ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ಗೆ ಅತಿದೊಡ್ಡ ಸಂಕಷ್ಟ ಎದುರಾಗಿದ್ದು ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಷ್ ಸಲ್ಲಿಸಿದ್ದ ಮಾಫಿ ಸಾಕ್ಷಿ ಅರ್ಜಿಯನ್ನು ಬೆಂಗಳೂರಿನ 59ನೇ ಸಿಸಿಹೆಚ್ ಕೋರ್ಟ್ ಅಂಗೀಕರಿಸಿದೆ.
ಆರೋಪಿ ಪ್ರದೋಷ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಪ್ರದೋಶ್ ಅರ್ಜಿಯನ್ನು ಅಂಗೀಕರಿಸಿದ್ದು ಪ್ರದೋಷ್ ನನ್ನು ಸಾಕ್ಷಿಯನ್ನಾಗಿ ಪರಿಗಣಿಸಿದೆ. ಅಲ್ಲದೆ ಪ್ರದೋಶ್ ಗೆ ಕೆಲ ಷರತ್ತು ವಿಧಿಸಿರುವ ಕೋರ್ಟ್, ಸಂಪೂರ್ಣ ಸತ್ಯಾಂಶಗಳನ್ನು ಬಹಿರಂಗಪಡಿಸಬೇಕು. ಮುಚ್ಚಿಟ್ಟರೆ ಮಾಫಿ ಸಾಕ್ಷಿಯಿಂದ ಆರೋಪಿಯನ್ನಾಗಿ ಮಾಡಲಾಗುವುದು ಎಂದು ಹೇಳಿದೆ. ಇನ್ನು ಪ್ರಕ್ರಿಯೆ ಮುಗಿಯುವವರೆಗೂ ಪ್ರದೋಶ್ ಜೈಲಿನಲ್ಲಿಯೇ ಇರಬೇಕು. ಷರತ್ತು ಉಲ್ಲಂಗಿಸಿ ಸುಳ್ಳು ಸಾಕ್ಷಿ ಹೇಳಿದರೇ ಕೇಸ್ ದಾಖಲಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.