ಗ್ರೇಟರ್ ಬೆಂಗಳೂರು ಪ್ರಾಧಿಕಾರ 
ರಾಜ್ಯ

Greater Bengaluru: 369 ವಾರ್ಡ್ ಗಳಿಗೆ ಕರಡು ಮೀಸಲಾತಿ ಪ್ರಕಟ; 174 ಸೀಟು ಮಹಿಳೆಯರಿಗೆ ಮೀಸಲು!

ಸಾರ್ವಜನಿಕರು 15 ದಿನಗಳೊಳಗೆ ಅಧಿಸೂಚನೆಗೆ ಸಲಹೆ, ಆಕ್ಷೇಪಣೆ ಸಲ್ಲಿಸಬಹುದು. ಜನವರಿ 23 ರೊಳಗೆ ವಿಕಾಸ ಸೌಧದ 4 ನೇ ಮಹಡಿಯಲ್ಲಿರುವ ನಗರಾಭಿವೃದ್ಧಿ ಇಲಾಖೆ ಕೊಠಡಿ ಸಂಖ್ಯೆ 436ರಲ್ಲಿ ಸಂಜೆ 5-30ರೊಳಗೆ ಆಕ್ಷೇಪಣೆ ಸಲ್ಲಿಸಬಹುದು.

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿರುವ ಐದು ಮಹಾನಗರ ಪಾಲಿಕೆಗಳ ಚುನಾವಣೆಗೆ ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ), ಇತರೆ ಹಿಂದುಳಿದ ವರ್ಗ (ಒಬಿಸಿ) ಎ, ಬಿ, ಮಹಿಳೆ ಮತ್ತು ಸಾಮಾನ್ಯ ವರ್ಗದ ವಾರ್ಡ್‌ಗಳಿಗೆ ಮೀಸಲಾತಿಯ ಕರಡು ಅಧಿಸೂಚನೆಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.

ಕುತೂಹಲಕಾರಿ ವಿಚಾರವೆಂದರೆ 369 ವಾರ್ಡ್ ಗಳ ಪೈಕಿ 174 ಸೀಟುಗಳನ್ನು ವಿವಿಧ ವರ್ಗಗಳ ಅಡಿಯಲ್ಲಿ ಮಹಿಳೆಯರಿಗೆ ಮೀಸಲಿಡಲಾಗಿದೆ. ನಗರಾಭಿವೃದ್ಧಿ ಇಲಾಖೆ (UDD)ಮೀಸಲಾತಿ ಘೋಷಿಸಲು 2011 ರ ಜನಗಣತಿಯನ್ನು ಪರಿಗಣಿಸಿದೆ.

ಸಾರ್ವಜನಿಕರು 15 ದಿನಗಳೊಳಗೆ ಅಧಿಸೂಚನೆಗೆ ಸಲಹೆ, ಆಕ್ಷೇಪಣೆ ಸಲ್ಲಿಸಬಹುದು. ಜನವರಿ 23 ರೊಳಗೆ ವಿಕಾಸ ಸೌಧದ 4 ನೇ ಮಹಡಿಯಲ್ಲಿರುವ ನಗರಾಭಿವೃದ್ಧಿ ಇಲಾಖೆ ಕೊಠಡಿ ಸಂಖ್ಯೆ 436ರಲ್ಲಿ ಸಂಜೆ 5-30ರೊಳಗೆ ಆಕ್ಷೇಪಣೆ ಸಲ್ಲಿಸಬಹುದು. ಕರಡು ಅಧಿಸೂಚನೆಯೊಂದಿಗೆ ಬೆಂಗಳೂರು ಚುನಾವಣೆ ವದಂತಿ ಮತ್ತಷ್ಟು ಹೆಚ್ಚಾಗಿದೆ. ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಬೆಂಗಳೂರು ಸೆಂಟ್ರಲ್ ಸಿಟಿ ಕಾರ್ಪೊರೇಷನ್ (BCCC) ಆರು ವಿಧಾನಸಭಾ ಕ್ಷೇತ್ರಗಳಾದ ಶಿವಾಜಿನಗರ (8 ವಾರ್ಡ್), ಸಿವಿ ರಾಮನ್ ನಗರ (13), ಶಾಂತಿನಗರ (10), ಚಿಕ್ಕಪೇಟೆ (12), ಚಾಮರಾಜಪೇಟೆ (10) ಮತ್ತು ಗಾಂಧಿನಗರ (10) ಗಳಲ್ಲಿ 63 ವಾರ್ಡ್‌ಗಳನ್ನು ಹೊಂದಿದೆ. ಇಲ್ಲಿ ಸರ್ಕಾರವು 11 ಸ್ಥಾನಗಳನ್ನು ಪರಿಶಿಷ್ಟ ಜಾತಿಗೆ, ಒಂದು ಸ್ಥಾನವನ್ನು ಪರಿಶಿಷ್ಟ ಪಂಗಡಕ್ಕೆ 15 ಸೀಟುಗಳನ್ನು ಒಬಿಸಿ (A) ನಾಲ್ಕು (OBC) (B) ಮತ್ತು 32 ಸ್ಥಾನಗಳನ್ನು ಸಾಮಾನ್ಯ ವರ್ಗ ಮತ್ತು 29 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.

