ಹೆಚ್ ಸಿ ಮಹದೇವಪ್ಪ 
ರಾಜ್ಯ

ಗಾಂಧೀಜಿ ಹೆಸರನ್ನು ಅಳಿಸುವುದು ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಅವಮಾನ; VB-G RAM-G ಕಾಯ್ದೆ ವಿರುದ್ಧ ಪ್ರತಿಭಟನೆ: ಹೆಚ್.ಸಿ ಮಹದೇವಪ್ಪ

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಮಹಾತ್ಮ ಗಾಂಧಿಯವರ ಹೆಸರನ್ನು ಯೋಜನೆಯಿಂದ ತೆಗೆದುಹಾಕಿರುವುದು ರಾಷ್ಟ್ರಕ್ಕೆ ಜಾಗತಿಕ ಮಟ್ಟದಲ್ಲಿ ಅವಮಾನವಾಗಿದೆ ಎಂದರು.

ಮೈಸೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA)
ಯನ್ನು ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (Grameen) ಗಾಗಿ ವಿಕಸಿತ ಭಾರತ ಗ್ಯಾರಂಟಿ ಅಥವಾ ವಿಬಿ-ಜಿ ರಾಮ್ ಜಿ ಕಾಯ್ದೆಯೊಂದಿಗೆ ಬದಲಾಯಿಸುವುದನ್ನು ವಿರೋಧಿಸಿ, ಗ್ರಾಮ ಪಂಚಾಯತ್ ಮಟ್ಟದವರೆಗೆ - ಜಿಲ್ಲೆ, ತಾಲ್ಲೂಕು ಮತ್ತು ಹೋಬಳಿ - ಎಲ್ಲಾ ಹಂತಗಳಲ್ಲಿ ಪ್ರತಿಭಟನೆಗಳನ್ನು ನಡೆಸಲಾಗುವುದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ ತಿಳಿಸಿದ್ದಾರೆ.

ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಿನ್ನೆ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಮಾಜ ಕಲ್ಯಾಣ ಸಚಿವರೂ ಆಗಿರುವ ಮಹಾದೇವಪ್ಪ, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಮಹಾತ್ಮ ಗಾಂಧಿಯವರ ಹೆಸರನ್ನು ಯೋಜನೆಯಿಂದ ತೆಗೆದುಹಾಕಿರುವುದು ರಾಷ್ಟ್ರಕ್ಕೆ ಜಾಗತಿಕ ಮಟ್ಟದಲ್ಲಿ ಅವಮಾನವಾಗಿದೆ.

ಗಾಂಧೀಜಿಯವರು ಜಗತ್ತಿನಾದ್ಯಂತ ಪೂಜಿಸಲ್ಪಡುತ್ತಾರೆ. ಬ್ರಿಟಿಷರಿಂದ ಮೆಚ್ಚುಗೆ ಹೊಗಳಿಕೆ ಪಡೆದಿದ್ದರು. ಭಾರತದ ಕೊನೆಯ ಬ್ರಿಟಿಷ್ ಗವರ್ನರ್ ಜನರಲ್ ಲಾರ್ಡ್ ಮೌಂಟ್ ಬ್ಯಾಟನ್ ಒಮ್ಮೆ ತಮಗೆ ಒಬ್ಬನೇ ದೇವರು, ಅದು ಯೇಸು ಎಂದು ಹೇಳಿದ್ದರು. ಆದರೆ, ಗಾಂಧೀಜಿಯನ್ನು ನೋಡಿದ ನಂತರ, ಎರಡನೇ ದೇವರು ಎಂದಿದ್ದರು. ಬಿಜೆಪಿಯವರು ಗಾಂಧೀಜಿಯನ್ನು ಕೊಂದರು. ಈಗ, ಅವರನ್ನು ಇತಿಹಾಸದಿಂದ ಅಳಿಸಲು ಬಯಸುತ್ತಾರೆ. 2014 ರಲ್ಲಿ ಬಿಜೆಪಿ ಕೇಂದ್ರದಲ್ಲಿ ಸರ್ಕಾರ ರಚಿಸಿದ ನಂತರ ಹಲವಾರು ಹೆಸರುಗಳನ್ನು ಬದಲಾಯಿಸಿದೆ. ಆದರೆ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ ಎಂದರು.

ಬಿಜೆಪಿ ಸರ್ಕಾರವು 2005 ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಪರಿಚಯಿಸಿದ ಎಂಜಿಎನ್‌ಆರ್‌ಇಜಿಎ ಯೋಜನೆಯನ್ನು ಸಂವಿಧಾನಬಾಹಿರ ರೀತಿಯಲ್ಲಿ ಬದಲಾಯಿಸುತ್ತಿದೆ. ನಾಗರಿಕರ ಕೆಲಸ ಮಾಡುವ ಹಕ್ಕು ಮತ್ತು ಬದುಕುವ ಹಕ್ಕನ್ನು ಉಲ್ಲಂಘಿಸುತ್ತಿದೆ.

