ಬೆಂಗಳೂರು: ಸಂಸದೆ ಪ್ರಿಯಾಂಕಾ ವಾದ್ರಾ ಪತಿ ರಾಬರ್ಟ್ ವಾದ್ರ ಬೆಂಗಳೂರಿನಲ್ಲಿ ಮೊಕ್ಕಾಂ ಹೂಡಿದ್ದಾರೆ. ಕಳೆದ ಎರಡು ದಿನಗಳಿಂದ ಕರ್ನಾಟಕ ಕಾಂಗ್ರೆಸ್ ಹಿರಿಯ ನಾಯಕನ ಪುತ್ರನ ಜೊತೆ ಸಿಟಿ ರೌಂಡ್ಸ್ ಹೊಡೆಯುತ್ತಿದ್ದಾರೆ.
ಖಾಸಗಿ ಕಾರ್ಯಕ್ರಮದ ನಿಮಿತ್ತ ಬೆಂಗಳೂರಿಗೆ ಆಗಮಿಸಿರುವ ರಾಬರ್ಟ್ ವಾದ್ರಾ, ನಿನ್ನೆ (ಫೆಬ್ರವರಿ 25) ಇಸ್ಕಾನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಬಳಿಕ ರಂಜಾನ್ ಮಾಸ ನಿಮಿತ್ತ ಬೆಂಗಳೂರಿನ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ನಂತರ ಖಾಸಗಿ ಹೊಟೆಲ್ ನಲ್ಲಿ ಹಿರಿಯ ನಾಯಕನ ಜೊತೆ ಮಾತುಕತೆ ನಡೆಸಿದ್ದರು. ಇನ್ನು ಕೆಲ ಹಿರಿಯ ನಾಯಕರು ಭೇಟಿಗೆ ಸಮಯ ಕೇಳಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದ್ದು, ಇದು ಕಾಂಗ್ರೆಸ್ ಮನೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.