ನಮ್ಮ ಮೆಟ್ರೋ 
ರಾಜ್ಯ

ನಮ್ಮ ಮೆಟ್ರೋ ಮತ್ತಷ್ಟು ದುಬಾರಿ; ಪ್ರಯಾಣಿಕರಿಗೆ ಬಿಗ್ ಶಾಕ್: ಶೇ.12ರಷ್ಟು ದರ ಏರಿಕೆಗೆ BMRCL ಪ್ರಸ್ತಾಪ

ಬಿಎಂಆರ್‌ಸಿಎಲ್ ಹೊಸ ಮಾದರಿಯಲ್ಲಿ ಮೆಟ್ರೋ ಪ್ರಯಾಣ ದರ ಏರಿಕೆ ಮಾಡುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದು, ಶೇ.12ರಷ್ಟು ದರ ಏರಿಕೆ ಮಾಡುವ ಬಗ್ಗೆ ಪ್ರಸ್ತಾಪಿಸಿದೆ.

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲ್‌ ಕಾರ್ಪೋರೇಷನ್‌ ಲಿಮಿಟೆಡ್‌(ಬಿಎಂಆರ್ ಸಿಎಲ್) ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್ ನೀಡುತ್ತಿದ್ದು, ಮತ್ತೆ ದರ ಏರಿಕೆಯಾಗುವ ಸಾಧ್ಯತೆಯಿದೆ.

ಬಿಎಂಆರ್‌ಸಿಎಲ್ ಹೊಸ ಮಾದರಿಯಲ್ಲಿ ಮೆಟ್ರೋ ಪ್ರಯಾಣ ದರ ಏರಿಕೆ ಮಾಡುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದು, ಮೂರು ವರ್ಷಗಳಿಗೊಮ್ಮೆ ಶೇ.12ರಷ್ಟು ದರ ಏರಿಕೆ ಮಾಡುವ ಬಗ್ಗೆ ಪ್ರಸ್ತಾಪಿಸಿದೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಸಲ್ಲಿಸಲಾದ ಪರಿಷ್ಕೃತ ವಿಸ್ತೃತ ಯೋಜನಾ ವರದಿಯಲ್ಲಿ ದರ ಏರಿಕೆಯ ಹೊಸ ಲೆಕ್ಕಾಚಾರವನ್ನು ಉಲ್ಲೇಖಿಸಲಾಗಿದೆ. ನಮ್ಮ ಮೆಟ್ರೋ 3 'ಎ' ಸರ್ಜಾಪುರ - ಹೆಬ್ಬಾಳ ಮಾರ್ಗದ ಪರಿಷ್ಕೃತ ವಿಸ್ತೃತ ಯೋಜನಾ ವರದಿಯಲ್ಲಿ ಯೋಜನೆ ಪೂರ್ಣಗೊಳ್ಳುವ 2033ರ ವೇಳೆಗೆ ಆರ್ಥಿಕ ಆಂತರಿಕ ಆದಾಯ ದರವನ್ನು ಕಾಯ್ದುಕೊಳ್ಳಲು ಪ್ರತಿ 2 ರಿಂದ 3 ವರ್ಷಗಳಿಗೊಮ್ಮೆ ಪ್ರಯಾಣ ದರ ಪರಿಷ್ಕರಿಸುವ ಕುರಿತು ವಿವಿಧ ಮಾದರಿಗಳನ್ನು ಕೇಂದ್ರಕ್ಕೆ ಬಿಎಂಆರ್ ಸಿಎಲ್ ಪ್ರಸ್ತಾಪಿಸಿದೆ.

ಬಿಎಂಆರ್‌ಸಿಎಲ್ ಅಂದಾಜಿನಂತೆ 2033ರಲ್ಲಿ ಈ ಮಾರ್ಗದಲ್ಲಿ ಪ್ರತಿದಿನ 6.44 ಲಕ್ಷ ಪ್ರಯಾಣಿಕರು ಸಂಚರಿಸಲಿದ್ದು, ವರ್ಷಕ್ಕೆ 2,164 ಕೋಟಿ ಆದಾಯ ಹರಿದುಬರಲಿದೆ. ಪ್ರತಿ 3 ವರ್ಷಕ್ಕೊಮ್ಮೆ ಶೇ. 12ರಷ್ಟು ದರ ಪರಿಷ್ಕರಣೆಯಾದರೆ 2033ರ ವೇಳೆಗೆ ಗರಿಷ್ಠ ಪ್ರಯಾಣ ದರ 126ಕ್ಕೆ ತಲುಪುವ ಸಾಧ್ಯತೆಯಿದೆ ಎಂದು ಉಲ್ಲೇಖ ಮಾಡಲಾಗಿದೆ.

ಈ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದರೆ, ಬಳಿಕ ಇದನ್ನು ದರ ಪರಿಷ್ಕರಣಾ ಸಮತಿಯೂ ಪರಿಶೀಲನೆ ಮಾಡಬೇಕಿದೆ. ಬಳಿಕವಷ್ಟೇ ಗ್ರೀನ್ ಸಿಗ್ನಲ್ ಸಿಗಲಿದೆ. ಅಂತಿಮ ನಿರ್ಧಾರ ದರ ಪರಿಷ್ಕರಣೆ ಸಮತಿಯದ್ದೇ ಆಗಿರಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

₹2,000ಕ್ಕಿಂತ ಹೆಚ್ಚಿನ UPI ಪಾವತಿಗಳಿಗೆ ಶೇ. 0.4ರಷ್ಟು MDR ಶುಲ್ಕ! ಅಕ್ಟೋಬರ್ 15 ರಿಂದ ಜಾರಿ

India vs Afghanistan: ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; ಅಫ್ಘಾನ್ ವಿರುದ್ಧದ T20 ಸರಣಿ ಭಾರತ ಕೈವಶ!

India vs Afghanistan: ಹೊಸ ಇತಿಹಾಸ ಸೃಷ್ಟಿಸಿದ ಜಸ್ಪ್ರೀತ್ ಬುಮ್ರಾ; ವಿಶ್ವದಲ್ಲೇ ಈ ಸಾಧನೆ ಮಾಡಿದ ಮೊದಲ ಆಟಗಾರ!

ಮೋದಿಗೆ 'ಭಾರತ ರತ್ನ'?: Modi ಹೆಸರಲ್ಲಿ ಒಂದು ತಿಂಗಳು ಸೇವಾ ಸಂಕಲ್ಪ ಅಭಿಯಾನ: ಕೇಂದ್ರ ಸಚಿವ ಜೆ.ಪಿ ನಡ್ಡಾ

ದ್ವಿಪಕ್ಷೀಯ ಮಾತುಕತೆ ವೇಳೆ ಚೀನಾ ಅಧ್ಯಕ್ಷ ಜಿನ್ಪಿಂಗ್ ಗೆ ಮೋದಿ ಹೇಳಿದ್ದೇನು? MEA ಹೇಳಿದ್ದಿಷ್ಟು...