ಸರ್ಕಾರಿ ಶಾಲಾ ಮಕ್ಕಳೊಂದಿಗೆ ಸಚಿವ ಜಮೀರ್ ಅಹ್ಮದ್ ಖಾನ್ 
ರಾಜ್ಯ

ಹಂಪಿ ಉತ್ಸವ: ಸ್ವಂತ ಖರ್ಚಿನಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಹೆಲಿಕಾಪ್ಟರ್‌ನಲ್ಲಿ ಸುತ್ತಾಡಿಸಿದ ಸಚಿವ ಜಮೀರ್!

ಹಂಪಿ ಉತ್ಸವದ ಎರಡನೇ ದಿನವಾದ ಇಂದು ಕಮಲಾಪುರದ ಮಯೂರ ಹೋಟೆಲ್ ಆವರಣದಲ್ಲಿ ಸ್ಕೈ ಹೆಲಿಕಾಪ್ಟರ್ ಸೇವೆಗೆ ಜಮೀರ್ ಅಹ್ಮದ್ ಖಾನ್ ಶನಿವಾರ ಚಾಲನೆ ನೀಡಿದರು.

ಬಳ್ಳಾರಿ: ವಿಶ್ವ ಪ್ರಸಿದ್ಧ ಹಂಪಿ ಉತ್ಸವದಲ್ಲಿ ಬೈ ಸ್ಕೈ ವೀಕ್ಷಣೆಗೆ ಆಗಮಿಸಿದ್ದ 60ಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಉಚಿತವಾಗಿ ಹೆಲಿಕಾಪ್ಟರ್ ರೈಡ್ ಮಾಡಿಸಿ, ಮಕ್ಕಳ ಕನಸನ್ನು ನನಸು ಮಾಡಿದ್ದಾರೆ.

ಹೌದು. ಹಂಪಿ ಉತ್ಸವದ ಎರಡನೇ ದಿನವಾದ ಇಂದು ಕಮಲಾಪುರದ ಮಯೂರ ಹೋಟೆಲ್ ಆವರಣದಲ್ಲಿ ಸ್ಕೈ ಹೆಲಿಕಾಪ್ಟರ್ ಸೇವೆಗೆ ಜಮೀರ್ ಅಹ್ಮದ್ ಖಾನ್ ಶನಿವಾರ ಚಾಲನೆ ನೀಡಿದರು.

ಈ ವೇಳೆ ಹೆಲಿಕಾಪ್ಟರ್ ನೋಡಲು ಬಂದಿದ್ದ ಸರ್ಕಾರಿ ಶಾಲೆ ಮಕ್ಕಳ ಆಸೆ ಕೇಳಿದ ಸಚಿವರು, ನೀವೂ ಹೆಲಿಕಾಪ್ಟರ್‌ನಲ್ಲಿ ಹೋಗಬೇಕಾ ಎಂದು ಕೇಳಿದ್ದಾರೆ. ಸಚಿವರ ಪ್ರಶ್ನೆಗೆ ಮಕ್ಕಳೆಲ್ಲರೂ ಹೌದು ಸರ್ ಎಂದಿದ್ದಾರೆ.

ತಕ್ಷಣವೇ ತಮ್ಮ ಸ್ವಂತ ಖರ್ಚಿನಲ್ಲಿ ಎಲ್ಲಾ ಶಾಲಾ ಮಕ್ಕಳಿಗೆ ಹೆಲಿಕಾಪ್ಟರ್ ರೈಡ್ ವ್ಯವಸ್ಥೆ ಮಾಡಿದ್ದಾರೆ. ಆಕಾಶಕ್ಕೆ ಹಾರಿದ ಮಕ್ಕಳ ಸಂಭ್ರಮ ಕಂಡು ಕೆಳಗಡೆ ನಿಂತಿದ್ದ ಪೋಷಕರು ಆನಂದ ಬಾಷ್ಪ ಸುರಿಸಿದರು. ಮಕ್ಕಳ ಜಾಲಿ ಕಂಡು ಪೋಷಕರೂ ಸಂಭ್ರಮಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬ್ರಹ್ಮಪುತ್ರ ನದಿ ಕೆಳಗೆ ದೇಶದ ಮೊದಲ ರಸ್ತೆ-ರೈಲು ಸುರಂಗಕ್ಕೆ ಕೇಂದ್ರ ಸಂಪುಟ ಅನುಮೋದನೆ

ಬಳ್ಳಾರಿ- ಹೊಸಪೇಟೆ ಹೊಸ ರೈಲು ಮಾರ್ಗಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ

ಅಕ್ರಮ ಚುನಾವಣೆ ಆರೋಪ: ಸುಪ್ರೀಂ ಕೋರ್ಟ್ ನಲ್ಲಿ ಯತ್ನಾಳ್‌ಗೆ ಜಯ, ಅಬ್ದುಲ್ ಹಮೀದ್‌ಗೆ ಮುಖಭಂಗ

T20 ವಿಶ್ವಕಪ್ 2026: ಭಾರತ - ಪಾಕ್ ಪಂದ್ಯ, ಹ್ಯಾಂಡ್ ಶೇಕ್ ಇರುತ್ತಾ- ಸೂರ್ಯ ಕುಮಾರ್ ಯಾದವ್ ಮಹತ್ವದ ಹೇಳಿಕೆ!

ಕಾಂಗ್ರೆಸ್ ಸರ್ಕಾರದ 1000 ದಿನಗಳ ಸಮಾವೇಶದ ಬಗ್ಗೆ ಬಿಜೆಪಿಗೆ 'ಹೊಟ್ಟೆ ಉರಿ': ಸಿಎಂ ಸಿದ್ದರಾಮಯ್ಯ ವಾಗ್ದಾಳಿ

SCROLL FOR NEXT