ಆರ್ ಅಶೋಕ್, ಡಿ ಕೆ ಶಿವಕುಮಾರ್ (ಸಂಗ್ರಹ ಚಿತ್ರ) 
ರಾಜ್ಯ

'ಡಿಕೆಶಿ CM ಆದ ಕಾಲ್ಗುಣವೋ ಏನೋ ರಾಜ್ಯದಲ್ಲಿ ಬರಗಾಲ ಬಂದಿದೆ; ಬೆಳೆ ಬೆಳೆಯಬೇಡಿ ಎಂದು ಧೈರ್ಯ ಇದ್ದರೆ ತಮಿಳುನಾಡಿನಲ್ಲಿ ಹೇಳಲಿ': R ಅಶೋಕ್

ರೈತರಿಗೆ ಬೆಳೆ ಬೆಳೆಯಬೇಡಿ ಅಂತೀಯಾ ಆದರೆ ಬೆಳೆಗೆ ಪರಿಹಾರ ಏನು ಕೊಡ್ತೀಯಾ ಎಂದು ಸುದ್ದಿಗೋಷ್ಠಿಯಲ್ಲಿ ಸಿಂ ಡಿ ಕೆ ಶಿವಕುಮಾರ್ ಅವರನ್ನು ಏಕವಚನದಲ್ಲಿಯೇ ಆರ್ ಅಶೋಕ್ ಪ್ರಶ್ನೆ ಮಾಡಿದರು.

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ರೈತರಿಗೆ ಕೈಕೊಟ್ಟಿದೆ. ಅನೇಕ ಕಡೆ ಬರಗಾಲ ಉಂಟಾಗಿದೆ. ಇದಕ್ಕೆ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಕಾಲ್ಗುಣ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಟೀಕಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಅಧಿಕಾರಕ್ಕೆ ಬಂದು 1 ತಿಂಗಳು ಆಗಿದೆ ಆಡಳಿತದಲ್ಲಿ ಏನು ಬದಲಾವಣೆ ಆಗಿದೆ? ಅದೇ ಭ್ರಷ್ಟಾಚಾರ ಹಳೇ ಬಾಟಲಿ ಹೊಸ ಮದ್ಯ ತರ ಆಗಿದೆ. ಡಿಕೆ ಶಿವಕುಮಾರ್ ಅಧಿಕಾರಕ್ಕೇರಿದ ಕಾಲ್ಗುಣನೇ ಏನೋ ಅವರು ಅಧಿಕಾರಕ್ಕೆ ಬಂದ ಕೂಡಲೇ ರಾಜ್ಯದಲ್ಲಿ ಬರಗಾಲ ಬಂದಿದೆ. ರೈತರಿಗೆ ಬೆಳೆಗಳನ್ನು ಬೆಳೆಯಬೇಡಿ ಅಂತೀರಿ… ನಿನಗೆ ಧೈರ್ಯ ಇದ್ದರೆ ತಮಿಳುನಾಡಿನಲ್ಲಿ ಹೇಳು ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಮೇಕೆದಾಟು ಮಾಡೋಕೆ ಬಿಡಲ್ಲ ಎಂದು ತಮಿಳುನಾಡು ಸಿಎಂ ವಿಜಯ್ ಹೇಳ್ತಿದ್ದಾರೆ. ನಮ್ಮ ಸಿಎಂ ಅಧಿಕಾರಕ್ಕೆ ಬಂದು ತಿಂಗಳು ಆಯ್ತು.. ಏನಾದರೂ ಅದಕ್ಕೆ ಪ್ರತಿಯಾಗಿ ಒಂದು ನಿರ್ಣಯ ಮಾಡಿದ್ರಾ? ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಬಿಡ್ತಿದ್ದಾರೆ. ನೀರಾವರಿ ಸಚಿವರು ಬೆಂಗಳೂರು ಬಿಟ್ಟು ಆಚೆ ಹೋಗಲ್ಲ ಎಂದಿದ್ದಾರೆ.

