ಗೋಕರ್ಣ ಮಹಾಗಣಪತಿ  
ರಾಜ್ಯ

ಗೋಕರ್ಣ ಮಹಾಗಣಪತಿ ಭಕ್ತರಿಗೆ ನಿರ್ಬಂಧ: ಇನ್ನು ಮುಂದೆ ಪೂಜೆ ವೇಳೆ ವಿಗ್ರಹ ಸ್ಪರ್ಶಕ್ಕೆ ನಿಷೇಧ

ದೇವಸ್ಥಾನದ ಅರ್ಚಕರು ಹಾಗೂ ಸಾರ್ವಜನಿಕರ ಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ ಅವರು, ಶಿಫ್ಟ್‌ ಇನ್‌ಚಾರ್ಜ್ ಅರ್ಚಕರನ್ನು ಹೊರತುಪಡಿಸಿ ಇತರ ಯಾವುದೇ ಅರ್ಚಕರು, ವಿಐಪಿಗಳು ಅಥವಾ ಭಕ್ತರಿಗೆ ಗರ್ಭಗುಡಿಯೊಳಗೆ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ.

ಗೋಕರ್ಣ: ಕರ್ನಾಟಕದ ಅತ್ಯಂತ ಆರಾಧಿತ ದೇವಾಲಯ ಸಂಪ್ರದಾಯಗಳಲ್ಲಿ ಒಂದಕ್ಕೆ ತೆರೆ ಬಿದ್ದಿದೆ. ಶತಮಾನಗಳಷ್ಟು ಹಳೆಯ 'ಸ್ಪರ್ಶ ದರ್ಶನ' ಸಂಪ್ರದಾಯಕ್ಕೆ ಪ್ರಸಿದ್ಧವಾಗಿದ್ದ ಗೋಕರ್ಣದ ಮಹಾಗಣಪತಿ ದೇವಸ್ಥಾನದಲ್ಲಿ, ಪ್ರಾಚೀನ ಶಿಲಾ ವಿಗ್ರಹವನ್ನು ಹಾನಿಯಿಂದ ರಕ್ಷಿಸುವ ಉದ್ದೇಶದಿಂದ ಭಕ್ತರು ದೇವರ ವಿಗ್ರಹವನ್ನು ಸ್ಪರ್ಶಿಸಿ ಪೂಜೆ ಸಲ್ಲಿಸುವ ಪದ್ಧತಿಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಲಾಗಿದೆ.

ಭಕ್ತರು ವರ್ಷಗಳ ಕಾಲ ನಿರಂತರವಾಗಿ ವಿಗ್ರಹವನ್ನು ಸ್ಪರ್ಶಿಸುತ್ತಿದ್ದ ಪರಿಣಾಮ, ವಿಗ್ರಹದ ಕೈಗಳು, ಭುಜಗಳು ಹಾಗೂ ಎದೆ ಭಾಗದಲ್ಲಿ ಸವೆತದ ಲಕ್ಷಣಗಳು ಗೋಚರಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಜರಾಯಿ ಇಲಾಖೆ ಹಾಗೂ ದೇವಸ್ಥಾನದ ಅರ್ಚಕರು ಜಂಟಿಯಾಗಿ ಈ ತೀರ್ಮಾನ ಕೈಗೊಂಡಿದ್ದಾರೆ.

ಗೋಕರ್ಣದ ಪವಿತ್ರ ಕ್ಷೇತ್ರದಲ್ಲಿರುವ ಮಹಾಬಲೇಶ್ವರ ದೇವಸ್ಥಾನದ ಪಕ್ಕದಲ್ಲೇ ಇರುವ ಮಹಾಗಣಪತಿ ದೇವಸ್ಥಾನವು ಈ ಭಾಗದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.

