ಪ್ರಾತಿನಿಧಿಕ ಚಿತ್ರ 
ರಾಜ್ಯ

ಬೆಂಗಳೂರು: ಇಸ್ರೋ ಪ್ರಧಾನ ಕಚೇರಿಗೆ ಬಾಂಬ್ ಬೆದರಿಕೆ; ಕಟ್ಟಡದ ಸಂಪೂರ್ಣ ಶೋಧ ನಡೆಸಿದ ಪೊಲೀಸರು!

ಪೊಲೀಸರ ಪ್ರಕಾರ, ಕಟ್ಟಡದ ಸಂಪೂರ್ಣ ಶೋಧ ನಡೆಸಲು ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಸಿಬ್ಬಂದಿಯನ್ನು ಸ್ಥಳಾಂತರಿಸಲಾಯಿತು.

ಬೆಂಗಳೂರು: ಇಲ್ಲಿನ ಇಸ್ರೋ (ISRO) ಪ್ರಧಾನ ಕಚೇರಿಗೆ ಗುರುವಾರ ಬಾಂಬ್ ಬೆದರಿಕೆಯ ಇಮೇಲ್‌ ಕಳುಹಿಸಲಾಗಿದ್ದು, ವ್ಯಾಪಕ ಶೋಧ ಕಾರ್ಯಾಚರಣೆ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಬೆದರಿಕೆ ಸಂದೇಶ ಬಂದ ಕೂಡಲೇ ಪೊಲೀಸ್ ಸಿಬ್ಬಂದಿ, ಶ್ವಾನ ದಳ ಹಾಗೂ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ (BDDS) ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಯಲಾಯಿತು ಎಂದು ಅವರು ಹೇಳಿದರು.

ಪೊಲೀಸರ ಪ್ರಕಾರ, ಕಟ್ಟಡದ ಸಂಪೂರ್ಣ ಶೋಧ ನಡೆಸಲು ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಸಿಬ್ಬಂದಿಯನ್ನು ಸ್ಥಳಾಂತರಿಸಲಾಯಿತು.

ಕಾರ್ಯಾಚರಣೆಯ ಸಮಯದಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ ಮತ್ತು ನಂತರ ಅದು ಹುಸಿ ಬಾಂಬ್ ಬೆದರಿಕೆ ಎಂದು ಘೋಷಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂಜಯನಗರ ಪೊಲೀಸ್ ಠಾಣೆಯು ಇಮೇಲ್‌ನ ಮೂಲ ಮತ್ತು ಇತರ ವಿವರಗಳನ್ನು ಪರಿಶೀಲಿಸುತ್ತಿದೆ. ಸದ್ಯ ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಆಳಂದ ಗಲಭೆ ಪ್ರಕರಣ ಸೇರಿ 52 ಕ್ರಿಮಿನಲ್ ಪ್ರಕರಣಗಳ ಹಿಂಪಡೆಯುವ ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ಹೈಕೋರ್ಟ್ ತಡೆ

ಇದೆಲ್ಲದರಿಂದ ನನ್ನನ್ನು ದೂರವಿಡಿ: CJP ಪ್ರತಿಭಟನೆ ಕುರಿತು ದಿಲ್ಜಿತ್ ದೋಸಾಂಜ್ ಖಡಕ್ ಮಾತು

ಬಿಜೆಪಿಯಲ್ಲಿ ಮುಂದುವರಿದ ಉಚ್ಚಾಟನೆ ಪರ್ವ; ಸತೀಶ್​​ಗೆ ಶಾಕ್; ಪಕ್ಷದಿಂದ 6 ವರ್ಷ ಅಮಾನತು

ಭಗವಾನ್ ರಾಮನನ್ನೇ 'ಲೂಟಿ' ಮಾಡಿದ 'ಫಾರ್ಜಿ ಹಿಂದೂಗಳು': BJP, VHP, ಬಜರಂಗ ದಳವನ್ನು ಟೀಕಿಸಿದ ಕಪಿಲ್ ಸಿಬಲ್

ದೇಹದಲ್ಲಿ ಒಂದೇ ಒಂದು ಅಂಗ ಇಲ್ಲ; ಮೆದುಳು, ಹೃದಯ, ಶ್ವಾಸಕೋಶವೇ ನಾಪತ್ತೆ: ಮೃತ ಭಾರತೀಯ ನಾವಿಕನ ಪತ್ನಿ