ನಂದಿನಿ ತುಪ್ಪ 
ರಾಜ್ಯ

KMF ಹಾಲಿನ ಉತ್ಪನ್ನಗಳ ಬೆಲೆ ಏರಿಕೆ: ನಾಳೆಯಿಂದ ಪರಿಷ್ಕೃತ ದರ ಜಾರಿಗೆ!

ತುಪ್ಪದ ದರವನ್ನು ಪ್ರತಿ ಕೆಜಿಗೆ 15 ರೂಪಾಯಿ ಹೆಚ್ಚಳ ಮಾಡಲಾಗಿದೆ. ಹಾಗೆಯೇ ಬೆಣ್ಣೆಯ ಬೆಲೆಯನ್ನು ಪ್ರತಿ ಕೆಜಿಗೆ 22 ರೂ. ಏರಿಕೆ ಮಾಡಲಾಗಿದೆ. ಈ ನೂತನ ದರಗಳು ಜುಲೈ 24 ರಿಂದ (ಶುಕ್ರವಾರ) ಅಧಿಕೃತವಾಗಿ ಜಾರಿಗೆ ಬರಲಿವೆ

ಬೆಂಗಳೂರು: ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (KMF) ಗ್ರಾಹಕರಿಗೆ ಮತ್ತೊಂದು ಶಾಕ್ ನೀಡಿದೆ. ತನ್ನ ಜನಪ್ರಿಯ 'ನಂದಿನಿ' ಬ್ರ್ಯಾಂಡ್‌ನ ಬೆಣ್ಣೆ ಮತ್ತು ತುಪ್ಪದ ದರವನ್ನು ದಿಢೀರ್ ಏರಿಕೆ ಮಾಡಿದ್ದು, ಪರಿಷ್ಕೃತ ದರಗಳು ನಾಳೆಯಿಂದಲೇ ಜಾರಿಗೆ ಬರಲಿವೆ.

ತುಪ್ಪದ ದರವನ್ನು ಪ್ರತಿ ಕೆಜಿಗೆ 15 ರೂಪಾಯಿ ಹೆಚ್ಚಳ ಮಾಡಲಾಗಿದೆ. ಹಾಗೆಯೇ ಬೆಣ್ಣೆಯ ಬೆಲೆಯನ್ನು ಪ್ರತಿ ಕೆಜಿಗೆ 22 ರೂ. ಏರಿಕೆ ಮಾಡಲಾಗಿದೆ. ಈ ನೂತನ ದರಗಳು ಜುಲೈ 24 ರಿಂದ (ಶುಕ್ರವಾರ) ಅಧಿಕೃತವಾಗಿ ಜಾರಿಗೆ ಬರಲಿವೆ. ರಾಜ್ಯಾದ್ಯಂತ ಇರುವ ಎಲ್ಲಾ ಕೆಎಂಎಫ್ ಮಳಿಗೆಗಳಲ್ಲಿ ಈ ಹೊಸ ದರಗಳು ಅನ್ವಯವಾಗಲಿವೆ ಎಂದು ತಿಳಿದುಬಂದಿದೆ.

ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯು ಕೇವಲ ಗೃಹ ಬಳಕೆದಾರರಿಗೆ ಮಾತ್ರವಲ್ಲದೆ, ಹೋಟೆಲ್ ಮತ್ತು ಬೇಕರಿ ಉದ್ಯಮದ ಮೇಲೂ ದೊಡ್ಡ ಪರಿಣಾಮ ಬೀರಲಿದೆ. ತುಪ್ಪ ಮತ್ತು ಬೆಣ್ಣೆಯನ್ನು ಹೆಚ್ಚಾಗಿ ಬಳಸುವ ಸಿಹಿ ತಿಂಡಿ ತಯಾರಕರು ಹಾಗೂ ಹೋಟೆಲ್ ಮಾಲೀಕರು ಈ ದರ ಏರಿಕೆಯಿಂದ ಕಂಗೆಟ್ಟಿದ್ದಾರೆ.

ಬೆಲೆ ಏರಿಕೆಗೆ ಕೆಎಂಎಫ್ ಸಮರ್ಥನೆ: ಹಾಲು ಒಕ್ಕೂಟಗಳ ನಿರ್ವಹಣಾ ವೆಚ್ಚ, ಪ್ಯಾಕೇಜಿಂಗ್ ಸಾಮಗ್ರಿಗಳ ಬೆಲೆ ಹಾಗೂ ಸಾಗಣೆ ವೆಚ್ಚ ಗಣನೀಯವಾಗಿ ಹೆಚ್ಚಿರುವುದರಿಂದ ದರ ಏರಿಕೆ ಅನಿವಾರ್ಯವಾಗಿದೆ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ.

