ಬೆಂಗಳೂರು: ಬೆಂಗಳೂರಿನ ಜನದಟ್ಟಣೆಯ ನಡುವೆ ದಿನನಿತ್ಯ ಸಂಚರಿಸುವ ವಾಹನ ಸವಾರರ ಜೇಬಿಗೆ ಇನ್ಮುಂದೆ ಹೊರೆಹೆಚ್ಚಾಗಲಿದ್ದು, ನಗರದ ಪ್ರಮುಖ ಜುಲೈ.1ರಿಂದಲೇ ಟೋಲ್ ದರ ಹೆಚ್ಚಳವಾಗಲಿದ್ದು, ಇದು ಬೈಕ್ ಸವಾರರಿಗೂ ಇದರ ಬಿಸಿ ತಟ್ಟಲಿದೆ.
ಹೊಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆಗೆ ಸಂಚರಿಸುವ ಕಾರುಗಳ ಟೋಲ್ ಶುಲ್ಕವನ್ನು 65 ರೂ.ನಿಂದ 72 ರೂ.ಗೆ ಹೆಚ್ಚಿಸಲಾಗಿದೆ. ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆ ನಡುವೆ ಟೋಲ್ ಶುಲ್ಕವನ್ನು 70 ರೂ.ನಿಂದ 77 ರೂ.ಗೆ ಹೆಚ್ಚಿಸಲಾಗಿದೆ.
ಪ್ರಯಾಣದ ದೂರವನ್ನು ಅವಲಂಬಿಸಿ, ಪ್ರತ್ಯೇಕ ವಿಭಾಗಗಳಲ್ಲಿ ಕಾರುಗಳಿಗೆ ಟೋಲ್ 3 ರಿಂದ 8 ರೂ.ಗಳಷ್ಟು ಹೆಚ್ಚಾಗಿದೆ. ಬಸ್‌ಗಳ ಟೋಲ್ ಕೂಡ ಹೆಚ್ಚಿಸಿರುವುದರಿಂದ, ಬಿಎಂಟಿಸಿ ಹೆಚ್ಚುವರಿ ವೆಚ್ಚವನ್ನು ಪ್ರಯಾಣಿಕರಿಗೆ ಹೊರಿಸುವ ಸಾಧ್ಯತೆ ಇದೆ.
ಹೊಸೂರು ರಸ್ತೆ-ಬನ್ನೇರುಘಟ್ಟ ರಸ್ತೆ ಟೋಲ್ 65 ರಿಂದ 72 ಕ್ಕೆ ಏರಿಕೆ ಮಾಡಲಾಗಿದೆ. ದ್ವಿಚಕ್ರ ವಾಹನ ಸವಾರರಿಗೆ ಇದೇ ಮಾರ್ಗದ ಟೋಲ್ ಶುಲ್ಕ 30 ರಿಂದ 33 ರೂ.ಗೆ ಹೆಚ್ಚಿಸಲಾಗಿದೆ. ಬನ್ನೇರುಘಟ್ಟ ರಸ್ತೆಯಿಂದ ಕನಕಪುರ ರಸ್ತೆಗೆ 15 ರಿಂದ 17 ಕ್ಕೆ ಏರಿಕೆ ಮಾಡಲಾಗಿದೆ. ಹೊಸೂರು ರಸ್ತೆ-ಬನ್ನೇರುಘಟ್ಟ ರಸ್ತೆ ಬಸ್‌ಗಳ ಟೋಲ್ ಶುಲ್ಕ 195 ರಿಂದ 215 ರೂ. ಕ್ಕೆ ಹೆಚ್ಚಳ ಮಾಡಲಾಗಿದೆ. ಟ್ರಕ್‌ಗಳಿಗೆ, 128 ರಿಂದ 141 ರೂ. ಏರಿಕೆ ಮಾಡಲಾಗಿದೆ.