ಬೆಳೆ ಹಾನಿ ಪರಿಶೀಲಿಸಿದ ಆರ್ ಅಶೋಕ್ ನೇತೃತ್ವದ ತಂಡ 
ರಾಜ್ಯ

ಚಿತ್ರದುರ್ಗ ಜಿಲ್ಲೆಯಲ್ಲಿ ಬೆಳೆ ಹಾನಿ ಪರಿಶೀಲನೆ: ರೈತರ ಜಮೀನುಗಳಲ್ಲಿ ಸರ್ವೆಗೆ ಇಲ್ಲಿಯವರೆಗೂ ಯಾವುದೇ ಅಧಿಕಾರಿ ಬಂದಿಲ್ಲ- ಆರ್. ಅಶೋಕ್ ಕಿಡಿ!

ಹಿರಿಯೂರು ತಾಲೂಕಿನ ಮೇಟಿಕುರ್ಕೆ ಮತ್ತು ಸೂರಗೊಂಡನಹಳ್ಳಿ ಗ್ರಾಮಗಳಲ್ಲಿ ಒಣಗಿ ಹೋಗಿರುವ ಸೂರ್ಯಕಾಂತಿ, ಶೇಂಗಾ ಹಾಗೂ ಜೋಳದ ಬೆಳೆಗಳನ್ನು ವೀಕ್ಷಿಸಿದ ನಿಯೋಗವು, ಸಂಕಷ್ಟದಲ್ಲಿರುವ ರೈತರಿಂದ ನೇರವಾಗಿ ಮಾಹಿತಿ ಸಂಗ್ರಹಿಸಿತು.

ಚಿತ್ರದುರ್ಗ: ಜಿಲ್ಲೆಯಲ್ಲಿ ತೀವ್ರ ಮಳೆ ಅಭಾವದಿಂದ ಭೀಕರ ಬರ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದ ಬಿಜೆಪಿ ಅಧ್ಯಯನ ನಿಯೋಗವು ಇಂದು ಜಿಲ್ಲೆಯ ವಿವಿಧ ತಾಲೂಕುಗಳಿಗೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲನೆ ನಡೆಸಿತು.

ಹಿರಿಯೂರು ತಾಲೂಕಿನ ಮೇಟಿಕುರ್ಕೆ ಮತ್ತು ಸೂರಗೊಂಡನಹಳ್ಳಿ ಗ್ರಾಮಗಳಲ್ಲಿ ಒಣಗಿ ಹೋಗಿರುವ ಸೂರ್ಯಕಾಂತಿ, ಶೇಂಗಾ ಹಾಗೂ ಜೋಳದ ಬೆಳೆಗಳನ್ನು ವೀಕ್ಷಿಸಿದ ನಿಯೋಗವು, ಸಂಕಷ್ಟದಲ್ಲಿರುವ ರೈತರಿಂದ ನೇರವಾಗಿ ಮಾಹಿತಿ ಸಂಗ್ರಹಿಸಿತು.

ಬಳಿಕ ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ಥಳೀಯ ಇಲಾಖೆಗಳು ವಾಸ್ತವಿಕವಾಗಿ ಕ್ಷೇತ್ರ ಮಟ್ಟದ ಸಮೀಕ್ಷೆಗಳನ್ನು ನಡೆಸುವ ಬದಲು ಕೇವಲ ಕಚೇರಿಗಳಿಂದಲೇ ಕಾರ್ಯನಿರ್ವಹಿಸುತ್ತಿವೆ ಎಂದು ಆರೋಪಿಸಿದರು. ಕ್ಷೇತ್ರ ಪರಿಶೀಲನೆಯ ವೇಳೆ ಆಡಳಿತಾತ್ಮಕ ವೈಫಲ್ಯಗಳು ಕಂಡುಬಂದಿರುವುದಾಗಿ ತಿಳಿಸಿದರು.