ಖಾಸಗಿ ಬ್ರ್ಯಾಂಡ್‌ಗಳ ದರಕ್ಕೆ ಹೋಲಿಸಿದರೆ ನಂದಿನಿ ಉತ್ಪನ್ನಗಳ ಬೆಲೆ ಇಂದಿಗೂ ಅತ್ಯಂತ ಸ್ಪರ್ಧಾತ್ಮಕವಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ವರಮಹಾಲಕ್ಷ್ಮಿ ಹಬ್ಬ ಸೇರಿದಂತೆ ಸಾಲು ಸಾಲು ಹಬ್ಬಗಳ ದಿನಗಳು ಹತ್ತಿರವಾಗುತ್ತಿರುವ ಬೆನ್ನಲ್ಲೇ ಈ ದರ ಏರಿಕೆ ಜಾರಿಗೆ ಬಂದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಹೊಸದರಗಳು ಇಂತಿದೆ:

PRODUCT --- QUANTITY -- RATE (in Rs)

Ghee Sachet -- 500ml -- 358

Ghee Sachet -- 1Litre -- 715

Ghee Pet Jar -- 500ml -- 268

GHee Pet Jar -- 1litre -- 735

GHee Tin -- 1Litre -- 750

Butter Blister Pack -- 10grams -- 600

Salter Butter -- 100grams -- 70

Salted Butter -- 500grams -- 310

Unsalted Butter -- 200grams -- 135

Unsalted Butter -- 500grams -- 330

ಕರ್ನಾಟಕ ಸಹಕಾರ ಹಾಲು ಒಕ್ಕೂಟದ ಈ ಹಠಾತ್ ನಿರ್ಧಾರದಿಂದಾಗಿ ಸಾಮಾನ್ಯ ಜನರ ಮಾಸಿಕ ಬಜೆಟ್ ಮೇಲೆ ಹೆಚ್ಚಿನ ಹೊರೆ ಬೀಳಲಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಧರ್ಮೇಂದ್ರ ಪ್ರಧಾನ್ ರನ್ನು ವಜಾ ಮಾಡಿ; ಇಲ್ಲದಿದ್ದರೆ ನಿಮ್ಮ ರಾಜೀನಾಮೆಯನ್ನೂ ಕೇಳುತ್ತೇವೆ': ಪ್ರಧಾನಿ ಮೋದಿಗೆ CJP ಮುಖ್ಯಸ್ಥ Abhijeet Dipke ಒತ್ತಾಯ

ಸೋನಮ್, ಸಹೋದರ ಸಾಕು ನಿಲ್ಲಿಸು; ಪ್ರತಿಭಟನೆ ನಿಲ್ಲಿಸಿ ವಿದ್ಯಾರ್ಥಿಗಳೇ ಮನೆಗೆ ಹೋಗಿ: ಪ್ರಧಾನಿ ನೋಡ್ಕೋಲ್ತಾರೆ; ಸಲ್ಮಾನ್ ಖಾನ್!

KPSC ಪರೀಕ್ಷೆ ಅಕ್ರಮ: 80 ಲಕ್ಷಕ್ಕೆ ಸರ್ಕಾರಿ ಉದ್ಯೋಗ ಫಿಕ್ಸ್; ಎಚ್ಚೆತ್ತ ಕರ್ನಾಟಕ ಗೃಹ ಇಲಾಖೆ!

'ನೀಟ್‌ ಪರೀಕ್ಷಾ ವ್ಯವಸ್ಥೆ ಕುರಿತು ವಿದ್ಯಾರ್ಥಿಗಳ ಆತಂಕ ನಿಜವಾದದ್ದು; ಲಾಠಿ ಚಾರ್ಜ್‌ ನೋವು ತಂದಿದೆ': Murli Manohar Joshi

ವೈಭವ್ ಸೂರ್ಯವಂಶಿ ವಿಶ್ವದಾಖಲೆ: ಸತತ ಮೂರು ಸರಣಿ ಸೋಲಿನ ಬಳಿಕ ಜಿಂಬಾಬ್ವೆ ವಿರುದ್ಧದ T20 ಪಂದ್ಯ ಗೆದ್ದ ಭಾರತ!