ಬೆಂಗಳೂರು ಉತ್ತರ ನಗರ ಪಾಲಿಕೆಯ (BNCC) 72 ವಾರ್ಡ್‌ಗಳಲ್ಲಿ 33 ಮಹಿಳೆಯರಿಗೆ ಮೀಸಲಾಗಿದೆ. ಇದರಲ್ಲಿ ಏಳು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಯಲಹಂಕ 7, ಬ್ಯಾಟರಾಯನಪುರ 14, ಸರ್ವಜ್ಞನಗರ 16, ಪುಲಕೇಶಿನಗರ 11 ಹೆಬ್ಬಾಳ 11, ಆರ್‌ಆರ್ ನಗರ 5 ಮತ್ತು ದಾಸರಹಳ್ಳಿ 8 ವಾರ್ಡ್ ಗಳಿಗೆ. ಇಲ್ಲಿ ಒಂಬತ್ತು ಸೀಟುಗಳನ್ನು ಪರಿಶಿಷ್ಟ ಜಾತಿಗೆ, ಎರಡು ST, 19 ಒಬಿಸಿ ಎಗೆ 19, ಒಬಿಸಿ ಬಿಗೆ ಮೂರು ಮತ್ತು 32 ಸಾಮಾನ್ಯ ವರ್ಗಕ್ಕೆ ಮತ್ತು 25 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದೆ.

ಕೆಆರ್ ಪುರಂ ಮತ್ತು ಮಹದೇವಪುರ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಂಗಳೂರು ಪೂರ್ವ ಮಹಾನಗರ ಪಾಲಿಕೆ (BWCC) 50 ವಾರ್ಡ್‌ಗಳನ್ನು ಹೊಂದಿದ್ದು, ಇದರಲ್ಲಿ 23 ಮಹಿಳೆಯರಿಗೆ, ಏಳು ಎಸ್‌ಸಿ, 1 ಎಸ್‌ಟಿ, 14 ಒಬಿಸಿ ಎ, 3 ಒಬಿಸಿ ಬಿ ಮತ್ತು 25 ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.

ಬೆಂಗಳೂರು ಪಶ್ಚಿಮ ಮಹಾನಗರ ಪಾಲಿಕೆಯಲ್ಲಿ (BWCC)ಒಟ್ಟು 112 ಸ್ಥಾನಗಳಲ್ಲಿ 55 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಇದರಲ್ಲಿ SC - 9, ST- 2, BC (A) - 30, OBC (B) - 7, ಸಾಮಾನ್ಯ ವರ್ಗ 64 ಸ್ಥಾನಗಳನ್ನು ಮೀಸಲಿಡಲಾಗಿದೆ. 10 ವಿಧಾನಸಭಾ ಕ್ಷೇತ್ರಗಳ ಪೈಕಿ ದಾಸರಹಳ್ಳಿ-10, ಯಶವಂತಪುರ-14, RRಲಕ್ಷ್ಮೀ-14 ಮಲ್ಲೇಶ್ವರಂ-10, ರಾಜಾಜಿನಗರ-11, ಗೋವಿಂದರಾಜನಗರ-13, ವಿಜಯನಗರ-13, ಬಸವನಗುಡಿ-10 ಮತ್ತು ಪದ್ಮನಾಭನಗರ-7 ವಾರ್ಡ್ ಗಳನ್ನು ಹೊಂದಿವೆ.

