ಸಾಂದರ್ಭಿಕ ಚಿತ್ರ  
ರಾಜ್ಯ

SSLC, PUC Exam 2026: ಪರೀಕ್ಷೆ ಜೊತೆಗೆ ಫಲಿತಾಂಶ ದಿನಾಂಕ ಪ್ರಕಟ; 16 ಲಕ್ಷ ವಿದ್ಯಾರ್ಥಿಗಳು ನೋಂದಣಿ

ಪರೀಕ್ಷೆಗಳು ಸುಗಮ ಮತ್ತು ನ್ಯಾಯಸಮ್ಮತವಾಗಿ ನಡೆಯಲು ಕೈಗೊಂಡಿರುವ ಪ್ರಮುಖ ಕ್ರಮಗಳನ್ನು ವಿವರಿಸಿದರು.

ರಾಜ್ಯ ಸರ್ಕಾರ ಪಠ್ಯಕ್ರಮದ SSLC ಮತ್ತು PUC ಪರೀಕ್ಷೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪರೀಕ್ಷೆಗಳ ವೇಳಾಪಟ್ಟಿ, ವಿದ್ಯಾರ್ಥಿಗಳ ಸಂಖ್ಯೆ, ಭದ್ರತಾ ವ್ಯವಸ್ಥೆಗಳು, ಉಚಿತ ಸಾರಿಗೆ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಕಠಿಣ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಪರೀಕ್ಷೆಗಳು ಸುಗಮ ಮತ್ತು ನ್ಯಾಯಸಮ್ಮತವಾಗಿ ನಡೆಯಲು ಕೈಗೊಂಡಿರುವ ಪ್ರಮುಖ ಕ್ರಮಗಳನ್ನು ವಿವರಿಸಿದರು.

ಪರೀಕ್ಷಾ ವೇಳಾಪಟ್ಟಿ ಮತ್ತು ವಿದ್ಯಾರ್ಥಿಗಳ ಸಂಖ್ಯೆ

PUC ಪರೀಕ್ಷೆ 2026 ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ನಡೆಯಲಿದೆ. ಒಟ್ಟು 7,10,363 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ಇವರಲ್ಲಿ

  • 6,46,801 ಹೊಸ ಅಭ್ಯರ್ಥಿಗಳು

  • 50,540 ಮರು ಪರೀಕ್ಷಾರ್ಥಿಗಳು

  • 13,022 ಖಾಸಗಿ ಅಭ್ಯರ್ಥಿಗಳು ಒಳಗೊಂಡಿದ್ದಾರೆ.

ಪಿಯುಸಿ ಫಲಿತಾಂಶ

ಪರೀಕ್ಷೆಗಳು 5,174 ಕಾಲೇಜುಗಳು ಮತ್ತು ಶಾಲೆಗಳಲ್ಲಿರುವ 1,217 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿವೆ. ತಾತ್ಕಾಲಿಕ ಫಲಿತಾಂಶ ಏಪ್ರಿಲ್ 7ರಂದು ಪ್ರಕಟವಾಗಲಿದೆ. ಪರೀಕ್ಷೆ-2 ಏಪ್ರಿಲ್ 25ರಿಂದ ಮೇ 9ರವರೆಗೆ ನಡೆಯಲಿದ್ದು, ಫಲಿತಾಂಶ ಮೇ 22ರಂದು ಪ್ರಕಟವಾಗುವ ನಿರೀಕ್ಷೆ ಇದೆ.

