ಕಂಡಕ್ಟರ್‌ ಬ್ಯಾಗ್ ಎಗರಿಸಿ ಸಿಕ್ಕಿಬಿದ್ದ ಮಹಿಳೆ Online Desk
ರಾಜ್ಯ

BMTC ಕಂಡಕ್ಟರ್‌ ಬ್ಯಾಗ್ ಎಗರಿಸಿ ಸಿಕ್ಕಿಬಿದ್ದ ಮಹಿಳೆ; ನಂತರ ಆಕೆ ಮಾಡಿದ್ದೇನು? Video

ಸಾಮಾನ್ಯ ಪ್ರಯಾಣಿಕರಂತೆ ಬಿಎಂಟಿಸಿ ಬಸ್‍‌ನಲ್ಲಿ ಬಂದ ಮಹಿಳೆಯೊಬ್ಬಳು ಕಂಡಕ್ಟರ್‌ನ ಟಿಕೆಟ್ ಹಾಗೂ ಹಣದ ಬ್ಯಾಗನ್ನೇ ಕದ್ದಿರುವ ಆಘಾತಕಾರಿ ಘಟನೆ ವರದಿಯಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಆ ಕುರಿತ ವರದಿ ಇಲ್ಲಿದೆ.

ಬೆಂಗಳೂರು: ರಾಜಧಾನಿಯ ಜೀವನಾಡಿಯಾಗಿರುವ ಬಿಎಂಟಿಸಿ (BMTC) ಬಸ್‍‌ನಲ್ಲಿ ಖದೀಮರು, ಪ್ರಯಾಣಿಕರ ಸೋಗಿನಲ್ಲಿ ಸಂಚರಿಸುತ್ತಾ ಕಳ್ಳತನ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ಇಲ್ಲಿದೆ ನೋಡಿ; ಪ್ರಯಾಣಿಕರಂತೆ ಬಸ್‍‌ನಲ್ಲಿ ಬಂದ ಮಹಿಳೆಯೊಬ್ಬಳು ಕಂಡಕ್ಟರ್‌ನ ಟಿಕೆಟ್ ಹಾಗೂ ಹಣದ ಬ್ಯಾಗನ್ನೇ ಕದ್ದಿರುವ ಆಘಾತಕಾರಿ ಘಟನೆ ವರದಿಯಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಆ ಕುರಿತ ವರದಿ ಇಲ್ಲಿದೆ.

ಏನಿದು ಘಟನೆ?

ಬಿಎಂಟಿಸಿ ಬಸ್‍ ನಂಬರ್ KA-57 F 6331 ನಲ್ಲಿ ಪ್ರಯಾಣಿಕರು ಹೆಚ್ಚಿಗಿದ್ದನ್ನೇ ಲಾಭ ಮಾಡಿಕೊಂಡ ಮಹಿಳೆಯೊಬ್ಬಳು, ಅತ್ಯಂತ ಚಾಣಾಕ್ಷತನದಿಂದ ಕಂಡಕ್ಟರ್ ಅವರ ಡ್ಯೂಟಿ ಬ್ಯಾಗ್‌ ಅನ್ನು ಎಗರಿಸಿದ್ದಾಳೆ. ಇನ್ನು, ಕದ್ದ ಟಿಕೆಟ್‌ ಮತ್ತು ಹಣದ ಬ್ಯಾಗ್‌ ಅನ್ನು ತಾನು ತಂದಿದ್ದ ಬ್ಯಾಗ್‌ನೊಳಗೆ ಯಾರಿಗೂ ತಿಳಿಯದಂತೆ ಅಡಗಿಸಿಟ್ಟುಕೊಂಡಿದ್ದಳು.

