ತುಮಕೂರು ಭೇಟಿಯ ಸಂದರ್ಭದಲ್ಲಿ ಪ್ರೊ. ಮಾಧವ ಗಾಡ್ಗೀಳ್ 
ರಾಜ್ಯ

ತುಮಕೂರು: ಅಪರೂಪದ ವನ್ಯಜೀವಿಗಳಿಗೆ ಮರು ಜೀವ ನೀಡಿದ್ದ ಮಾಧವ ಗಾಡ್ಗೀಳ್‌..!

ಪರಿಸರ ಶಾಸ್ತ್ರಜ್ಞ, ಬರಹಗಾರ ಹಾಗೂ ಅಂಕಣಕಾರರಾಗಿ ಗುರುತಿಸಿಕೊಂಡಿದ್ದ ಗಾಡ್ಗೀಳ್ ಅವರು, ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹಾ ಮಂಡಳಿಯ ಸದಸ್ಯರೂ ಆಗಿದ್ದರು.2010 ರ ಪಶ್ಚಿಮ ಘಟ್ಟಗಳ ಪರಿಸರ ವಿಜ್ಞಾನ ತಜ್ಞರ ಸಮಿತಿಯ ಮುಖ್ಯಸ್ಥರಾಗಿದ್ದರು.

ಹುಬ್ಬಳ್ಳಿ: ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಜೀವನದುದ್ದಕ್ಕೂ ಹೋರಾಡಿದ್ದ ಭಾರತದ ಅಗ್ರಗಣ್ಯ ಪರಿಸರ ತಜ್ಞ ಮಾಧವ ಗಾಡ್ಗೀಳ್ (83) ಬುಧವಾರ ತಡರಾತ್ರಿ ಪುಣೆಯ ತಮ್ಮ ನಿವಾಸದಲ್ಲಿ ನಿವಾಸದಲ್ಲಿ ನಿಧನರಾಗಿದ್ದು, ಇದರಿಂದ ಪರಿಸರ ಮತ್ತು ಪಶ್ಚಿಮಘಟ್ಟಗಳ ಕುರಿತು ಚಿಂತನೆ ಮಾಡುತ್ತಿರುವ ಜನರಿಗೆ ಬಹು ದೊಡ್ಡ ಅಘಾತವಾಗಿದೆ.

ಪರಿಸರ ಶಾಸ್ತ್ರಜ್ಞ, ಬರಹಗಾರ ಹಾಗೂ ಅಂಕಣಕಾರರಾಗಿ ಗುರುತಿಸಿಕೊಂಡಿದ್ದ ಗಾಡ್ಗೀಳ್ ಅವರು, ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹಾ ಮಂಡಳಿಯ ಸದಸ್ಯರೂ ಆಗಿದ್ದರು.2010 ರ ಪಶ್ಚಿಮ ಘಟ್ಟಗಳ ಪರಿಸರ ವಿಜ್ಞಾನ ತಜ್ಞರ ಸಮಿತಿಯ ಮುಖ್ಯಸ್ಥರಾಗಿದ್ದರು.

ಇವರು ಅಧ್ಯಯನ ನಡೆಸಿ ತಯಾರಿಸಿದ್ದ ವರದಿಯನ್ನು ಗಾಡ್ಗೀಳ್‌ ಆಯೋಗದ ವರದಿ ಎಂದೇ ಕರೆಯಲಾಗುತ್ತಿತ್ತು. ಇವರ ನೇತೃತ್ವದ ಸಮಿತಿ ಪಶ್ಚಿಮ ಘಟ್ಟಗಳ ಸೂಕ್ಷ್ಮ ಪ್ರದೇಶಗಳನ್ನು ರಕ್ಷಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಶಿಫಾರಸು ಮಾಡಿತ್ತು. ಇವರ ವರದಿಯು ಕರ್ನಾಟಕ ಸೇರಿದಂತೆ ಆರು ರಾಜ್ಯಗಳಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿತ್ತು.

ಗಾಡ್ಗೀಳ್ ಅವರು ಸ್ಥಳೀಯರನ್ನು ಒಳಗೊಂಡ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡ ನಂತರ ತುಮಕೂರು ಜಿಲ್ಲೆಯ ಅಪರೂಪದ ವನ್ಯಜೀವಿಗಳಿಗೆ ಹೊಸಜೀವ ಸಿಕ್ಕಂತಾಗಿದೆ.

