ಬೆಂಗಳೂರು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಯಾರ ಬಗ್ಗೆಯೂ ಕಾಳಜಿ ಇಲ್ಲ.. ಅವರಿಗೇನು ಬೇಕೋ ಅದನ್ನೇ ಅವರು ಮಾಡುತ್ತಾರೆ ಎಂದು ಕರ್ನಾಟಕದ ಉದ್ಯಮಿ ಮೋಹನ್ ದಾಸ್ ಪೈ ಹೇಳಿದ್ದಾರೆ.
ಭಾರತ ಮತ್ತು ಅಮೆರಿಕ ನಡುವಿನ ಬಹು ನಿರೀಕ್ಷಿತ ವಾಣಿಜ್ಯ ಒಪ್ಪಂದ ಕುರಿತು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮೋಹನ್ ದಾಸ್ ಪೈ ಅವರು, 'ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಬ್ಬ ವಿಶಿಷ್ಟ ವ್ಯಕ್ತಿ. ಅವರು ಯಾರ ಬಗ್ಗೆಯೂ ಕಾಳಜಿ ವಹಿಸುವುದಿಲ್ಲ... ಅವರು ತಮಗೇನು ಬೇಕೋ ಅದನ್ನೇ ಮಾಡುತ್ತಾರೆ. ಅವು ಬಯಸಿದ್ದನ್ನು ಮಾಡುತ್ತಾರೆ... ಅವರು ಸುಂಕಗಳನ್ನು ಹೆಚ್ಚಿಸುತ್ತಾರೆ... ನೀವು ಅವರೊಂದಿಗೆ ಹೋರಾಡಲು ಸಾಧ್ಯವಿಲ್ಲ' ಎಂದರು.
'ಈಗ, ಅಧ್ಯಕ್ಷ ಟ್ರಂಪ್ ಸ್ಪಷ್ಟವಾಗಿ ಹೇಳಿರುವ ಪ್ರಕಾರ, ನೀವು ರಷ್ಯಾದ ತೈಲವನ್ನು ಖರೀದಿಸುತ್ತಿಲ್ಲವಾದ್ದರಿಂದ ನಾನು ಸುಂಕವನ್ನು ಶೇ.18% ಕ್ಕೆ ಇಳಿಸುತ್ತಿದ್ದೇನೆ. ಪ್ರಧಾನಿ ಮೋದಿಯವರು ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಏನು ಮಾಡುತ್ತಾರೆ ಎಂದು ನೀವು ನಂಬಬಹುದು ಎಂದರು.
ಅಲ್ಲದೆ 'ಅವರು ಹೇಳುವುದನ್ನು ನಾವು ಅನುಕೂಲಕರ ಒಪ್ಪಂದ ಎಂದು ಪಡೆದುಕೊಂಡಿದ್ದೇವೆ. ಅದನ್ನು ಪ್ರಮುಖ ಸ್ಲಾಟ್‌ನಲ್ಲಿ ಇಡುತ್ತಿದ್ದೇವೆ. ಅಮೆರಿಕದೊಂದಿಗಿನ ವ್ಯಾಪಾರದಿಂದಾಗಿ ಚೀನಾ ದೈತ್ಯ ಶಕ್ತಿಯಾಗಿದೆ. ನಾವು ಕೂಡ ಬುದ್ಧಿವಂತರಾಗಿರಬೇಕು ಮತ್ತು ಅಮೆರಿಕಕ್ಕೆ ಹೆಚ್ಚು ರಫ್ತು ಮಾಡಬೇಕು ಮತ್ತು ಅಮೆರಿಕದೊಂದಿಗೆ ಹೆಚ್ಚು ವ್ಯವಹಾರ ಮಾಡಬೇಕು' ಮೋಹದಾಸ್ ಪೈ ಹೇಳಿದರು.
ಭಾರತ ಮತ್ತು ಅಮೆರಿಕ ನಡುವೆ ಮಹತ್ವದ ವಾಣಿಜ್ಯ ಒಪ್ಪಂದ ಏರ್ಪಟ್ಟಿದ್ದು, ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ 25 ರಿಂದ ಶೇ 18ಕ್ಕೆ ಇಳಿಸಿದೆ. ಈ ಬಗ್ಗೆ ಮಾತನಾಡಿದ್ದ ಪ್ರಧಾನಿ ಮೋದಿ, 'ಭಾರತದಲ್ಲಿ ತಯಾರಿಸಿದ ಉತ್ಪನ್ನಗಳು ಈಗ ಶೇ 18ರಷ್ಟು ಕಡಿಮೆ ಸುಂಕವನ್ನು ಹೊಂದಿರುವುದು ಸಂತೋಷ ತಂದಿದೆ. ಈ ಅದ್ಭುತ ಘೋಷಣೆಗಾಗಿ ಭಾರತದ 1.4 ಶತಕೋಟಿ ಜನರ ಪರವಾಗಿ ಅಧ್ಯಕ್ಷ ಟ್ರಂಪ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು' ಎಂದು ಹೇಳಿದ್ದಾರೆ.
ಅಮೆರಿಕ ಮತ್ತು ಭಾರತ ಎರಡೂ ದೇಶಗಳು ಪೂರ್ಣ, ಔಪಚಾರಿಕ ವ್ಯಾಪಾರ ಒಪ್ಪಂದವನ್ನು ರಚಿಸಲು ಒಟ್ಟಾಗಿ ಕೆಲಸ ಮಾಡುವ ಬಗ್ಗೆ ಗಂಭೀರವಾಗಿವೆ. ಸುಂಕ ಇಳಿಕೆಯು ಮಾರುಕಟ್ಟೆ ಪ್ರವೇಶ, ಸುಂಕೇತರ ಅಡೆತಡೆಗಳು ಮತ್ತು ಇತರ ವ್ಯಾಪಾರ-ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವ ಸಮಗ್ರ ಯುಎಸ್-ಭಾರತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದತ್ತ ಸಾಗಲು ಎರಡೂ ಕಡೆಗಳಲ್ಲಿ ಬಲವಾದ ರಾಜಕೀಯ ಇಚ್ಛಾಶಕ್ತಿಯನ್ನು ಸೂಚಿಸುತ್ತದೆ.