ಪ್ರತಿಭಟನೆಯಲ್ಲಿ ಬಿಜೆಪಿ ನಾಯಕರು 
ರಾಜ್ಯ

'ಫೈರಿಂಗ್ ಘಟನೆ' ಸಿಬಿಐ ತನಿಖೆಗೆ ಆಗ್ರಹ: ಬಳ್ಳಾರಿಯಲ್ಲಿ ಬಿಜೆಪಿ ಬಲಪ್ರದರ್ಶನ, ಬೃಹತ್ ಪ್ರತಿಭಟನೆ!

ಪೊಲೀಸರೂ ನ್ಯಾಯ ಒದಗಿಸಲು ವಿಫಲರಾಗಿದ್ದಾರೆ. ಬಳ್ಳಾರಿಯಲ್ಲಿ ಅಭಿವೃದ್ಧಿ ಇಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದರು.

ಬಳ್ಳಾರಿ: ಜ.1 ರಂದು ಬಳ್ಳಾರಿಯಲ್ಲಿನ ಶಾಸಕ ಜನಾರ್ಧನರೆಡ್ಡಿ ಮನೆ ಬಳಿ ನಡೆದ ಫೈರಿಂಗ್ ಘಟನೆಯನ್ನು ಸಿಬಿಐ ತನಿಖೆಗೆ ವಹಿಸಬೇಕು ಹಾಗೂ ಶಾಸಕ ಭರತ್ ರೆಡ್ಡಿ ಮತ್ತವರ ಆಪ್ತ ಸತೀಶ್ ರೆಡ್ಡಿ ಬಂಧಿಸಬೇಕು ಎಂದು ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ ಬಳ್ಳಾರಿಯಲ್ಲಿಂದು ಬೃಹತ್ ಪ್ರತಿಭಟನಾ ಸಮಾವೇಶ ಆಯೋಜಿಸುವ ಮೂಲಕ ಬಲ ಪ್ರದರ್ಶನ ನಡೆಸಿತು.

ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬಿಜೆಪಿ ಸರ್ಕಾರ ಇದ್ದಾಗಲೇ ವಾಲ್ಮೀಕಿ ಜಯಂತಿಗೆ ರಜೆ ಘೋಷಣೆ ಮಾಡಿದ್ದು. ವಾಲ್ಮೀಕಿ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು, ಮೀಸಲಾತಿ ಹೆಚ್ಚಳ ಮಾಡಿದ್ದು ಕೂಡಾ ಬಿಜೆಪಿ. ಮುಖ್ಯ ಮಂತ್ರಿ ಸಿದ್ದರಾಮಯ್ಯನವರೇ ವಾಲ್ಮೀಕಿ ಸಮುದಾಯಕ್ಕೆ ನಿಮ್ಮ ಸರ್ಕಾರದ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗದ ವಿರೋಧಿಯಾಗಿದೆ. ರಾಜ್ಯದಲ್ಲಿನ ಪೊಲೀಸ್ ವ್ಯವಸ್ಥ ಕುಸಿದಿದೆ. ಠಾಣೆಗಳು ಕಾಂಗ್ರೆಸ್ ಪಕ್ಷದ ಕಚೇರಿಗಳಾಗಿವೆ ಎಂದು ಆರೋಪಿಸಿದ ವಿಜಯೇಂದ್ರ, ಬಳ್ಳಾರಿ ಘಟನೆ ಖಂಡಿಸಿ ಶ್ರೀ ರಾಮುಲು ಮತ್ತು ಜನಾರ್ಧನರೆಡ್ಡಿ ಅವರು ಬಳ್ಳಾರಿಯಿಂದ ಬೆಂಗಳೂರಿಗೆಪಾದಯಾತ್ರೆ ಮಾಡಲು ಬಯಸಿದ್ದಾರೆ. ಈ ವಿಷಯವನ್ನು ಕೇಂದ್ರದ ನಾಯಕರಿಗೆ ತಿಳಿಸಿ ಮುಂದಿನ ದಿನದಲ್ಲಿ ಈ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ರಾಜ್ಯದಲ್ಲಿ ಗೃಹ ಇಲಾಖೆ ಸಚಿವರು ಕೇವಲ ವಿಧಾನ ಸಭೆಯಲ್ಲಿ ಉತ್ತರ ನೀಡಲು ಮಾತ್ರ ಇದ್ದಾರೆ. ಅವರಿಂದ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಗುಂಡು ಹಾರಿಸಿದ್ದು ಕಾಂಗ್ರೆಸ್ ನವರೆಂದು ಅವರ ಕಡೆಯವರ ಬಂಧನ ಇಲ್ಲ. ಅದೇನಾದ್ರೂ ಬಿಜೆಪಿಯವರ ಕಡೆಯಿಂದ ಆಗಿದ್ದರೆ ಈ ವೇಳೆಗೆ ನೂರಾರು ಜನರ ಬಂಧನವಾಗುತ್ತಿತ್ತು. ಕಾಂಗ್ರೆಸ್ ನಿಂದ ನಮಗ ನ್ಯಾಯದ ನಿರೀಕ್ಷೆ ಇಲ್ಲ. ಪೊಲೀಸರೂ ನ್ಯಾಯ ಒದಗಿಸಲು ವಿಫಲರಾಗಿದ್ದಾರೆ. ಬಳ್ಳಾರಿಯಲ್ಲಿ ಅಭಿವೃದ್ಧಿ ಇಲ್ಲ. ಬಳ್ಳಾರಿಯನ್ನೇ ಸುಡುತ್ತೇನೆ ಎಂದ ಶಾಸಕನಿಗೆ ಡಿಸಿಎಂ ಡಿಕೆಶಿ ಪೂರ್ತಿ ಬೆಂಬಲ ಎನ್ನುತ್ತಾರೆ. ಇಂತಹವರಿಗೆ ಸರಿಯಾದ ಬುದ್ದಿ ಕಲಿಸಿ ಎಂದರು.

