ಮಾಡಿದ ಹುಡುಗಿ!

ಬಿಡದಿ ಬಳಿಯ ಫಾರ್ಮ್‌ಹೌಸ್‌ನಲ್ಲಿ ಅಕ್ರಮ ಪತ್ತೆ; ₹4.91 ಕೋಟಿ ಮೌಲ್ಯದ ನಕಲಿ ಔಷಧಗಳನ್ನು ವಶಪಡಿಸಿಕೊಂಡ FDA!