ಸಿಎಂ ಸಿದ್ದರಾಮಯ್ಯ ಸಾಂದರ್ಭಿಕ ಚಿತ್ರ 
ರಾಜ್ಯ

ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಏನೂ ಕೊಟ್ಟಿಲ್ಲ, ಚೊಂಬು ಕೊಟ್ಟಿದೆ: ಸಿಎಂ ಸಿದ್ದರಾಮಯ್ಯ

ಬಜೆಟ್ ನಲ್ಲಿ ರಾಜ್ಯಕ್ಕೆ ಏನನ್ನೂ ನೀಡಿಲ್ಲ. ಇಡೀ ದಕ್ಷಿಣ ಭಾರತಕ್ಕೆ ಬಜೆಟ್‌ನಲ್ಲಿ ಏನನ್ನೂ ನೀಡಿಲ್ಲ. ಕರ್ನಾಟಕಕ್ಕೆ ಚೊಂಬು ಕೊಟ್ಟಿದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಮಂಡಿಸಿದ ಕೇಂದ್ರ ಬಜೆಟ್ ನಿರಾಶಾದಾಯಕವಾಗಿದ್ದು, ದೂರದೃಷ್ಟಿಯ ಕೊರತೆ ಬಜೆಟ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಬಜೆಟ್ ಕುರಿತು ಪ್ರತಿಕ್ರಿಯಿಸಿದ ಅವರು, ಕರ್ನಾಟಕಕ್ಕೆ ದೊಡ್ಡ ಅನ್ಯಾಯವಾಗಿದೆ ಎಂದು ಸಿಎಂ ಕಿಡಿಕಾರಿದರು. ಈ ಬಜೆಟ್ ನಿರಾಶಾದಾಯಕವಾಗಿದ್ದು, ದೂರದೃಷ್ಟಿಯ ಕೊರತೆಯಿದೆ. ಬರೀ ಹೇಳಿಕೆಯ ಬಜೆಟ್ಆಗಿದೆ ಎಂದರು.

ಬಜೆಟ್ ನಲ್ಲಿ ರಾಜ್ಯಕ್ಕೆ ಏನನ್ನೂ ನೀಡಿಲ್ಲ. ಇಡೀ ದಕ್ಷಿಣ ಭಾರತಕ್ಕೆ ಬಜೆಟ್‌ನಲ್ಲಿ ಏನನ್ನೂ ನೀಡಿಲ್ಲ. ಕರ್ನಾಟಕಕ್ಕೆ ಚೊಂಬು ಕೊಟ್ಟಿದೆ ಎಂದು ವಾಗ್ದಾಳಿ ನಡೆಸಿದರು.

ಬೆಂಗಳೂರು-ಚೆನ್ನೈ ಮತ್ತು ಹೈದರಾಬಾದ್-ಬೆಂಗಳೂರು ಹೈಸ್ಪೀಡ್ ರೈಲು ಕಾರಿಡಾರ್ ಎಂಬ ಎರಡು ವಿಷಯಗಳನ್ನು ಮಾತ್ರ ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ಇದರಿಂದ ಕರ್ನಾಟಕಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ತೆಲಂಗಾಣ ಮತ್ತು ತಮಿಳುನಾಡಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು

ನಾವು ಬೆಂಗಳೂರು-ಮುಂಬೈ, ಬೆಂಗಳೂರು-ಮಂಗಳೂರು, ಮತ್ತು ಬೆಂಗಳೂರು-ಪುಣೆ ಹೈಸ್ಪೀಡ್ ರೈಲುಗಳನ್ನು ಕೇಳಿದ್ದೇವೆ.ಹಣಕಾಸು ಸಚಿವರು ಬಜೆಟ್‌ನಲ್ಲಿ ವಿಕಸಿತ ಭಾರತ್ ಬಗ್ಗೆ ಮಾತನಾಡಿದ್ದಾರೆ. ಇದು ಮಾತಿಗೆ ಮಾತ್ರವೇ ಹೊರತು ಕಾರ್ಯರೂಪಕ್ಕೆ ಬರಲ್ಲ. ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.

ಭದ್ರಾ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳೆಂದು ಘೋಷಿಸುವಂತೆ ಕೇಳಿದ್ದೇವು ಎಂದು ತಿಳಿಸಿದ ಮುಖ್ಯಮಂತ್ರಿ, ಮೇಕೆದಾಟು ಮತ್ತು ಮಹಾದಾಯಿಯಂತಹ ನದಿ ನೀರು ಯೋಜನೆಗಳಿಗೆ ಅನುಮೋದನೆ ವಿಳಂಬಕ್ಕೆ ಕೇಂದ್ರದ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದರು. ಕೇಂದ್ರದ ಅನುದಾನದಲ್ಲಿ ರಾಜ್ಯಕ್ಕೆ ಕಡಿಮೆ ಅನುದಾನ ಉಲ್ಲೇಖಿಸಿದ ಸಿದ್ದರಾಮಯ್ಯ, ನಮಗೆ ದೊಡ್ಡ ಅನ್ಯಾಯವಾಗುತ್ತಿದೆ ಎಂದು ಕಿಡಿಕಾರಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

JPSC-PT ರದ್ದುಗೊಳಿಸಲು ಜಾರ್ಖಂಡ್ ಸರ್ಕಾರ ಒಪ್ಪಿದ್ರೂ 6ನೇ ಸುತ್ತಿನ ಮಾತುಕತೆ ವಿಫಲ, ಪ್ರತಿಭಟನೆ ಮುಂದುವರಿಕೆ!

"ಹಮಾಸ್ ನಿಶ್ಯಸ್ತ್ರಗೊಳಿಸುವುದೇ ಅಂತಿಮ ಗುರಿ": ಟ್ರಂಪ್ ಗಾಜಾ ಶಾಂತಿ ಯೋಜನೆ ತಿರಸ್ಕರಿಸಿದ ಇಸ್ರೇಲ್!

ಪಾಕಿಸ್ತಾನಿಗಳು ಭಾರತೀಯರ ಹೃದಯ ವೈರಿಗಳಲ್ಲ: RSS ಮುಖ್ಯಸ್ಥ ಮೋಹನ್ ಭಾಗವತ್

ಆ.13ರಿಂದ ವಿಧಾನಮಂಡಲ ಅಧಿವೇಶನ – ಹಂಗಾಮಿ ಸಭಾಧ್ಯಕ್ಷರಾಗಿ ಟಿ.ಬಿ ಜಯಚಂದ್ರ

ರಷ್ಯಾ-ಭಾರತ ನಡುವೆ ನೇರ ರೈಲು ಸಂಪರ್ಕ? ರಷ್ಯಾದಿಂದ ಮಹತ್ವದ ಪ್ರಸ್ತಾವನೆ!