SSLC ಪರೀಕ್ಷೆ ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ನಡೆಯಲಿದೆ. ಒಟ್ಟು 9,02,889 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ಇವರಲ್ಲಿ

  • 8,12,855 ಹೊಸ ಅಭ್ಯರ್ಥಿಗಳು

  • 62,845 ಮರುಪರೀಕ್ಷಾರ್ಥಿಗಳು

  • 27,189 ಖಾಸಗಿ ಅಭ್ಯರ್ಥಿಗಳು

ಪರೀಕ್ಷೆಗಳು 15,941 ಶಾಲೆಗಳಲ್ಲಿ 2,871 ಕೇಂದ್ರಗಳಲ್ಲಿ ನಡೆಯಲಿವೆ. ಫಲಿತಾಂಶ ಏಪ್ರಿಲ್ 24ರಂದು ಪ್ರಕಟವಾಗಲಿದೆ. SSLC ಪರೀಕ್ಷೆ-2 ಮೇ 18ರಿಂದ ಮೇ 25ರವರೆಗೆ ನಡೆಯಲಿದ್ದು, ಫಲಿತಾಂಶ ಜೂನ್ 1, 2026 ರಂದು ಪ್ರಕಟವಾಗುವ ನಿರೀಕ್ಷೆ ಇದೆ.

ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಕಠಿಣ ಕ್ರಮ

ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ತಪ್ಪು ಮಾಹಿತಿಯನ್ನು ತಡೆಯಲು ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ನಿಗಾವಹಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಣಕ್ಕಾಗಿ ಪ್ರಶ್ನೆಪತ್ರಿಕೆ ಸೋರಿಕೆಯ ಸುಳ್ಳು ಪ್ರಚಾರ ಮಾಡುವ ಖಾತೆಗಳನ್ನು ಗುರುತಿಸಿ ತಡೆದು ಕಾನೂನು ಕ್ರಮ ಕೈಗೊಳ್ಳಲಾಗುವುದು. ಪರೀಕ್ಷೆಗಳು ಸುರಕ್ಷಿತವಾಗಿ ನಡೆಯಲು ಪೊಲೀಸರ ಸಹಕಾರವೂ ಪಡೆಯಲಾಗಿದೆ ಎಂದು ಸಚಿವರು ತಿಳಿಸಿದರು.

ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ

ಪರೀಕ್ಷಾ ಅವಧಿಯಲ್ಲಿ SSLC ಮತ್ತು PUC ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ ಸುಲಭವಾಗಿ ಹೋಗಲು KSRTC ಮತ್ತು BMTC ಬಸ್ಸುಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಒದಗಿಸಲಾಗುತ್ತದೆ.

