ಆರ್ಯವರ್ಧನ್ ಗುರೂಜಿ 
ರಾಜ್ಯ

ಮಹಾಲಕ್ಷ್ಮಿ ಕುರಿತು ವಿವಾದಾತ್ಮಕ ಹೇಳಿಕೆ: Bigg Boss ಮಾಜಿ ಸ್ಪರ್ಧಿ ಆರ್ಯವರ್ಧನ್ ಗುರೂಜಿ ವಿರುದ್ಧ FIR ದಾಖಲು..!

ಮಹಾಲಕ್ಷ್ಮಿ ದೇವಿಯು ಗುದದ್ವಾರದಲ್ಲಿ ನೆಲೆಸಿದ್ದಾಳೆ, ಅದನ್ನು ಪೂಜಿಸಬೇಕು" ಎಂಬ ಅರ್ಥದಲ್ಲಿ ಅವರು ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರು: ಮಹಾಲಕ್ಷ್ಮಿ ಅವಹೇಳನಕಾರಿ ಹೇಳಿಕೆ ನೀಡಿ. ಧರ್ಮಕ್ಕೆ ಧಕ್ಕೆ ತರುವಂತೆ ಮಾತನಾಡಿದ್ದ ಸಂಖ್ಯಾಶಾಸ್ತ್ರಜ್ಞ, ಜ್ಯೋತಿಷಿ ಹಾಗೂ ಕನ್ನಡ ಬಿಗ್ ಬಾಸ್ ಮಾಜಿ ಸ್ಪರ್ಧಿ ಆರ್ಯವರ್ಧನ್ ಅಲಿಯಾಸ್ ಆರ್ಯವರ್ಧನ್ ಗುರೂಜಿ ವಿರುದ್ಧ ಬೆಂಗಳೂರಿನ ಶಂಕರಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಕರ್ನಾಟಕ ಗೋವು ರಕ್ಷಕರ ಸೇನೆಯ ಸಂಸ್ಥಾಪಕ-ಅಧ್ಯಕ್ಷ ಎಸ್.ಜಿ. ಸುಮನ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ, ವಿ.ವಿ.ಪುರಂ ಉಪವಿಭಾಗದ ಶಂಕರಪುರ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ.

ದೂರಿನ ಪ್ರಕಾರ, ಆರ್ಯವರ್ಧನ್ ಗುರೂಜಿ ಖಾಸಗಿ ಸಾಮಾಜಿಕ ಜಾಲತಾಣದ ಸಂದರ್ಶನವೊಂದರಲ್ಲಿ ಮಹಿಳೆಯರು ಹಾಗೂ ಹಿಂದೂ ಧರ್ಮದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಅಶ್ಲೀಲ ಮತ್ತು ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.

ಅಲ್ಲದೆ, "ಮಹಾಲಕ್ಷ್ಮಿ ದೇವಿಯು ಗುದದ್ವಾರದಲ್ಲಿ ನೆಲೆಸಿದ್ದಾಳೆ, ಅದನ್ನು ಪೂಜಿಸಬೇಕು" ಎಂಬ ಅರ್ಥದಲ್ಲಿ ಅವರು ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಹೇಳಿಕೆ ಮಹಿಳೆಯರ ಘನತೆಗೆ ಧಕ್ಕೆ ತರುವುದರ ಜೊತೆಗೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುವ ಹಾಗೂ ಸಮಾಜದಲ್ಲಿ ಧಾರ್ಮಿಕ ವೈಮನಸ್ಸು ಸೃಷ್ಟಿಸುವ ಉದ್ದೇಶ ಹೊಂದಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

ದೂರು ಸ್ವೀಕರಿಸಿದ ಪೊಲೀಸರು ದೂರುದಾರರ ಹೇಳಿಕೆ ದಾಖಲಿಸಿಕೊಂಡು, ಆರ್ಯವರ್ಧನ್ ನೀಡಿರುವುದಾಗಿ ಹೇಳಲಾದ ವಿಡಿಯೊವನ್ನು ಪರಿಶೀಲಿಸಿದ್ದಾರೆ.

ಬಳಿಕ ಸಂಬಂಧಪಟ್ಟ ಕಾನೂನು ತಜ್ಞರಿಂದ ಕಾನೂನು ಅಭಿಪ್ರಾಯ ಪಡೆದು, ದೂರು, ವಿಡಿಯೊ ಸಾಕ್ಷ್ಯ ಮತ್ತು ಕಾನೂನು ಅಭಿಪ್ರಾಯದ ಆಧಾರದ ಮೇಲೆ ಆರ್ಯವರ್ಧನ್ ಗುರೂಜಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆಯನ್ನು ಶಂಕರಪುರ ಪೊಲೀಸರು ಮುಂದುವರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದು ಆಶೀರ್ವಾದದಿಂದ ಸಚಿವರಾಗ್ತಾರಾ ಬಿ.ಕೆ.ಹರಿಪ್ರಸಾದ್? ಸಚಿವ ಸಂಪುಟ ಸೇರ್ಪಡೆಗೆ ಕೆಪಿಸಿಸಿ ಅಧ್ಯಕ್ಷರ ಹೆಸರು ಮುನ್ನೆಲೆಗೆ..!

ರಾಜ್ಯದ ಅಭಿವೃದ್ಧಿಗೆ ಕೈಜೋಡಿಸೋಣ: ಕರ್ನಾಟಕದ ಹಿತಕ್ಕಾಗಿ ಒಟ್ಟಾಗಿ ಕೆಲಸ ಮಾಡೋಣ; ರಾಜ್ಯ ಸರ್ಕಾರಕ್ಕೆ HDK ಮನವಿ

ಅನ್ನಭಾಗ್ಯ ಅಕ್ಕಿಯಿಂದ ಮಂತ್ರಾಕ್ಷತೆ: ರಾಮ ನಮ್ಮ ಬಳಿ ಇಲ್ಲವೇ ; ಸಿಎಂ ಡಿ ಕೆ ಶಿವಕುಮಾರ್

ದೇವಾಲಯಗಳ ಹುಂಡಿ ಮೇಲೆ ತೀವ್ರ ನಿಗಾ; ಕುಡಿಯುವ ನೀರಿಗೆ ಪ್ರತಿ ಕ್ಷೇತ್ರಕ್ಕೆ ತಲಾ ₹1 ಕೋಟಿ: ಸಿಎಂ ಡಿಕೆಶಿ ಹಲವು ಘೋಷಣೆ

ಅಲಿ ಖಮೇನಿ ಅಂತ್ಯಕ್ರಿಯೆಯಲ್ಲಿ ಇರಾನ್‌ನ ಅಧ್ಯಕ್ಷ ಪೆಜೆಶ್ಕಿಯನ್, ವಿದೇಶಾಂಗ ಸಚಿವನ ಮೇಲೆ ವಿದ್ರೋಹಿಗಳಿಂದ ಹಲ್ಲೆಗೆ ಯತ್ನ? Video!