2000ನೇ ವರ್ಷದಲ್ಲಿ ಗಾಡ್ಗೀಳ್ ನೇತೃತ್ವದಲ್ಲಿ ತುಮಕೂರು ಜಿಲ್ಲೆಯ ನಾಲ್ಕು ಪಂಚಾಯತ್‌ಗಳಲ್ಲಿ ಜನರ ಜೀವವೈವಿಧ್ಯ ದಾಖಲೆ (People’s Biodiversity Register – PBR) ಯೋಜನೆ ಆರಂಭಿಸಲಾಯಿತು. ಇದರ ಮೂಲಕ ಈ ಪ್ರದೇಶದಲ್ಲಿ ಕಂಡುಬರುವ ಅಪರೂಪದ ಸಸ್ಯ ಹಾಗೂ ಪ್ರಾಣಿ ಜಾತಿಗಳ ಸಂಪೂರ್ಣ ದಾಖಲೆ ಸಿದ್ಧವಾಯಿತು. ಈ ದಾಖಲೆಗಳೇ ಮುಂದಿನ ದಿನಗಳಲ್ಲಿ ವಿಶಿಷ್ಟ ಅರಣ್ಯ ವಾಸಸ್ಥಾನಗಳ ಸಂರಕ್ಷಣಾ ಯೋಜನೆಗಳಿಗೆ ಹೊಸ ದಿಕ್ಕು ನೀಡಿತು.

ಕಾಡುಪಾಪಗಳಿಗೆ ನೆಲೆಯಾಗಿರುವ ನಾಗವಳ್ಳಿ ಗ್ರಾಮದಲ್ಲಿ ಪೀಪಲ್ಸ್ ಬಯೋಡೈವರ್ಸಿಟಿ ರಿಜಿಸ್ಟರ್ ಅನ್ನು ಪ್ರಾರಂಭಿಸಲಾಯಿತು. ಗಾಡ್ಗೀಳ್ ಅವರ ಹಸ್ತಕ್ಷೇಪದಿಂದಾಗಿ ಸ್ಥಳೀಯರು ಅಪರೂಪದ ಪ್ರಭೇದಗಳನ್ನು ಸಂರಕ್ಷಿಸಲು ಕೈಜೋಡಿಸಿದರು.

ತುಮಕೂರಿನ ವೈಲ್ಡ್‌ಲೈಫ್ ಅವೇರ್ ನೇಚರ್ ಕ್ಲಬ್ ಮೂಲಕ ಗಾಡ್ಗೀಳ್ ಅವರು ಜಿಲ್ಲೆಯಲ್ಲಿ ಹಲವಾರು ಜೀವವೈವಿಧ್ಯ ಕಾರ್ಯಗಳನ್ನು ನಡೆಸಿದರು. ಗುಡ್ಡು ತೋಪು ರಕ್ಷಿಸುವಲ್ಲಿ ಗಾಡ್ಗೀಳ್ ಅವರ ಪಾತ್ರ ಮಹತ್ವದ್ದಾಗಿತ್ತು ಎಂದು ಪರಿಸರವಾದಿ ಬಿ.ವಿ. ಗುಂಡಪ್ಪ ಅವರು ಸ್ಮರಿಸಿದ್ದಾರೆ.

ಗಾಡ್ಗೀಳ್ ಅವರ ಅಧ್ಯಯನದಿಂದ ವಿಶಿಷ್ಟ ಮರಗಳು, ಹುಲ್ಲುಗಾವಲು ಪ್ರದೇಶಗಳು ಮತ್ತು ಅಪರೂಪದ ಸ್ಥಳೀಯ ಮರಗಳ ಕುರಿತು ಜನರಲ್ಲಿ ಸಂರಕ್ಷಣೆಯ ಮನೋಭಾವ ಮೂಡಿತು. ಕೃಷ್ಣಮೃಗಗಳಿಗೆ ಅತ್ಯುತ್ತಮ ವಾಸಸ್ಥಾನವಾಗಿರುವ ಜಯಮಂಗಲಿ ಸಂರಕ್ಷಿತ ಪ್ರದೇಶಕ್ಕೆ ರಕ್ಷಣಾ ಸ್ಥಾನಮಾನ ದೊರಕುವಲ್ಲಿಯೂ ಗಾಡ್ಗೀಳ್ ಅವರು ಪ್ರಮುಖ ಪಾತ್ರವಹಿಸಿದ್ದರು. ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪುನರ್ವಸತಿ ಯೋಜನೆಗೆ 18 ಗ್ರಾಮಗಳನ್ನು ಗುರ್ತಿಸಲಾಗಿತ್ತು. ಇಲ್ಲಿನ ಜೀವವೈವಿಧ್ಯ ದಾಖಲಾತಿ ಕಾರ್ಯವನ್ನು ತುಮಕೂರು ಪರಿಸರವಾದಿಗಳಿಗೆ ಗಾಡ್ಗೀಳ್ ನೀಡಿದ್ದರು. ಇಂತಹ ಕಾರ್ಯಯೋಜನೆಗಳು ಅನೇಕರು ಪರಿಸರ ಕಾರ್ಯಕರ್ತರಾಗಲು ಕಾರಣವಾಯಿತು. 2022 ರಲ್ಲಿ ಕರ್ನಾಟಕ ಜೀವವೈವಿಧ್ಯ ಕಾಯ್ದೆಯನ್ನು ರಚಿಸುವಲ್ಲಿ ಗಾಡ್ಗೀಳ್ ಮಹತ್ವದ ಪಾತ್ರವಹಿಸಿದ್ದರು.