PUC ಪರೀಕ್ಷೆ-1 ದಿನಾಂಕಗಳು

  • ಫೆಬ್ರವರಿ 28 – ಕನ್ನಡ, ಅರೇಬಿಕ್

  • ಮಾರ್ಚ್ 2 – ಭೂಗೋಳ, ಅಂಕಿಅಂಶಶಾಸ್ತ್ರ, ಮನೋವಿಜ್ಞಾನ

  • ಮಾರ್ಚ್ 3 – ಇಂಗ್ಲಿಷ್

  • ಮಾರ್ಚ್ 4 – ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್

  • ಮಾರ್ಚ್ 5 – ಇತಿಹಾಸ

  • ಮಾರ್ಚ್ 6 – ಭೌತಶಾಸ್ತ್ರ

  • ಮಾರ್ಚ್ 7 – ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂವಿಜ್ಞಾನ

  • ಮಾರ್ಚ್ 9 – ರಸಾಯನಶಾಸ್ತ್ರ, ಶಿಕ್ಷಣ, ಮೂಲ ಗಣಿತ

  • ಮಾರ್ಚ್ 10 – ಅರ್ಥಶಾಸ್ತ್ರ

  • ಮಾರ್ಚ್ 11 – ತಾರ್ಕಿಕಶಾಸ್ತ್ರ, ಎಲೆಕ್ಟ್ರಾನಿಕ್ಸ್, ಗೃಹ ವಿಜ್ಞಾನ

  • ಮಾರ್ಚ್ 12 – ಹಿಂದಿ

  • ಮಾರ್ಚ್ 13 – ರಾಜಕೀಯ ವಿಜ್ಞಾನ

  • ಮಾರ್ಚ್ 14 – ಲೆಕ್ಕಶಾಸ್ತ್ರ, ಗಣಿತ

  • ಮಾರ್ಚ್ 16 – ಸಮಾಜಶಾಸ್ತ್ರ, ಜೀವಶಾಸ್ತ್ರ, ಕಂಪ್ಯೂಟರ್ ಸೈನ್ಸ್

  • ಮಾರ್ಚ್ 17 – ಹಿಂದೂಸ್ತಾನಿ ಸಂಗೀತ, ರಿಟೇಲ್, ಆಟೋಮೊಬೈಲ್, ಹೆಲ್ತ್ ಕೇರ್

SSLC ಪರೀಕ್ಷೆ-1 ದಿನಾಂಕಗಳು

  • ಮಾರ್ಚ್ 18 – ಪ್ರಥಮ ಭಾಷೆ

  • ಮಾರ್ಚ್ 23 – ವಿಜ್ಞಾನ

  • ಮಾರ್ಚ್ 25 – ದ್ವಿತೀಯ ಭಾಷೆ

  • ಮಾರ್ಚ್ 28 – ಗಣಿತ

  • ಮಾರ್ಚ್ 30 – ತೃತೀಯ ಭಾಷೆ

  • ಏಪ್ರಿಲ್ 2 – ಸಮಾಜ ವಿಜ್ಞಾನ

SSLC ಪರೀಕ್ಷೆ-2 ವೇಳಾಪಟ್ಟಿ

  • ಮೇ 18 – ಪ್ರಥಮ ಭಾಷೆ

  • ಮೇ 19 – ವಿಜ್ಞಾನ

  • ಮೇ 20 – ದ್ವಿತೀಯ ಭಾಷೆ

  • ಮೇ 21 – ಗಣಿತ

  • ಮೇ 22 – ತೃತೀಯ ಭಾಷೆ

  • ಮೇ 23 – ಸಮಾಜ ವಿಜ್ಞಾನ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Iran Peace Talks: ಹಾರ್ಮುಜ್ ಜಲಸಂಧಿಯಲ್ಲಿ ಮುಂದುವರೆದ ಉದ್ವಿಗ್ನತೆ; ಇರಾನ್‌-ಅಮೆರಿಕಾ ನಡುವೆ ಶೀಘ್ರದಲ್ಲೇ ಮತ್ತೊಂದು ಸುತ್ತಿನ ಮಾತುಕತೆ..!

ಹಾರ್ಮುಜ್ ಜಲಸಂಧಿ ದಿಗ್ಬಂಧನ: ಇದು ಅಪಾಯಕಾರಿ-ಬೇಜವಾಬ್ದಾರಿ ನಡೆ; ಅಮೆರಿಕಾ ವಿರುದ್ಧ ಚೀನಾ ಕಿಡಿ

ದೇಶದ ಹಿತಾಸಕ್ತಿಯೇ ಮುಖ್ಯ, ಭಾರತದ ಪರವಾಗಿ ಲಾಬಿ ನಡೆಸುವಂತೆ ಅತ್ತೆ-ಮಾವ ಎಂದಿಗೂ ಒತ್ತಡ ಹೇರಿಲ್ಲ: H-1B ಕಠಿಣ ನಿಯಮ ಸಮರ್ಥಿಸಿಕೊಂಡ ಜೆಡಿ ವ್ಯಾನ್ಸ್..!

'ಹಾರ್ಮುಜ್ ಜಲಸಂಧಿ' ದಿಗ್ಬಂಧನ ನಡುವೆ ಟ್ರಂಪ್-ಪ್ರಧಾನಿ ಮೋದಿ ದೂರವಾಣಿ ಸಂಭಾಷಣೆ! ಏನೆಲ್ಲಾ ಮಾತುಕತೆ ಆಯ್ತು?

ಅಮೆರಿಕದ ಹಾರ್ಮುಜ್ ದಿಗ್ಬಂಧನದಿಂದ ಇರಾನ್‌ಗೆ ದಿನಕ್ಕೆ ಅಂದಾಜು $435 ಮಿಲಿಯನ್ ನಷ್ಟ; ಆದರೂ ದೀರ್ಘಾವಧಿಯ ಬ್ಲಾಕೇಡ್ ಕಷ್ಟ!

SCROLL FOR NEXT