ಬೆಂಗಳೂರು ದಕ್ಷಿಣ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ (BSCC) ಮಹಿಳೆಯರಿಗೆ 34, ಎಸ್‌ಸಿಗೆ ಏಳು, ಎಸ್‌ಟಿಗೆ ಒಂದು, ಒಬಿಸಿ ಎಗೆ 14, ಒಬಿಸಿ ಬಿಗೆ ಮೂರು ಮತ್ತು ಸಾಮಾನ್ಯ ವರ್ಗಕ್ಕೆ 13 ಸ್ಥಾನಗಳನ್ನು ಮೀಸಲಿಡಲಾಗಿದೆ. ಈ ಪಾಲಿಕೆ ವ್ಯಾಪ್ತಿಯಲ್ಲಿ ಪದ್ಮನಾಭ ನಗರ-6, ಜಯನಗರ-10, ಬಿಟಿಎಂ-ಲೇಔಟ್-14, ಮಹದೇವಪುರ-1, ಆನೇಕಲ್-1, ಯಶವಂತಪುರ-1, ಬೆಂಗಳೂರು ದಕ್ಷಿಣ-19 ಮತ್ತು ಬೊಮ್ಮನಹಳ್ಳಿ-20 ವಾರ್ಡ್ ಗಳಿವೆ. ಬೃಹತ್ ಬೆಂಗಳೂರು ಆಡಳಿತ ಕಾಯಿದೆ 2024 ರ ಸೆಕ್ಷನ್ 29 ರ ಅಡಿಯಲ್ಲಿ ಕರಡು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.

ಮೀಸಲಾತಿಗೆ ವಿಪಕ್ಷ ಆಕ್ಷೇಪ: ಬೆಂಗಳೂರು ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬವಾಗುತ್ತಿರುವ ಬಗ್ಗೆ ತಾನು ಸೇರಿದಂತೆ ಆರು ಬಿಜೆಪಿ ಮುಖಂಡರು ನ್ಯಾಯಾಲಯದ ಮೆಟ್ಟಿಲೇರಿರುವುದಾಗಿ ಮಾಜಿ ಕಾರ್ಪೊರೇಟರ್ ಹಾಗೂ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಹೇಳಿದ್ದಾರೆ.

ಜನವರಿ 12ರೊಳಗೆ ಮೀಸಲು ಪಟ್ಟಿ ಪ್ರಕಟಿಸುವ ಕುರಿತು ವಿಚಾರಣೆ ಬಾಕಿ ಇದ್ದರೂ ಕಾಂಗ್ರೆಸ್ ಸರಕಾರ ಅವೈಜ್ಞಾನಿಕ ಪಟ್ಟಿ ಬಿಡುಗಡೆ ಮಾಡಿದೆ. ಕರಡು ಅಧಿಸೂಚನೆಯಂತೆ ಮಹಿಳೆಯರಿಗೆ 11 ಸೀಟು ಕಡಿಮೆಯಾಗಿದೆ, ಒಬಿಸಿ ಮತ್ತು ಎಸ್‌ಸಿ/ಎಸ್‌ಟಿಗೆ ಮೀಸಲಿಟ್ಟಿದ್ದ 15 ಸ್ಥಾನಗಳನ್ನು ತೆಗೆದು ಹಾಕಲಾಗಿದೆ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು. ಸರಕಾರ ಉದ್ದೇಶಪೂರ್ವಕವಾಗಿ ಚುನಾವಣೆ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕರ್ನಾಟಕದ ಮುಕುಟಕ್ಕೆ ಮತ್ತೊಂದು ಗರಿ: ಬೆಂಗಳೂರು ಮೂಲದ ಮೇಜರ್ Swathi ShanthaKumarಗೆ ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಪ್ರಶಸ್ತಿ!

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

Grok ಅಶ್ಲೀಲ ಕಂಟೆಂಟ್ ವಿವಾದ: ಕೇಂದ್ರ ಸರ್ಕಾರಕ್ಕೆ ಕೊನೆಗೂ ಮಣಿದ X, 600 ಖಾತೆಗಳ ಡಿಲೀಟ್!

ಕೌಟುಂಬಿಕ ಹಿಂಸಾಚಾರ ಸಂತ್ರಸ್ಥರಿಗೆ ಬೆಂಗಳೂರಿನಲ್ಲಿ ಅಣಬೆ ಕೃಷಿ ತರಬೇತಿ

SCROLL FOR NEXT