ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು. 
ರಾಜ್ಯ

ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಕಬಳಿಕೆ ಪ್ರಕರಣ: 6 ಮಂದಿ ಅಧಿಕಾರಿಗಳು ಅಮಾನತು

ಶೋಧನೆ ಮಾಡಿದ ನಂತರ 11 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು. ಲೋಕಾಯುಕ್ತ ಅಧಿಕಾರಿಗಳು ತಾಲ್ಲೂಕು ಕಚೇರಿ, ಆರೋಪಿಗಳ ಮನೆಗಳು ಸೇರಿದಂತೆ ಏಳು ಕಡೆಗಳಲ್ಲಿ ಮಂಗಳವಾರ ಏಕಕಾಲದಲ್ಲಿ ದಾಳಿ ನಡೆಸಿದ್ದರು.

ನಾಗಮಂಗಲ: ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನಲ್ಲಿ 200 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಸುಮಾರು 300 ಎಕರೆ ಸರ್ಕಾರಿ ಭೂಮಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ಮಂಜೂರು ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಆರು ಮಂದಿ ಸರ್ಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ನಾಗಮಂಗಲ ತಹಸಿಲ್ದಾರ್ ಮತ್ತು ಇತರರ ವಿರುದ್ಧ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡು ಶೋಧನಾ ವಾರೆಂಟ್ ಹೊರಡಿಸಿ, ತನಿಖೆಗೆ ಆದೇಶ ನೀಡಿದ್ದರು.

ಶೋಧನೆ ಮಾಡಿದ ನಂತರ 11 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು. ಲೋಕಾಯುಕ್ತ ಅಧಿಕಾರಿಗಳು ತಾಲ್ಲೂಕು ಕಚೇರಿ, ಆರೋಪಿಗಳ ಮನೆಗಳು ಸೇರಿದಂತೆ ಏಳು ಕಡೆಗಳಲ್ಲಿ ಮಂಗಳವಾರ ಏಕಕಾಲದಲ್ಲಿ ದಾಳಿ ನಡೆಸಿದ್ದರು.

ದರಖಾಸ್ತು ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸತೀಶ್, ಭೂ ದಾಖಲೆಗಳ ವಿಭಾಗದ ದ್ವಿತೀಯ ದರ್ಜೆ ಸಹಾಯಕ ಯೋಗೇಶ್, ಹಾಗೂ ಕಾಂತಾಪುರ ವೃತ್ತದ ಗ್ರಾಮ ಸಹಾಯಕ ಎಸ್.ಯೋಗೇಶ್, ಶಿರಸ್ತೇದಾರ್ ಉಮೇಶ್, ಎಂಬ ಸರ್ಕಾರಿ ನೌಕರರ ಜೊತೆಗೆ ಯಶವಂತ್, ಚಿನ್ನಸ್ವಾಮಿ, ವಿಜಯಕುಮಾರ್, ನಾಗಮಂಗಲ ಪಟ್ಟಣವಾಸಿ ವಸೀಂ ಉಲ್ಲಾಖಾನ್ ಬಿನ್ ಕಲೀಂಉಲ್ಲಾ ಎಂಬ ಖಾಸಗಿ ವ್ಯಕ್ತಿ ಸೇರಿ ನಾಲ್ವರು ಆರೋಪಿಗಳ ವಿರುದ್ಧ ಭಾರತೀಯ ನಾಗರಿಕ ಸಂಹಿತೆ ಕಲಂ 61 (2), 318(4), 334, 336(3), 340(2), 303(2), 316(5)ರ ಅಡಿಯಲ್ಲಿ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಎಲ್ಲರನ್ನೂ ಬಂಧಿಸಲಾಗಿದೆ. ಜೆಎಂಎಫ್‌ಸಿ ನ್ಯಾಯಾಲಯವು ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೊಳಪಡಿಸಿದೆ.

ಪ್ರಕರಣ ಬೆನ್ನಲ್ಲೇ ಇದೀಗ ದರಖಾಸ್ತು ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸತೀಶ್, ಭೂ ದಾಖಲೆಗಳ ವಿಭಾಗದ ದ್ವಿತೀಯ ದರ್ಜೆ ಸಹಾಯಕರಾದ ಯೋಗೇಶ್, ಗುರುಮೂರ್ತಿ, ವಿಜಯಕುಮಾರ್ ಅವರುಗಳನ್ನು ಜಿಲ್ಲಾಧಿಕಾರಿ ಅಮಾನತುಗೊಳಿಸಲಾಗಿದ್ದು, ದೇವಲಾಪುರ ನಾಡ ಕಛೇರಿ ಉಪ ತಹಸಿಲ್ದಾರ್ ರವಿಶಂಕರ್, ರೆಕಾರ್ಡ್ ರೂಂ ಶಿರಸ್ತೆದಾರ್ ಹೆಚ್.ಎಸ್.ಉಮೇಶ್ ಅವರನ್ನು ಪ್ರಾದೇಶಿಕ ಆಯುಕ್ತರು ಅಮಾನತುಗೊಳಿಸಿದ್ದಾರೆ. ಇವರ ವಿರುದ್ಧ ಶಿಸ್ತು ಕ್ರಮಕ್ಕಾಗಿ ಪ್ರಾದೇಶಿಕ ಆಯುಕ್ತರಿಗೆ ಜಿಲ್ಲಾಧಿಕಾರಿ ಪ್ರಸ್ತಾವನೆ ಸಲ್ಲಿಸಿದ್ದರು.

ಕಾಂತಾಪುರ ಗ್ರಾಮ ಸಹಾಯಕ ಎಸ್.ಯೋಗೇಶ್‌ನನ್ನು ತಾತ್ಕಾಲಿಕವಾಗಿ ಮತ್ತು ಮುಂದಿನ ಆದೇಶದವರೆಗೆ ಗ್ರಾಮ ಸಹಾಯಕ ಹುದ್ದೆಯ ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದು, ಸರ್ಕಾರಿ ದಾಖಲೆಗಳನ್ನು ಸಂರಕ್ಷಿಸಬೇಕಾದ ನಾಗಮಂಗಲ ತಾಲ್ಲೂಕು ತಹಸಿಲ್ದಾರ್, ಅಧೀನ ಸಿಬ್ಬಂದಿಗೆ ಅಕ್ರಮವಾಗಿ ದಾಖಲೆಗಳನ್ನು ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಿ ಕರ್ತವ್ಯ ಲೋಪವೆಸಗಿರುವ ಹಿನ್ನಲೆಯಲ್ಲಿ ತಹಸಿಲ್ದಾರ್ ಅವರಿಗೆ ಕಾರಣ ಕೇಳಿ ಜಿಲ್ಲಾಧಿಕಾರಿಗಳು ನೋಟಿಸ್ ಜಾರಿಗೊಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮತ್ತೊಂದು ದೇಶದ ಮೇಲೆ Donald Trump ಕಣ್ಣು: ಸುಂಕದ ಬರೆಗೆ ತಿರುಗೇಟು ಕೊಟ್ಟ ಯೂರೋಪಿಯನ್ ಒಕ್ಕೂಟ!

ಗೋಲ್ಡನ್ ಟೆಂಪಲ್‌ನ ಕೊಳದಲ್ಲಿ ಕೈ, ಕಾಲು ತೊಳೆದು ಬಾಯಿ ಮುಕ್ಕಳಿಸಿ ಅಪವಿತ್ರಗೊಳಿಸಿದ Muslim ವ್ಯಕ್ತಿ, Video!

Guillain-Barré Syndrome ಗೆ ಮಧ್ಯಪ್ರದೇಶದಲ್ಲಿ 2 ಸಾವು! ಏನಿದು ಸೋಂಕು? ಹೇಗೆ ಹರಡುತ್ತದೆ?

'ಬಾಳೆಹಣ್ಣು' ವಿಚಾರವಾಗಿ ಜಗಳ: ಬಾಂಗ್ಲಾದೇಶದಲ್ಲಿ ಮತ್ತೋರ್ವ ಹಿಂದೂ ಉದ್ಯಮಿಗೆ ಹೊಡೆದು ಕೊಲೆ, ಮೂವರ ಬಂಧನ!

ಮೊಟ್ಟೆಯಿಡುವ ಸಮಯ! ಆಲಿವ್ ರಿಡ್ಲಿಗಳ ಆತಿಥ್ಯಕ್ಕೆ ಸಿದ್ಧವಾದ ಕುಂದಾಪುರ!

SCROLL FOR NEXT