ಎರಡು ಕೈಗಳನ್ನು ಹೊಂದಿರುವ ವಿಶಿಷ್ಟ ಗಜಾನನ ವಿಗ್ರಹವು ದೇಶದ ವಿವಿಧ ಭಾಗಗಳಿಂದ ಭಕ್ತರನ್ನು ಆಕರ್ಷಿಸುತ್ತಿದ್ದು, ವಿಗ್ರಹವನ್ನು ಸ್ಪರ್ಶಿಸಿ ಪ್ರಾರ್ಥಿಸಿದರೆ ಇಷ್ಟಾರ್ಥಗಳು ನೆರವೇರುತ್ತವೆ ಹಾಗೂ ಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿ ಇದೆ. ಆದರೆ ವಿಗ್ರಹವು ಕ್ರಮೇಣ ಹಾಳಾಗುತ್ತಿರುವ ಬಗ್ಗೆ ಹೆಚ್ಚಿದ ಆತಂಕದ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ 'ಸ್ಪರ್ಶ ದರ್ಶನ' ಪದ್ಧತಿಯನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು.

ಆರತಿಯನ್ನು ಗರ್ಭಗುಡಿಯ ಹೊರಗಡೆಯಿಂದಲೇ ನೆರವೇರಿಸಬಹುದು. ಮುಂದಿನ ಆದೇಶದವರೆಗೆ ಈ ನಿರ್ಬಂಧಗಳು ಜಾರಿಯಲ್ಲಿರಲಿವೆ ಎಂದು ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತೆ ಸುಧಾ ತಲವಾರ ತಿಳಿಸಿದ್ದಾರೆ.

ಸಾವಿರಾರು ವರ್ಷಗಳಷ್ಟು ಹಳೆಯದಾದ ಈ ವಿಗ್ರಹವು ನಿರಂತರ ಸ್ಪರ್ಶದಿಂದ ಸವೆದು ಹೋಗುತ್ತಿರುವುದರಿಂದ, ವಿಗ್ರಹವನ್ನು ಸ್ಪರ್ಶಿಸಿ ಪೂಜೆ ಸಲ್ಲಿಸುವುದು ಮತ್ತು ದರ್ಶನ ಪಡೆಯುವುದನ್ನು ನಿಷೇಧಿಸಬೇಕು ಎಂದು ಸ್ಥಳೀಯ ನಿವಾಸಿಗಳು ಸೇರಿದಂತೆ ಅನೇಕ ಭಕ್ತರು ಬೇಡಿಕೆ ಸಲ್ಲಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: Cricket Finalನಲ್ಲಿ ಶ್ರೀಲಂಕಾ ಮಣಿಸಿ ಇತಿಹಾಸ ಬರೆದ ಭಾರತ ಮಹಿಳಾ ತಂಡ, ಚಿನ್ನದ ಬೇಟೆ!

‘ಡಿಕೆಶಿಗಿಂತ 4 ಪಟ್ಟು ಹೆಚ್ಚು ಸಂಪತ್ತು HDK ಬಳಿ ಇದೆ, ಏರ್​ಪೋರ್ಟ್ ರಸ್ತೆ, ನೆಲಮಂಗಲದಲ್ಲೂ ಆಸ್ತಿ ಇದೆ; ಇದೆಲ್ಲ ಎಲ್ಲಿಂದ ಸಂಪಾದನೆ ಮಾಡಿದರು?

60 ಎಸೆತ, 62 ರನ್; ಜಪಾನ್ ವಿರುದ್ಧ ಭಾರತಕ್ಕೆ 2 ರನ್ ರೋಚಕ ಜಯ

ಇದೊಂದು ಕೆಲಸ ಮಾಡಿದ್ರೆ, ಮುಂದಿನ ಸಾಂಕ್ರಾಮಿಕದಲ್ಲಿ 27 ಲಕ್ಷಕ್ಕೂ ಅಧಿಕ ಜನರ ಜೀವ ಉಳಿಸಬಹುದು: ಅಧ್ಯಯನ

ಕರ್ನಾಟಕದ 4 ನಾಲ್ಕು MLC ಸ್ಥಾನಗಳಿಗೆ ಚುನಾವಣೆ ಘೋಷಣೆ; ನಾಲ್ಕು ರಾಜ್ಯಗಳ 28 ಪರಿಷತ್ ಚುನಾವಣೆಗೆ ಮುಹೂರ್ತ ಫಿಕ್ಸ್ ಮಾಡಿದ ಆಯೋಗ