ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಶೀಘ್ರದಲ್ಲೇ ಜಾಮೀನು ದೊರೆಯಲಿದೆ.. ಮಾತ್ರವಲ್ಲದೇ ಈ ಪ್ರಕರಣದಿಂದ ಇನ್ನು ಕೆಲವೇ ವರ್ಷಗಳಲ್ಲಿ ದರ್ಶನ್ ಖುಲಾಸೆಯಾಗಲಿದ್ದಾರೆ ಎಂದು ಹೇಳಲಾಗಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಅವರ ಗ್ಯಾಂಗ್ ಅನ್ನು ಬೆಂಬಿಡದೆ ಕಾಡುತ್ತಿದ್ದು, ಸದ್ಯಕ್ಕೆ ಈ ಕೇಸ್ ಮುಗಿಯುವಂತೆ ಕಾಣಿಸುತ್ತಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್, ಪವಿತ್ರಾ ಗೌಡ ಜಮೀನು ಕ್ಯಾನ್ಸಲ್ ಆಗುತ್ತಿದ್ದಂತೆ ಈ ಪ್ರಕರಣ ಮತ್ತಷ್ಟು ಬಿಗಿಯಾಗುತ್ತಿದೆ.
ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರೂ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದರೆ. ಜಾಮೀನು ರದ್ದಾಗಿ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರುವಂತಾಗಿದೆ.
ಕಾನೂನು ತಜ್ಞರ ಪ್ರಕಾರ ಇನ್ನು ಆರು ತಿಂಗಳು ಈ ಜೈಲಿನಲ್ಲಿಯೇ ಇರಬೇಕಾಗಬಹುದು. ಅಲ್ಲದೇ, ವಿಚಾರಣೆ ಮುಗಿಯುವವರೆಗೂ ಜಾಮೀನು ಸಿಗುವುದು ಅನುಮಾನ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಹೀಗಾಗಿ ರೇಣುಕಾಸ್ವಾಮಿ ಕೇಸ್ ದರ್ಶನ್ ಹಾಗೂ ಅವರ ಗ್ಯಾಂಗ್‌ಗೆ ಮುಳುವಾಗಿದೆ ಅನ್ನೋದು ಅಕ್ಷರಶ: ಸತ್ಯ.
ದರ್ಶನ್ ಗೆ ಶೀಘ್ರ ಜಾಮೀನು
ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ನಟ ದರ್ಶನ್ ಗೆ ಶೀಘ್ರದಲ್ಲೇ ಜಾಮೀನು ದೊರೆಯಲಿದೆ ಎಂದು ಜ್ಯೋತಿಷಿಯೊಬ್ಬರು ಹೇಳಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಶಾಂತ್ ಎಂಬುವವರು, ತಮ್ಮ AstroPrashanth9 ಎಂಬ ಎಕ್ಸ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದಾರೆ.
ಜ್ಯೋತಿಷಿ ಪ್ರಶಾಂತ್ ಅವರ ಪ್ರಕಾರ, ಇದೇ ಜೂನ್ 2026ರಲ್ಲಿ ನಟ ದರ್ಶನ್ ಗೆ ಜಾಮೀನು ದೊರೆಯಲಿದ್ದು, ಬಳಿಕ 2029ರಲ್ಲಿ ಅವರು ಈ ಪ್ರಕರಣದಿಂದಲೇ ಖುಲಾಸೆಯಾಗಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು ದರ್ಶನ್ ಅಭಿಮಾನಿಗಳು ಇದು ನಿಜವಾಗಲೆಂದು ಹಾರೈಸುತ್ತಿದ್ದಾರೆ.