ವಿಧಾನ ಪರಿಷತ್ ಪ್ರತಿ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ ಈ ಸರ್ಕಾರ ಗೂಂಡಾವರ್ತನೆಯಿಂದ ಕೂಡಿದೆ. ಇದರ ಮುಖವಾಡ ಜನತೆ ಮುಂದೆ ಕಳಚಲಿದೆ. ಬಳ್ಳಾರಿ ಸೇರಿದಂತೆ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ತನ್ನ ತಪ್ಪು ತಿಳಿದುಕೊಳ್ಳದೆ ಸರ್ಕಾರ ದುಂಡಾವರ್ತೆನೆ ಮಾಡುತ್ತಿದೆ. ವಾಲ್ಮೀಕಿ ಹೆಸರಲ್ಲಿ ಗಲಾಟೆ ಏಕೆ, ಈ ವಿಷಯದಲ್ಲಿ ಜನಾರ್ಧನರೆಡ್ಡಿ ಕೊಲೆ ಸಂಚು ಮಾಡಿದ್ದು ಏಕೆ ಎಂದು ಪ್ರಶ್ನಿಸಿದರು‌.

ಸಂಸದ ಬಸವರಾಜ್ ಬೊಮ್ಮಾಯಿ ಮಾತನಾಡಿ, ಬಳ್ಳಾರಿಯಲ್ಲಿ ರಾಮುಲು ವೇಗ ಮತ್ತು ಜನಾರ್ಧನರೆಡ್ಡಿ ರೆಡ್ಡಿ ಶಕ್ತಿ ಒಂದಾಗಿರುವುದನ್ನು ಸಹಿಸದೇ ಫೈರಿಂಗ್ ಗಲಾಟೆ ನಡೆದಿದೆ. ರಾಜ್ಯದಲ್ಲಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೂ ಭದ್ರತೆ ಇಲ್ಲದಂತಾಗಿದೆ. ಕಾರ್ಯಕರ್ತರೇ ಕಾಂಗ್ರೆಸ್ ವಿರುದ್ದ ನಾವು ಸಡ್ಡು ಹೊಡೆದು ಸಂಘರ್ಷಕ್ಕೆ ಇಳಿಯಬೇಕಿದೆ ಎಂದು ಕರೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮದ್ಯಕ್ಕೆ ಲೈಸನ್ಸ್: 25 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಅಬಕಾರಿ ಡಿಸಿ!

ನನ್ನ ದುಡಿಮೆ ತಿಂದು ಬದುಕುತ್ತಿದ್ದನು: ಗಂಡನ ತ್ಯಾಗ ಮರೆತ ಬಾಕ್ಸರ್ ಮೇರಿ ಕೋಮ್ ವಿರುದ್ಧ ನೆಟ್ಟಿಗರ ಆಕ್ರೋಶ!

ಚುನಾವಣೆಗಳು ಬರುತ್ತವೆ ಹೋಗುತ್ತವೆ, ಆದರೆ...: BMC ಸೋಲಿನ ಬಗ್ಗೆ ರಾಜ್ ಠಾಕ್ರೆ

ನಮ್ಮ ಮೆಟ್ರೋ: ದೈನಂದಿನ ಪಾಸ್ 'ಬೇಡ್ವೆ ಬೇಡ', ಮಾಸಿಕ ಪಾಸ್' ಬೇಕು: ಹೆಚ್ಚಾದ ಬೇಡಿಕೆ!

ಮಹಾರಾಷ್ಟ್ರ ಪೊಲೀಸ್ ಮೈಸೂರಿನ ಡ್ರಗ್ಸ್ ಫ್ಯಾಕ್ಟರಿ ಭೇದಿಸುತ್ತಾರೆ, ನೀವೇನು ಮಾಡ್ತಿದ್ದೀರಿ: ಕರ್ನಾಟಕ ಪೊಲೀಸರಿಗೆ ಸಿದ್ದರಾಮಯ್ಯ ಪ್ರಶ್ನೆ

SCROLL FOR NEXT