ರೈತರು ಸಂಕಷ್ಟದಲ್ಲಿದ್ದಾರೆ. ನಾನು ಇಂದು ಖುದ್ದಾಗಿ ಕ್ಷೇತ್ರಕ್ಕೆ ಭೇಟಿ ನೀಡಿದ್ದೇನೆ. ಮಳೆಯಾಗಿಲ್ಲ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ತಹಸೀಲ್ದಾರ್ ಇಲ್ಲಿದ್ದರೂ, ರೈತರ ಜಮೀನುಗಳ ಸಮೀಕ್ಷೆ ನಡೆಸಲು ಇದುವರೆಗೂ ಯಾವುದೇ ಅಧಿಕಾರಿ ಬಂದಿಲ್ಲ. ಅವರು ಕಚೇರಿಯಲ್ಲಿ ಕುಳಿತುಕೊಂಡೇ ವರದಿಗಳನ್ನು ಸಿದ್ಧಪಡಿಸುತ್ತಿದ್ದಾರೆ. ಇದರಿಂದಾಗಿ ಅನೇಕ ರೈತರು ಯೋಜನೆಯಿಂದ ವಂಚಿತರಾಗಲಿದ್ದಾರೆ. ಈ ಜಿಲ್ಲೆಯಲ್ಲಿ ವಿಮೆಯ ಕುರಿತು ಸಾಕಷ್ಟು ಪ್ರಚಾರ ನಡೆದಿಲ್ಲ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಶೇಕಡಾ 81 ರಷ್ಟು ಬಿತ್ತನೆ ಕಾರ್ಯವೇ ನಡೆದಿಲ್ಲ ಎಂದು ವರದಿಯಾಗಿದೆ. ಕೂಡಲೇ ಚಿತ್ರದುರ್ಗ ಜಿಲ್ಲೆಯನ್ನು ಮೊದಲ ಆದ್ಯತೆಯಾಗಿ ತಕ್ಷಣವೇ 'ಬರಪೀಡಿತ' ಎಂದು ಘೋಷಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಕೇಂದ್ರದ ಎಸ್‌ಡಿಆರ್‌ಎಫ್ (SDRF) ನಿಧಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಮ್ಯಾಚಿಂಗ್ ಗ್ರಾಂಟ್ ಸೇರಿಸಿ ತಕ್ಷಣವೇ ರೈತರಿಗೆ ಪರಿಹಾರ ವಿತರಿಸಬೇಕು, ಜಾನುವಾರುಗಳಿಗೆ ಮೇವಿನ ಅಭಾವ ತಪ್ಪಿಸಲು ಗೋಶಾಲೆಗಳನ್ನು ತೆರೆಯಬೇಕು ಹಾಗೂ ಕುಡಿಯುವ ನೀರಿನ ಅಭಾವ ನೀಗಿಸಲು ಪ್ರತಿಯೊಂದು ತಾಲೂಕಿಗೆ ಕನಿಷ್ಠ 50 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ, ಕಾವೇರಿ ನೀರು ಹಂಚಿಕೆ ಹಾಗೂ ಜಲಾಶಯಗಳ ನಿರ್ವಹಣೆ ಕುರಿತು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದ ಅವರು, ಇಂದಿನ ಪ್ರವಾಸದ ವಿಸ್ತೃತ ವರದಿಯನ್ನು ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಸಿ, ಮುಂಬರುವ ಶಾಸನಸಭೆಯ ಅಧಿವೇಶನದಲ್ಲಿ ನಿಲುವಳಿ ಸೂಚನೆ ತರಲಾಗುವುದು ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿದ್ಯಾರ್ಥಿಗಳ ಮೇಲೆ ಪೆಲ್ಲೆಟ್ ಗುಂಡಿನ ದಾಳಿ: ಶಾ ಅವರೇ ಆದೇಶ ನೀಡಿದ್ದಾರೆ, ಇಲ್ಲವೇ ಅವರು ಅಸಮರ್ಥ; ವಜಾಗೊಳಿಗೊಳಿಸಿ- ಪ್ರಧಾನಿಗೆ ರಾಹುಲ್ ಒತ್ತಾಯ

ನಾಳೆ ಮುಂಜಾನೆ 4.15ರ ಬ್ರಹ್ಮ ಮುಹೂರ್ತದಲ್ಲಿ 'Ramayana' ಟ್ರೇಲರ್ ಬಿಡುಗಡೆ!

ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಯಶಸ್ಸು ಗೌತಮ್ ಗಂಭೀರ್ ಮೇಲೆ ಒತ್ತಡ ಹೇರಲಿದೆ: RCB ಮಾಜಿ ಬ್ಯಾಟರ್ ಡಿವಿಲಿಯರ್ಸ್

ರಾಜ್ಯದಲ್ಲಿ SIR ಶಾಕ್! ಮತದಾರರ ಪಟ್ಟಿಯಿಂದ 84.31 ಲಕ್ಷ ಮಂದಿ ಡಿಲೀಟ್; ಬೆಂಗಳೂರಿನಲ್ಲಿಯೇ ಅತಿ ಹೆಚ್ಚು- ಚುನಾವಣಾ ಆಯೋಗ; Video

ಕಂಟೆಂಟ್ ಕ್ರಿಯೇಟರ್ ಆಗಲು ₹35 ಲಕ್ಷ ಸಂಬಳದ ಉದ್ಯೋಗ ತೊರೆದ ಟೆಕ್ಕಿ ದಂಪತಿ; ಒಂದೇ ವರ್ಷದಲ್ಲಿ ₹1 ಕೋಟಿಗೂ ಹೆಚ್ಚು ಆದಾಯ!