ಪ್ರಾತಿನಿಧಿಕ ಚಿತ್ರ 
ರಾಜ್ಯ

ಕೆಂಪೇಗೌಡ ವಿಮಾನ ನಿಲ್ದಾಣದ ನಿರ್ಬಂಧಿತ ಪ್ರದೇಶದಲ್ಲಿ ಬೃಹತ್ ಬಲೂನ್ ಹಾರಾಟ; ಆತಂಕ ಸೃಷ್ಟಿ, FIR ದಾಖಲು

ಜನವರಿ 5 ರಂದು ಕೆಐಎ ಕಾರ್ಯಾಚರಣೆ ಪ್ರದೇಶದಲ್ಲಿ 'ಬಿಸಿಡಿ ಕನ್‌ಸ್ಟ್ರಕ್ಷನ್' ಎಂಬ ಹೆಸರಿನ ಬಲೂನ್ ಅನಧಿಕೃತವಾಗಿ ಹಾರುತ್ತಿರುವುದು ಕಂಡುಬಂದಿದೆ ಎಂದು ನಾಗೇಂದ್ರನ್ ದೂರಿನಲ್ಲಿ ತಿಳಿಸಿದ್ದಾರೆ.

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ನಿರ್ಬಂಧಿತ ಕಾರ್ಯಾಚರಣೆ ಪ್ರದೇಶದೊಳಗೆ ಜಾಹೀರಾತು ಉದ್ದೇಶಕ್ಕಾಗಿ ಬಳಸಲಾಗುವ ಬೃಹತ್ ಗಾತ್ರದ ಬಲೂನ್ ಅನ್ನು ಅನಧಿಕೃತವಾಗಿ ಹಾರಿಸಲಾಗಿದ್ದು, ಇದು ವಾಯುಯಾನ ಸುರಕ್ಷತಾ ಮಾನದಂಡಗಳ ಗಂಭೀರ ಉಲ್ಲಂಘನೆಯಾಗಿದೆ ಮತ್ತು ಭದ್ರತಾ ಕಳವಳಗಳನ್ನು ಉಂಟುಮಾಡಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಈ ಘಟನೆ ಜನವರಿ 5 ರಂದು ನಡೆದಿದ್ದರೂ, ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ನ ವಾಯುಯಾನ ಭದ್ರತಾ ಗುಂಪಿನ (ಎಎಸ್‌ಜಿ) ಎಲ್. ನಾಗೇಂದ್ರನ್ ಅವರು ಫೆಬ್ರುವರಿ 8 ರಂದು ದೂರು ದಾಖಲಿಸಿದ್ದಾರೆ.

ಜನವರಿ 5 ರಂದು ಕೆಐಎ ಕಾರ್ಯಾಚರಣೆ ಪ್ರದೇಶದಲ್ಲಿ 'ಬಿಸಿಡಿ ಕನ್‌ಸ್ಟ್ರಕ್ಷನ್' ಎಂಬ ಹೆಸರಿನ ಬಲೂನ್ ಅನಧಿಕೃತವಾಗಿ ಹಾರುತ್ತಿರುವುದು ಕಂಡುಬಂದಿದೆ ಎಂದು ನಾಗೇಂದ್ರನ್ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನು ಗಮನಿಸಿದ ಎಎಸ್‌ಜಿ/ಬಿಡಿಡಿಎಸ್ ಸಿಬ್ಬಂದಿ ತಕ್ಷಣವೇ ಅದನ್ನು ತಡೆದು ಪರಿಶೀಲಿಸಿದ್ದಾರೆ.

ಪರಿಶೀಲನೆಯ ನಂತರ, 'BCD ಕನ್‌ಸ್ಟ್ರಕ್ಷನ್' ಎಂಬ ಹೆಸರನ್ನು ಹೊಂದಿರುವ ಬಲೂನ್ KIA ಯ ರೆಡ್ ಝೋನ್/ಹಾರಾಟ ನಿಷೇಧ ಪ್ರದೇಶದಲ್ಲಿ (DGCA ಮಾರ್ಗಸೂಚಿಗಳ ಪ್ರಕಾರ) ಇರುವುದು ಕಂಡುಬಂದಿದೆ' ಎಂದು ನಾಗೇಂದ್ರನ್ ಹೇಳಿದರು.

ವಿಮಾನ ನಿಲ್ದಾಣದ ನಿಷೇಧಿತ ಪ್ರದೇಶದಲ್ಲಿ ಬಲೂನ್ ಕಂಡುಬಂದಿದೆ. ಇದನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಮಾನದಂಡಗಳ ಅಡಿಯಲ್ಲಿ ರೆಡ್ ಝೋನ್ ಎಂದು ಗೊತ್ತುಪಡಿಸಲಾಗಿದೆ. ಅಲ್ಲಿ ಯಾವುದೇ ಹಾರುವ ವಸ್ತುಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ದೂರಿದ್ದಾರೆ.

ವಿಮಾನ ನಿಲ್ದಾಣದ ನಿಷೇಧಿತ ಪ್ರದೇಶದೊಳಗೆ ಈ ಕೃತ್ಯವು ಡಿಜಿಸಿಎ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜುಲೈ 20 ರಿಂದ ಆಗಸ್ಟ್ 13 ರವರೆಗೆ ಸಂಸತ್ತಿನ ಮುಂಗಾರು ಅಧಿವೇಶನ ಎಂದ Kiren Rijiju, ವಿಪಕ್ಷಗಳ 'ಬಂಡಾಯ' ಪ್ರತಿಧ್ವನಿಸುವ ಸಾಧ್ಯತೆ!

70 ಲಕ್ಷ ಪಡೆದು ಉದ್ಯಮಿಗೆ ವಂಚನೆ; ರೇಪ್‌ ಕೇಸ್‌ ಬೆದರಿಕೆ, ಪೆನ್‌ಡ್ರೈವ್‌ ನಲ್ಲಿ ಅಶ್ಲೀಲ ವಿಡಿಯೋ ಪತ್ತೆ: ಮುಸ್ಲಿಂ ಮಹಿಳೆಯ ಬಂಧನ

ಬಲೂಚಿಗರಿಂದ ಆತ್ಮಾಹುತಿ ದಾಳಿ: 30ಕ್ಕೂ ಹೆಚ್ಚು Pakistan ಸೈನಿಕರು ಸಾವು, ಸ್ಫೋಟದ ವಿಡಿಯೋ ಬಿಡುಗಡೆ ಮಾಡಿದ BLA

2nd T20I: ಇಂಗ್ಲೆಂಡ್ ವಿರುದ್ಧ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ, ಕೊನೆಗೂ Vaibhav Sooryavanshi ಪದಾರ್ಪಣೆ, ಸಚಿನ್ ದಾಖಲೆ ಧ್ವಂಸ!

ಇದು ನಿಜಕ್ಕೂ 'ಅಸಹ್ಯಕರ'; ಹೀಗೆ ಆಗುತ್ತಿರುವುದು ಮೂರನೇ ಬಾರಿ: ಆಕ್ರೋಶ ಹೊರಹಾಕಿದ ನಟಿ ತ್ರಿಶಾ!