ಏತನ್ಮಧ್ಯೆ, ಬ್ಯಾಗ್ ನಾಪತ್ತೆಯಾಗಿರುವುದನ್ನು ಗೊತ್ತಾದ ತಕ್ಷಣವೇ, ಕಂಡಕ್ಟರ್ ಬಸ್‍‌ನ ಡೋರ್ ಕ್ಲೋಸ್ ಮಾಡಿದ್ದಾರೆ. ಇದರಿಂದಾಗಿ ಕಳ್ಳತನ ಮಾಡಿದ ಮಹಿಳೆಗೆ ಬಸ್‍‌ನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ, ತಗ್ಲಾಕೊಂಡ ನಂತರ ಆ ಮಹಿಳೆ, ಅಮಾಯಕಿಯಂತೆ ನಟಿಸಿ, ನಾನು ಕದ್ದಿಲ್ಲ ಎಂದು ಜೋರಾಗಿ ಕಿರುಚಾಡುತ್ತಾ ಭಾರಿ ಹೈಡ್ರಾಮಾ ಸೃಷ್ಟಿಸಿದ್ದಾಳೆ. "ಬ್ಯಾಗ್ ಓಪನ್ ಮಾಡಬೇಡಿ, ಪೊಲೀಸರನ್ನು ಕರೆಯಿರಿ" ಎಂದು ಕೂಗಾಡುತ್ತಾ ತಾನು ಅಮಾಯಕಿ ಎಂಬಂತೆ ನಟಿಸಿದ್ದಾಳೆ.

ಮುಂದುವರೆದು, ಆಕೆಯ ಬ್ಯಾಗ್ ಪರಿಶೀಲಿಸಿದಾಗ ಅದರೊಳಗೆ ಕಂಡಕ್ಟರ್‌ನ ಟಿಕೆಟ್ ಬ್ಯಾಗ್ ಪತ್ತೆಯಾಗಿದೆ. ಇದಾದ ನಂತರ, ಬಸ್‍ ಸಿಬ್ಬಂದಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಕಳ್ಳತನ ಆರೋಪದ ಮೇಲೆ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ಮೂಲಗಳ ಪ್ರಕಾರ ಈ ಮಹಿಳೆ ತಮಿಳುನಾಡು ಮೂಲದವಳೆಂದು ಶಂಕಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಾಧ್ಯಮಗಳಿಗೆ ಪ್ರವೇಶ ನಿರ್ಬಂಧಿಸುವ ಹಕ್ಕು ಯಾವುದೇ ಸರ್ಕಾರಕ್ಕೆ ಇಲ್ಲ: ಟ್ರಂಪ್ ವಿರುದ್ಧ ಒಂದಾದ ಅಮೆರಿಕದ ಮಾಧ್ಯಮಗಳು!

ಸೌಜನ್ಯ ಕೇಸ್‌ ಮರು ತನಿಖೆಗೆ ಸುಪ್ರೀಂ ಆದೇಶ: ಶ್ರೀ ಕ್ಷೇತ್ರ ಧರ್ಮಸ್ಥಳ ಹೇಳಿದ್ದು ಏನು?

ಬೆಳಗಾವಿ: 6 ಮಂದಿ ಸಾವಿನ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್; ವ್ಯಕ್ತಿ ಕೈಯಲ್ಲಿ ಬಕೆಟ್; CCTVಯಲ್ಲಿ ಸಿಕ್ತು ಸ್ಫೋಟಕ ತಿರುವು!

ಏಷ್ಯನ್ ಗೇಮ್ಸ್ 2026: ಎರಡನೇ ದಿನ ನಾಲ್ಕು ಪದಕ ಗೆದ್ದ ಭಾರತ, MMA ಸ್ಪರ್ಧೆಯಲ್ಲಿ ಕಂಚು ಗೆದ್ದು, ಇತಿಹಾಸ ಬರೆದ ಸುಚಿಕಾ ತರಿಯಾಲ್!

ಮಾಗಡಿ: ಚಕ್ರಬಾವಿ ಮರುಳಸಿದ್ದೇಶ್ವರ ಜಂಗಮ ಮಠದ ಸ್ವಾಮೀಜಿ ಲಿಂಗೈಕ್ಯ