ತಂದೆಯ ಆರೋಗ್ಯ ವಿಚಾರಿಸುತ್ತಿರುವ ಈಶ್ವರ್ ಖಂಡ್ರೆ 
ರಾಜ್ಯ

ಮಾಜಿ ಸಚಿವ, ಶತಾಯುಷಿ ಭೀಮಣ್ಣ ಖಂಡ್ರೆ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ಭೇಟಿ ನೀಡಿ ತಂದೆಯ ಆರೋಗ್ಯ ವಿಚಾರಿಸಿದ ಸಚಿವ ಈಶ್ವರ್ ಖಂಡ್ರೆ

ನಮ್ಮ ತಂದೆಯವರು ಒಂದು ವಾರದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ವೈದ್ಯರ ತಂಡ 24 ತಾಸು ಅವರನ್ನು ನಿಗಾ ವಹಿಸಿದೆ. ಇವತ್ತು ಅವರ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಇದೆ.

ಬೀದರ್: ವಯೋಸಹಜ ರೋಗದಿಂದ ಬಳಲುತ್ತಿರುವ ಮಾಜಿ ಸಚಿವ, ಶತಾಯುಷಿ ಭೀಮಣ್ಣ ಖಂಡ್ರೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ನಗರದ ಗುದಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ನಡುವೆ ಶನಿವಾರ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಈಶ್ವರ್ ಖಂಡ್ರೆ ಅವರು ತಂದೆಯ ಆರೋಗ್ಯ ವಿಚಾರಿಸಿದರು.

ಬಳಿಕಮಾತನಾಡಿದ ಈಶ್ವರ್ ಖಂಡ್ರೆಯವರು, ನಮ್ಮ ತಂದೆಯವರು ಒಂದು ವಾರದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ವೈದ್ಯರ ತಂಡ 24 ತಾಸು ಅವರನ್ನು ನಿಗಾ ವಹಿಸಿದೆ. ಇವತ್ತು ಅವರ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಇದೆ ಎಂದು ಹೇಳಿದರು.

ನಮ್ಮ ತಂದೆಯವರಿಗೆ 102 ವಯಸ್ಸಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ. ಅವರು ಗುಣಮುಖರಾಗುತ್ತಾರೆ ಎನ್ನುವ ವಿಶ್ವಾಸ ಇದೆ. ಅವರ ಅಭಿಮಾನಿಗಳು ಅವರ ಆರೋಗ್ಯದ ಬಗ್ಗೆ ದೇವರಲ್ಲಿ ಪ್ರಾರ್ಥನೆ ಮಾಡಲಿ ಎಂದು ವಿನಂತಿಸಿದರು.

ಅವರಿಗೆ ಉಸಿರಾಟದಲ್ಲಿ ತೊಂದರೆಯಾಗುತ್ತಿತ್ತು. ರಕ್ತದೊತ್ತಡದಲ್ಲಿ ಏರುಪೇರಾಗುತ್ತಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಇವತ್ತು ಬೆಳಿಗ್ಗೆಯಿಂದ ಅವರ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಇದೆ. ಅವರು ಗುಣಮುಖರಾಗುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಲಿಲ್ಲ-ಮಾತನಾಡಲಾಗುತ್ತಿಲ್ಲ, ತೀವ್ರವಾಗಿ ಸುಟ್ಟು ಹೋದ ಖಮೇನಿ ಮುಖ; ಇರಾನ್ ಪರಮೋಚ್ಛ ನಾಯಕನ ಆರೋಗ್ಯದ ಬಗ್ಗೆ ಬಿಗ್​ ಅಪ್ಡೇಟ್​..!

ಭಾರತವನ್ನು ‘ನರಕಕೂಪ’ವೆಂದು ಹೀಯಾಳಿಸಿದ ಟ್ರಂಪ್: ಅಜ್ಞಾನಪೂರ್ಣ ಹೇಳಿಕೆ; ವಿದೇಶಾಂಗ ಇಲಾಖೆ ತೀವ್ರ ಕಿಡಿ

ಸಂಘದಿಂದ ಎರವಲು ಪಡೆದ Ai ಬಳಸುವುದಕ್ಕಿಂತ Oi ಬಳಸಿದರೆ BJP ಕೇಸರಲ್ಲಿ ಮುಳುಗುವುದರಿಂದ ಬಚಾವಾಗಬಹುದು: JDS ಕುರಿತು ಪ್ರಿಯಾಂಕ್ ಖರ್ಗೆ ವ್ಯಂಗ್ಯ

ನವೋದ್ಯಮ, ನಾವೀನ್ಯತೆ ಬಲವರ್ಧನೆ: ಐಡಿಯಾಬಾಜ್ ಟೆಕ್ ಜೊತೆಗಿನ ಒಪ್ಪಂದಕ್ಕೆ ರಾಜ್ಯ ಸರ್ಕಾರ ಸಹಿ!

ಸಚಿವ ಡಿ ಸುಧಾಕರ್ ಆರೋಗ್ಯ ಸ್ಥಿತಿ ಗಂಭೀರ: ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಕೆ

SCROLL FOR NEXT