ಮೈಸೂರು: ‘ಸೇವ್ ಮೈಸೂರು ಸಿಲ್ಕ್’ ಅಭಿಯಾನ ಆರಂಭ ಮಾಡುವುದಾಗಿ ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಸ್ಯಾಂಡಲ್ ಸೋಪ್ ಗೆ ನಟಿ ತಮನ್ನಾ ಭಾಟಿಯಾ ಪ್ರಚಾರದ ರಾಯಭಾರಿಯನ್ನಾಗಿ ಮಾಡಿ 2 ಕೋಟಿ ರೂಪಾಯಿ ಕೊಟ್ಟಿದ್ದಾರೆ. ಯಾಕೆ ಕನ್ನಡದವರು ಯಾರೂ ಸಿಗಲಿಲ್ವಾ? ರಶ್ಮಿಕಾ ಮಂದಣ್ಣ ಇದಕ್ಕಿಂತ ಫೇಮಸ್ ಇದ್ದಾರೆ. ಯಶ್ ಅವರ ಪತ್ನಿ ಮಕ್ಕಳಿಗೆ ಐದು ಕೋಟಿ ಕೊಟ್ಟಿದ್ದರೆ ಅವರೇ ನಮ್ಮ ಹೆಮ್ಮೆ ಅಂತ ಬಂದು ಮಾಡುತ್ತಿದ್ದರು. ಜನರ ಹಣವನ್ನು ಸರ್ಕಾರ ದುಂದುವೆಚ್ಚ ಮಾಡುತ್ತಿದೆ ಎಂದು ಆರೋಪಿಸಿದರು.
ಮೈಸೂರಲ್ಲಿ ಮಹಾರಾಜರು ಎಂದರೆ ತಿರುಗಿ ಬೀಳುತ್ತಾರೆ. ಮಹದೇವಪ್ಪ ಆಗ್ಗಾಗ್ಗೆ ಮಹಾರಾಜರಿಗಿಂತ ಸಿದ್ದರಾಮಯ್ಯ ಹೆಚ್ಚು ಕೆಲಸ ಮಾಡಿದ್ದಾರೆ ಅಂತಾರೆ. ಕೆಆರ್ ಎಸ್ ಡ್ಯಾಂ ಕಟ್ಟಿದ್ದು ಮೈಸೂರು ಮಹಾರಾಜರು/ ಆದರೆ ಟಿಪ್ಪುಸುಲ್ತಾನ್ ಅಂತ ಮಹದೇವಪ್ಪ ಬೊಂಬಡ ಹೊಡೆಯುತ್ತಿದ್ದರು. ಎಲ್ಲದರಲ್ಲೂ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಆರನೇ ತಾರೀಖು ಸದನ ನಡೆಯುತ್ತಿದೆ. ಧಾರವಾಡದ ರೀತಿ ಇದಕ್ಕೂ ತೀರ್ಮಾನ ತೆಗೆದುಕೊಳ್ಳಿ. ಇಲ್ಲವಾದರೆ ಒಳಗೆ, ಹೊರಗೆ ಚರ್ಚೆ ಮಾಡುತ್ತೇವೆ ಎಂದರು.
ನಮ್ಮ ಹೋರಾಟ 50 ಸಾವಿರ ಉದ್ಯೋಗಕ್ಕಲ್ಲ. 2.84 ಲಕ್ಷ ಉದ್ಯೋಗಕ್ಕೆ ಗೆಜೆಟ್ ಹೊರಡಿಸಿ. ಬರೀ ಬಾಯಿ ಮಾತಿಗೆ ಹೇಳಬೇಡಿ. ಯಾವಾಗ ಆದೇಶಗಳನ್ನ ಬಿಡುಗಡೆ ಮಾಡುತ್ತೀರಿ. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪಾದಯಾತ್ರೆ ತೀರ್ಮಾನವಾಗಿತ್ತು. ಇವರು 50 ಸಾವಿರ ಹುದ್ದೆಗಳ ಭರ್ತಿಗೆ ಘೋಷಣೆ ಮಾಡಿದ್ದಕ್ಕೆ ತಾತ್ಕಾಲಿಕ ಕೈ ಬಿಟ್ಟಿದ್ದೇವೆ ಎಂದರು,
ಸಿಲ್ಕ್ & ಮಿಲ್ಕ್ ಎರಡೂ ರಾಜ್ಯದ ಬ್ರ್ಯಾಂಡ್ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಠಿಯ ಕನಸು. ವಿದೇಶದಿಂದ ಯಂತ್ರೋಪಕರಣ ತಂದು 112 ವರ್ಷದ ಹಿಂದೆ ಸ್ಥಾಪಿಸಿದ್ದರು. ರೈತರಿಗೆ ಅನುಕೂಲ, ಉದ್ಯೋಗ ಸೃಷ್ಠಿ ದೃಷ್ಠಿಯಿಂದ ಸ್ಥಾಪಿಸಿದ್ದರು. ಚನ್ನಪಟ್ಟಣದಲ್ಲೂ 400 ಮಂದಿ ಕೆಲಸ ಮಾಡಿದ್ದಾರೆ. ತಿ.ನರಸೀಪುರದಲ್ಲಿ 13 ಎಕರೆ ಭೂಮಿ ಇದೆ. 6 ಎಕರೆ ಭೂಮಿಯನ್ನು ಕ್ರೀಡಾಂಗಣಕ್ಕೆ ಪರಭಾರೆ ಮಾಡಿದ್ದಾರೆ. ಚನ್ನಪಟ್ಟಣದಲ್ಲಿ 1200-1400 ಸೀರೆ ತಯಾರಿ ಮಾಡುತ್ತಾರೆ. ಅಷ್ಟೂ ಸೀರೆಗಳು ಒಂದೇ ದಿನಕ್ಕೆ ಒಂದೇ ಗಂಟೆಗೆ ಬಿಕರಿ ಆಗುತ್ತದೆ. ಚಾಮುಂಡಿ ತಾಯಿಗೆ ಇದೇ ಸೀರೆಯನ್ನು ಉಡುಗೆಯಾಗಿ ತೊಡುವ ಪ್ರತೀತಿ ಇದೆ. ಮದುವೆ, ಆರತಕ್ಷತೆಗೆ ಪವಿತ್ರತೆಯಿಂದ ಸೀರೆ ಬಳಸುತ್ತಾರೆ. 96 ಕೋಟಿ ರೂಪಾಯಿ ಲಾಭ ರೇಷ್ಮೆ ಸೀರೆಯಿಂದ ಬಂದಿದೆ ಎಂದರು.