ತುಂಗಭದ್ರಾ ಜಲಾಶಯ ಕ್ರಸ್ಟ್‌ಗೇಟ್‌ ಉದ್ಘಾಟನೆಗೆ ಮೂರು ರಾಜ್ಯದ ಮುಖ್ಯಮಂತ್ರಿಗಳು ಬಂದಿದ್ರು. ಆದರೆ ನಮ್ಮ ನೀರಾವರಿ ಸಚಿವ ರಾಮಲಿಂಗಾರೆಡ್ಡಿ ಕಾರ್ಯಕ್ರಮಕ್ಕೆ ಹೋಗೇ ಇಲ್ಲ. ಹತ್ತೇ ದಿನಗಳಲ್ಲಿ ಪೂರ್ತಿ ಸಚಿವ ಸಂಪುಟ ಅಂದ್ರು.. ಒಂದು ತಿಂಗಳು ಆದರೂ ಸಂಪುಟ ಪೂರ್ಣ ಇಲ್ಲ. ಬೆಳೆ ಬೆಳೆಯಬೇಡಿ ಅಂತೀಯಾ ಆದರೆ ಬೆಳೆಗೆ ಪರಿಹಾರ ಏನು ಕೊಡ್ತೀಯಾ? ಯಾವುದಾದರೂ ಒಬ್ಬ ಮಂತ್ರಿ ಒಂದು ವೀಕ್ಷಣೆಗೆ ಹೋಗಿದ್ದೀರಾ? ಎಂದು ಪ್ರಶ್ನೆ ಮಾಡಿದರು.

ರೈತರಿಗೆ ನೀರಿಲ್ಲ ಬೆಳೆ ಬೆಳಿಬೇಡಿ ಅಂತೀರ ರೈತರಿಗೆ ಗೊತ್ತಿದೆ ನೀರು ಇದ್ದಾಗ ಯಾವ ಬೆಳೆ ಬೆಳೆಯಬೇಕು? ಇಲ್ಲದಾಗ ಯಾವ ಬೆಳೆ ಬೆಳೆಯಬೇಕು? ಎಂಬುದು ಮುಖ್ಯಮಂತ್ರಿ ಅವರಿಗೆ ಯಾರು ಐಡಿಯಾ ಕೊಡ್ತಾರೋ ಗೊತ್ತಿಲ್ಲ. ನೀರು ಇಲ್ಲ ಬೆಳೆ ಬಗ್ಗೆ ಗಮನ ಹರಿಸಿ ಅಂತಿದ್ದಾರೆ. ರೈತರಿಗೆ ಸಲಹೆ ಕೊಡಬೇಕಾ? ಯಾವ ಕಾಲದಲ್ಲಿ ಯಾವ ರೀತಿ ಬೆಳೆ ಬೆಳೆಯಬೇಕು ಅಂತ. ಯುದ್ಧದ ಸಂದರ್ಭದಲ್ಲಿ ಚಿನ್ನ ಖರೀದಿಸೋದು ಕಡಿಮೆ ಮಾಡಿ ಅಂದಿದ್ದಕ್ಕೆ ಏನೇನೋ ಹೇಳಿದ್ರಿ.

ಮೇಕೆದಾಟುಗೆ ಒಂದೇ ಒಂದು ಇಟ್ಟಿಗೆ ಇಡಲು ಬಿಡಲ್ಲ ಅಂತ ಹೇಳ್ತಿದ್ದಾರೆ. ರಾಜ್ಯ ಸರ್ಕಾರವೇ ಜೆಲ್ಲಿ ಕಲ್ಲು ಹಾಕಲ್ಲ. ಸರ್ಕಾರ ಬಜೆಟ್‌ನಲ್ಲಿ ಹಣ ಇಟ್ಟಿಲ್ಲ. ಜಲಾಶಯಗಳಲ್ಲಿ ಮಾತ್ರ ನೀರಿನ ಕೊರತೆ, ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಲಂಚದ ಕೊರತೆ ಇಲ್ಲ. ಮುಖ್ಯಮಂತ್ರಿಗಳು ಡ್ಯಾಮ್ ಅಕ್ಕಪಕ್ಕದ ರೈತರ ಸಭೆ ಕರೆದು ಮಾಹಿತಿ ಆದರೂ ಕೊಡಬಹುದಿತ್ತಲ್ಲ. ಈ ಸರ್ಕಾರಕ್ಕೆ ದಿಕ್ಕುದೆಸೆ ಏನಿಲ್ಲ, ಬರೀ ಫೋಟೋ ಶೂಟ್ ಸರ್ಕಾರ ಎಂದು ಆರೋಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!

ಪಸಿಂದು ಗೋಲ್ಡನ್ ಡಕೌಟ್: ಆಡಿದ 2ನೇ ಪಂದ್ಯದಲ್ಲೇ ಕುಂಬ್ಳೆ ದಾಖಲೆ ಸರಿಗಟ್ಟಿದ Team India ಯುವ ಸ್ಪಿನ್ನರ್ ಮಾನವ್ ಸುತಾರ್!

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್? ತಾಕತ್ ಇದ್ರೆ ಚರ್ಚೆಗೆ ಬನ್ನಿ, ಕುಮಾರಸ್ವಾಮಿ ಸವಾಲು!