ಈ ಬದಲಾವಣೆಯ ಪರಿಣಾಮಗಳು ರಾಜಕೀಯ, ಆರ್ಥಿಕ ಮತ್ತು ಸಾಂವಿಧಾನಿಕ. ಇದು ಭಾರತದಲ್ಲಿ ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದೆ. ರಾಜ್ಯಗಳೊಂದಿಗೆ ಕೇಂದ್ರ ಸರ್ಕಾರ ಸಮಾಲೋಚನೆ ಮಾಡಿಲ್ಲ. ಈಗಾಗಲೇ ಕರ್ನಾಟಕವು ಕೇಂದ್ರದಿಂದ ತನ್ನ ಪಾಲನ್ನು ಪಡೆಯುತ್ತಿಲ್ಲ. ಈಗ, ವಿಬಿ-ಜಿ ರಾಮ್ ಜಿ ಕಾಯ್ದೆಯು ಮತ್ತಷ್ಟು ಹೊರೆಯಾಗಲಿದೆ. ಕೇಂದ್ರಕ್ಕೆ ಲಾಭವಾಗುವಂತೆ ಹಣಕಾಸಿನ ಅನುಪಾತವನ್ನು 90:10 ರಿಂದ 60:40 ಕ್ಕೆ ಬದಲಾಯಿಸಲಾಗಿದೆ ಎಂದರು.

ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸರಿಯಾದ ಉದ್ಯೋಗಾವಕಾಶಗಳಿಲ್ಲದೆ ಜೀವನಕ್ಕಾಗಿ ಎಂಜಿಎನ್‌ಆರ್‌ಇಜಿಎ ಯೋಜನೆಯನ್ನು ಅವಲಂಬಿಸಿರುವವರಾದ 19 ಕೋಟಿ ಬಡ ಜನರ ಬಗ್ಗೆ ಕೇಂದ್ರ ಸರ್ಕಾರ ಕಾಳಜಿ ವಹಿಸುತ್ತಿಲ್ಲ ಎಂದು ಹೇಳಿದರು.

ಬಡವರ ವಿರೋಧಿ

ಮನ್ರೇಗಾ ಯೋಜನೆಯು ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ ಮತ್ತು ಅಂತ್ಯೋದಯದ ಆದರ್ಶಗಳ ಸಾಕ್ಷಾತ್ಕಾರವಾಗಿದೆ ಎಂದು ಹೇಳಿದರು. ಬಿಜೆಪಿ ಬಡ ಜನರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ವರ್ತಿಸುತ್ತಿದೆ, ಅದರ ವಿಕೇಂದ್ರೀಕೃತ ಸ್ವರೂಪವನ್ನು ಬದಲಾಯಿಸುತ್ತಿದೆ. ಈ ಹಿಂದೆ ಆಸ್ತಿಗಳನ್ನು ಸೃಷ್ಟಿಸಲು ಗ್ರಾಮ ಸಭೆಗಳಲ್ಲಿ ಕಾಮಗಾರಿಗಳನ್ನು ನಿರ್ಧರಿಸಲಾಗುತ್ತಿತ್ತು.

ಈಗ, ಕೇಂದ್ರವು ಕಾಮಗಾರಿಗಳನ್ನು ಅಂತಿಮಗೊಳಿಸುತ್ತದೆ, ಗುತ್ತಿಗೆದಾರರು ಅವುಗಳನ್ನು ಕಾರ್ಯಗತಗೊಳಿಸುತ್ತಾರೆ. ಇದು ಉದ್ಯೋಗ ಖಾತರಿ ಯೋಜನೆಯಲ್ಲ, ಇದು ಸುಗ್ಗಿಯ ಸಮಯದಲ್ಲಿ ಜನರಿಗೆ 60 ದಿನಗಳವರೆಗೆ ಪ್ರಯೋಜನಗಳನ್ನು ನೀಡುವುದಿಲ್ಲ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಪ್ರತಿಭಟನೆಯಲ್ಲಿ 2000 ಜನ ಸಾವು; ಇದಕ್ಕೆ ಉಗ್ರರು ಕಾರಣ ಎಂದ ಅಧಿಕಾರಿಗಳು

Toxic Teaserನಲ್ಲಿ 'ಟೂ ಮಚ್ ಸೆಕ್ಸ್' ಇದೆಯೇ? CBFCಗೆ ಮತ್ತೊಂದು ದೂರು!

ಮೈಸೂರಿನಲ್ಲಿ ರಾಹುಲ್ ಗಾಂಧಿ ಜತೆ ಸಿದ್ದರಾಮಯ್ಯ, ಡಿಕೆಸಿ ಮಹತ್ವದ ಚರ್ಚೆ; ಬಳಿಕ ಸಿಎಂ ಹೇಳಿದ್ದೇನು? Video

IPL 2026: RCB ತವರು ಮೈದಾನ ಕೊನೆಗೂ ಬಹುತೇಕ ಫಿಕ್ಸ್, ಈ ಎರಡು ಮೈದಾನಗಳಲ್ಲೇ ಪಂದ್ಯ!

'BJP feast' ನಲ್ಲಿ ಲಾಲು ಹಿರಿಯ ಪುತ್ರ! NDA ಸೇರ್ತಾರಾ?Video

SCROLL FOR NEXT