ಸಂಗ್ರಹ ಚಿತ್ರ 
ರಾಜ್ಯ

ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಯಾರೂ ಮಸಿ ಬಳಿದಿಲ್ಲ; ಮರದಿಂದ ದ್ರವ ಪದಾರ್ಥ ಬಿದ್ದಿದೆ: ಬೆಳಗಾವಿ ಪೊಲೀಸರ ಸ್ಪಷ್ಟನೆ

ಘಟನೆಯ ಹಿನ್ನೆಲೆಯಲ್ಲಿ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದು, ಫೆಬ್ರವರಿ 18ರ ಸಂಜೆಯಿಂದ ಫೆಬ್ರವರಿ 19ರ ಬೆಳಿಗ್ಗೆ 7 ಗಂಟೆಯವರೆಗೆ ಯಾವುದೇ ವ್ಯಕ್ತಿ ಪ್ರತಿಮೆಯ ಬಳಿ ಬಂದು ಮಸಿ ಎರಚಿದ ದೃಶ್ಯ ಕಂಡುಬಂದಿಲ್ಲ.

ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಸಿ ಬಳಿಯಲಾಗಿದೆ ಎಂಬ ಆರೋಪಗಳ ಬಗ್ಗೆ ಬೆಳಗಾವಿ ನಗರ ಪೊಲೀಸರು ಸ್ಪಷ್ಟನೆ ನೀಡಿದ್ದು, ಪ್ರತಿಮೆಗೆ ಯಾರು ಮಸಿ ಬಳಿದಿಲ್ಲ. ಬದಲಿಗೆ ಮರದಿಂದ ದ್ರವ ಪದಾರ್ಥ ಬಿದ್ದಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಬೆಳಗಾವಿ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಅವರು ಮಾಹಿತಿ ನೀಡಿದ್ದು, ಫೆಬ್ರವರಿ 19ರಂದು ಪೀರನವಾಡಿ ಸಮೀಪದ ರಾಯಣ್ಣ ಪ್ರತಿಮೆಯ ಮೇಲೆ ಕಪ್ಪು ಮಸಿ ಬಳಿದಿದ್ದಾರೆಂಬುದರ ಬಗ್ಗೆ ಇಲಾಖೆ ಮಾಹಿತಿ ಬಂದಿತ್ತು. ತಕ್ಷಣ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಘಟನೆಯ ಹಿನ್ನೆಲೆಯಲ್ಲಿ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದು, ಫೆಬ್ರವರಿ 18ರ ಸಂಜೆಯಿಂದ ಫೆಬ್ರವರಿ 19ರ ಬೆಳಿಗ್ಗೆ 7 ಗಂಟೆಯವರೆಗೆ ಯಾವುದೇ ವ್ಯಕ್ತಿ ಪ್ರತಿಮೆಯ ಬಳಿ ಬಂದು ಮಸಿ ಎರಚಿದ ದೃಶ್ಯ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ.

ಪ್ರತಿಮೆಯ ಮೇಲಿನ ಕಲೆಗಳು, ಸಮೀಪದ ರಸ್ತೆ ಮೇಲ್ಮೈ ಮತ್ತು ಹತ್ತಿರದ ಮರದ ಎಲೆಗಳ ಮೇಲೆ ಕಂಡುಬಂದ ಅಂಟುವ ಪದಾರ್ಥದ ಮಾದರಿಗಳನ್ನು ಪ್ರಾದೇಶಿಕ ಫಾರೆನ್ಸಿಕ್ ವಿಜ್ಞಾನ ಪ್ರಯೋಗಾಲಯ (RFSL)ಗೆ ಕಳುಹಿಸಲಾಗಿತ್ತು. ಪ್ರಯೋಗಾಲಯ ವರದಿಯಲ್ಲಿ ಅದು ಸಸ್ಯ ಮೂಲದ ಮಸಿ ಎಂದು ವರದಿ ದೃಢಪಡಿಸಿದೆ. ಈ ಹಿನ್ನೆಲೆಯಲ್ಲಿ ಜನರು ಊಹಾಪೋಹಗಳಿಗೆ ಕಿವಿಗೊಡದೆ, ಶಾಂತಿ ಕಾಪಾಡಬೇಕು ಎಂದು ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಂಗ್ರೆಸ್ ಪಕ್ಷದ ರಕ್ಷಣೆ ಏಕೆ ? ಮಹಿಳಾ ಸಂಸದರನ್ನು ಗುರಾಣಿಯಾಗಿ ಬಳಸಿಕೊಳ್ಳುವಷ್ಟು ಟೊಳ್ಳಾಗಿದ್ದೀರಾ? ಅಶಿಸ್ತಿನ ನಾಯಕರಿಂದ ದೇಶ ನಾಶ- PM

ಮೆಕ್ಸಿಕೋ ಡ್ರಗ್ ಕಾರ್ಟೆಲ್ ಕಿಂಗ್‌ಪಿನ್ 'ಎಲ್ ಮೆಂಚೊ' ಹತ್ಯೆ: ಹಲವು ರಾಜ್ಯಗಳಲ್ಲಿ ಭುಗಿಲೆದ್ದ ಹಿಂಸಾಚಾರ

ಬಿಟ್ಟುಹೋದ ಪತ್ನಿ, ಪುತ್ರನಿಗೆ ದುಬಾರಿ ಬೆಲೆಯ 'ಕಾರು ಗಿಫ್ಟ್' ಮಾಡಿದ ಹಾರ್ದಿಕ್ ಪಾಂಡ್ಯ! Video

ಬಂಗಾಳದ 'ರಾಜಕೀಯ ಚಾಣಕ್ಯ' ಮಾಜಿ ರೈಲ್ವೆ ಸಚಿವ ಮುಕುಲ್ ರಾಯ್ ನಿಧನ

CM ಕುರ್ಚಿ ಕದನ: ಬಾಯಿ ಮುಚ್ಚಿಕೊಂಡರಿ; ಬೆಂಬಲಿಗರಿಗೆ ಡಿಕೆ.ಶಿವಕುಮಾರ್ ಖಡಕ್ ಎಚ್ಚರಿಕೆ

SCROLL FOR NEXT