ಬೆಂಗಳೂರು: ನೇಪಾಳದಲ್ಲಿ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದ ನಂತರ ಅಲ್ಲಿ ಸಿಲುಕಿರುವ ಕನ್ನಡಿಗರನ್ನು ಪತ್ತೆಹಚ್ಚಲು ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA)ದೊಂದಿಗೆ ಸಮನ್ವಯ ಸಾಧಿಸುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾನುವಾರ ತಿಳಿಸಿದ್ದಾರೆ.
ಕನ್ನಡಿಗರ ರಕ್ಷಣಾ ಕಾರ್ಯಾಚರಣೆಯ ಪ್ರಗತಿ ಕುರಿತು ನವದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತರಿಂದ ಸಮೀರ್ ಶುಕ್ಲಾ ಅವರಿಂದ ಸಮಗ್ರ ಮಾಹಿತಿ ಪಡೆಯಲಾಗಿದೆ. ಅವರ ಪ್ರಕಾರ, ನೇಪಾಳದಲ್ಲಿ ಕರ್ನಾಟಕದ 33 ಮಂದಿ ಇದ್ದರು. ಇವರಲ್ಲಿ ಇಬ್ಬರು ವಾಪಸಾಗಿದ್ದಾರೆ ಮತ್ತು ಇತರರನ್ನು ಪತ್ತೆಹಚ್ಚಲಾಗಿದೆ ಆದಾಗ್ಯೂ, ಇನ್ನೂ 14 ಮಂದಿಯ ಪತ್ತೆ ಕಾರ್ಯ ಬಾಕಿ ಇದೆ ಎಂದರು.
"33 ಮಂದಿಯ ಪೈಕಿ, ಇಬ್ಬರು ಬಂದಿದ್ದಾರೆ, ಇತರರನ್ನು ಪತ್ತೆಹಚ್ಚಲಾಗಿದೆ. 14 ಮಂದಿ ಇನ್ನೂ ಪತ್ತೆಯಾಗಿಲ್ಲ ಎಂದು ಅವರು ಹೇಳಿದರು. ಸಿಲುಕಿರುವವರಲ್ಲಿ ಇಬ್ಬರು ಮೈಸೂರಿನವರು ಮತ್ತು ಉಳಿದವರು ಬೆಂಗಳೂರಿನವರು ಎಂದು ಅವರು ತಿಳಿಸಿದರು.
ಸಂಕಷ್ಟಕ್ಕೆ ಸಿಲುಕಿರುವ ನಾಗರಿಕರು ದೆಹಲಿಯನ್ನು ತಲುಪಿದ ತಕ್ಷಣ ಅವರನ್ನು ಬರಮಾಡಿಕೊಳ್ಳಲು ಮತ್ತು ಅವರು ಬೆಂಗಳೂರಿಗೆ ಮರಳಲು ಅನುಕೂಲವಾಗುವಂತೆ ರಾಜ್ಯ ಸರ್ಕಾರ ವ್ಯವಸ್ಥೆ ಮಾಡಲಿದೆ .ಅವರು ದೆಹಲಿಯಲ್ಲಿ ಒಂದು ದಿನ ಉಳಿಯಲು ಬಯಸಿದರೂ, ಅವರ ಆರೋಗ್ಯದ ಬಗ್ಗೆ ನಾವು ಕಾಳಜಿ ವಹಿಸುತ್ತೇವೆ ಮತ್ತು ಬೇರೆ ಏನಾದರೂ ಸಮಸ್ಯೆಗಳಿದ್ದರೆ ಅವುಗಳನ್ನು ಬಗೆಹರಿಸುತ್ತೇವೆ ಎಂದು ಅವರು ಹೇಳಿದರು.