ಬೆಂಗಳೂರು: ಪ್ರೀತಿ ನಿರಾಕರಿಸಿದ ಯುವತಿಯನ್ನು ಕೊಲೆ ಮಾಡಲು ಪಾಗಲ್ ಪ್ರೇಮಿಯೊಬ್ಬ ಸ್ಕೆಚ್ ಹಾಕಿ, ಆನ್‌ಲೈನ್‌ನಲ್ಲಿ ಗನ್ ಖರೀದಿಸಿ ಹಾಡಹಗಲೇ ಗನ್ ಹಿಡಿದು ಓಡಾಡುತ್ತಿದ್ದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ. ಯುವಕನೋರ್ವ ಯುವತಿಯ ಹಿಂದೆ ಬಿದ್ದು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದನು. ಆದರೆ ಯುವಕನ ಪ್ರೀತಿಯನ್ನು ಯುವತಿ ನಿರಾಕರಿಸಿದ್ದಳು.
ಇದರಿಂದ ಕೋಪಗೊಂಡಿದ್ದ ಯುವಕ ಯುವತಿಯನ್ನು ಕೊಲ್ಲಲು ಸ್ಕೆಚ್ ಹಾಕಿದ್ದನು. ಅದೇ ಕಾರಣಕ್ಕಾಗಿ ಆನ್‌ಲೈನ್‌ನಲ್ಲಿ ಗನ್ ಖರೀದಿಸಿದ್ದನು. ಇನ್ನು ಗನ್ ಹಿಡಿದು ಹಾಡಹಗಲೇ ರಸ್ತೆಯಲ್ಲಿ ಪಾಗಲ್ ಪ್ರೇಮಿ ಓಡಾಡುತ್ತಿದ್ದನು. ಯುವತಿ ಸಮಯ ಪ್ರಜ್ಞೆ ಮೆರೆದಿದ್ದು, 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದ್ದಳು.
ತಕ್ಷಣ ಕಾರ್ಯಪ್ರವೃತ್ತರಾರ ನೆಲಮಂಗಲ ಠಾಣೆ ಪೊಲೀಸರು ಯುವಕನನ್ನು ಗುರುತಿಸಿ ಗನ್ ಸಮೇತ ಬಂಧಿಸಿ ಠಾಣೆಗೆ ಕರೆದೊಯ್ದಿದ್ದರು. ಬಂಧಿತ ಯುವಕ ಬಿಹಾರ ಮೂಲದವನು ಎಂದು ತಿಳಿದುಬಂದಿದೆ. ಗನ್ ಹಿಡಿದು ಯುವಕ ಓಡಾಡುತ್ತಿರುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ.