ಡಿ ಕೆ ಶಿವಕುಮಾರ್  
ರಾಜ್ಯ

ಈ ವರ್ಷವೇ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆ: ಡಿ ಕೆ ಶಿವಕುಮಾರ್

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಡಿಯಲ್ಲಿ ಬರುವ ಐದು ಸಿಟಿ ಕಾರ್ಪೊರೇಷನ್ ಚುನಾವಣೆಗೆ ಪಕ್ಷದ ಟಿಕೆಟ್‌ ಬಯಸುವ ಆಕಾಂಕ್ಷಿಗಳಿಗೆ ಕಾಂಗ್ರೆಸ್ ಅರ್ಜಿ ನಮೂನೆಗಳನ್ನು ನೀಡಲು ಪ್ರಾರಂಭಿಸಿತು.

ಬೆಂಗಳೂರು: 2026 ರಲ್ಲಿ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಪ್ರತಿಜ್ಞೆ ಕಾಂಗ್ರೆಸ್ ಮಾಡಿದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

2026 ರಲ್ಲಿ, ಕಾಂಗ್ರೆಸ್ ಪಕ್ಷವು ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವುದಾಗಿ ಪ್ರತಿಜ್ಞೆ ಮಾಡಿದೆ ಎಂದು ಹೇಳಿದರು. 2021 ರಿಂದ ನಡೆಯಲಿರುವ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳನ್ನು ಸರ್ಕಾರ ಮುಂದಿನ 2-3 ತಿಂಗಳಲ್ಲಿ ನಡೆಸಬೇಕಾಗುತ್ತದೆ, ಪಕ್ಷದ ನಾಯಕರು ಸಿದ್ಧತೆ ಮಾಡಿಕೊಳ್ಳುವಂತೆ ಕೇಳಿಕೊಂಡರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಡಿಯಲ್ಲಿ ಬರುವ ಐದು ಸಿಟಿ ಕಾರ್ಪೊರೇಷನ್ ಚುನಾವಣೆಗೆ ಪಕ್ಷದ ಟಿಕೆಟ್‌ ಬಯಸುವ ಆಕಾಂಕ್ಷಿಗಳಿಗೆ ಕಾಂಗ್ರೆಸ್ ಅರ್ಜಿ ನಮೂನೆಗಳನ್ನು ನೀಡಲು ಪ್ರಾರಂಭಿಸಿತು.

ರಾಜ್ಯದ ಜನತೆಯ ಶಾಂತಿ ಮತ್ತು ಸಂತೋಷ ಸರ್ಕಾರಕ್ಕೆ ಮುಖ್ಯವಾಗಿದ್ದು, ಆ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ. ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಪ್ರಯತ್ನ ಮಾಡುತ್ತಿದ್ದೇವೆ ಎಂದರು. 2025 ರಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡಿದೆ. ಜಾಗತಿಕ ಹೂಡಿಕೆದಾರರ ಸಭೆ, ಬೆಂಗಳೂರು ತಂತ್ರಜ್ಞಾನ ಶೃಂಗಸಭೆ, ಪ್ರಣಾಳಿಕೆಯ ಭರವಸೆಗಳ ಈಡೇರಿಕೆ ಮತ್ತು ನೀರಾವರಿ ವಲಯದಲ್ಲಿನ ಪ್ರಮುಖ ನಿರ್ಧಾರಗಳಾದ ಕೃಷ್ಣಾ ಮೇಲ್ದಂಡೆ ಯೋಜನೆ, ತುಂಗಭದ್ರಾ ಮತ್ತು ಮೇಕೆದಾಟು ಯೋಜನೆಗಳ ಉದಾಹರಣೆಗಳನ್ನು ಅವರು ನೀಡಿದರು.

ಜಲಸಂಪನ್ಮೂಲ ಸಚಿವರೂ ಆಗಿರುವ ಡಿ ಕೆ ಶಿವಕುಮಾರ್, ತಮ್ಮ 36 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಐತಿಹಾಸಿಕ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಹಿಂದೆ ಎಂದಿಗೂ ಬೇರೆ ಸರ್ಕಾರಗಳು ಜಾರಿಗೆ ತಂದಿದ್ದು ನಾನು ನೋಡಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಂದೋರ್‌ನಲ್ಲಿ ಅತಿಸಾರದಿಂದ ನಾಲ್ವರು ಸಾವು, 1400ಕ್ಕೂ ಹೆಚ್ಚು ಮಂದಿ ಅಸ್ವಸ್ಥ: ಕಲುಷಿತ ನೀರು ಕಾರಣ ಎಂದು ಪ್ರಯೋಗಾಲಯ ದೃಢ

ಐದು ತಿಂಗಳ ಮಗುವಿನ ಜೀವತೆಗೆದ ಹನಿ ನೀರು: ವಿವಾಹವಾಗಿ 10 ವರ್ಷದ ನಂತರ ಜನಿಸಿದ್ದ ಕಂದಮ್ಮ!

ಚೆನ್ನೈನಲ್ಲಿಂದು 3ನೇ ಆವೃತ್ತಿಯ ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭ

ಬಳ್ಳಾರಿ ಘರ್ಷಣೆ: ಜನಾರ್ದನ ರೆಡ್ಡಿ ಸೇರಿ 11 ಮಂದಿ ವಿರುದ್ಧ ಕೇಸು ದಾಖಲು-Video

'ತಿನ್ನೋದು ಭಾರತದಲ್ಲಿ, ಹಾಡಿ ಹೊಗಳೋದು ಪಾಕಿಸ್ತಾನ, ಬಾಂಗ್ಲಾದೇಶನಾ': ಶಾರೂಕ್ ಖಾನ್ ವಿರುದ್ಧ ಬಿಜೆಪಿ ಕಿಡಿ!

SCROLL FOR NEXT