ಗಾಡ್ಗೀಳ್ ಅವರು ತಮ್ಮ ಅಧ್ಯಯನವನ್ನು ಪಶ್ಚಿಮ ಘಟ್ಟಗಳಿಗೆ ಮಾತ್ರ ಸೀಮಿತಗೊಳಿಸಲಿಲ್ಲ. ಭಾರತದ ಪ್ರತಿಯೊಂದು ಅರಣ್ಯ ಆವಾಸಸ್ಥಾನವನ್ನು ಅಧ್ಯಯನ ಮಾಡಿದ್ದರು. ಪಶ್ಚಿಮ ಘಟ್ಟಗಳು, ಒಣ ಎಲೆ ಬೀಳುವ ಅರಣ್ಯಗಳು ಸೇರಿದಂತೆ ವಿವಿಧ ಅರಣ್ಯ ವಾಸಸ್ಥಾನಗಳ ಅಧ್ಯಯನ ನಡೆಸಿದರು. ಅವರ ವರದಿಗಳ ಆಧಾರದಲ್ಲಿ ಕೇರಳ ಹಾಗೂ ಮಹಾರಾಷ್ಟ್ರಗಳಲ್ಲಿ ಹಲವು ಜಲವಿದ್ಯುತ್ ಯೋಜನೆಗಳನ್ನು ಸ್ಥಗಿತಗೊಳಿಸಲಾಯಿತು ಎಂದು ಗುಂಡಪ್ಪ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ನಲ್ಲಿ 2 ವಾರ ಪೂರೈಸಿದ ಪ್ರತಿಭಟನೆ: ಸರ್ಕಾರಿ ಕಟ್ಟಡಗಳಿಗೆ ಬೆಂಕಿ, ಪ್ರತಿಭಟನಾಕಾರರಿಗೆ 'ಮರಣ ದಂಡನೆ' ಬೆದರಿಕೆ!

"Surely It's Time": ಕೊಹ್ಲಿ ನಿವೃತ್ತಿ ಬಗ್ಗೆ ದೊಡ್ಡ ಸಂದೇಶ ರವಾನಿಸಿದ ಉತ್ತಪ್ಪ!

'ಮನ್ರೇಗಾ ಬಚಾವೋ' ಸಂಗ್ರಾಮ: ಕಾಂಗ್ರೆಸ್ ಪಕ್ಷದಿಂದ ದೇಶಾದ್ಯಂತ 45 ದಿನಗಳ ಹೋರಾಟ ಆರಂಭ!

ಮಹಾರಾಷ್ಟ್ರದಲ್ಲಿ ಸಿಎಂ, ಡಿಸಿಎಂ ಮುಸುಕಿನ ಗುದ್ದಾಟ: ಅಜಿತ್ ಪವಾರ್ ವಿರುದ್ಧ ಫಡ್ನವೀಸ್ ಕಿಡಿ!

ಭಾಷಾ ಮಸೂದೆ ವಿರೋಧಿಸಿ ಸಿದ್ದರಾಮಯ್ಯ ಪತ್ರ: ಕೇರಳ ಸಿಎಂ ಸ್ಪಷ್ಟೀಕರಣ; ಪಿಣರಾಯಿ ವಿಜಯನ್ ಹೇಳಿದ್ದೇನು?

SCROLL FOR NEXT